ಕೇರಳ (ಮಾ. 10) ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದ್ದು, ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ಗೆ ತಮ್ಮ ಪಕ್ಷದ ಹಿರಿಯನಾಯಕರು ರಾಜೀನಾಮೆ ನೀಡುವ ಮೂಲಕ ಶಾಕ್ ನೀಡಿದ್ದಾರೆ. ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಪಿಸಿ ಚಾಕೊ ಇಂದು ಕೈ ನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದು, ಇದೇ ವೇಳೆ ಪಕ್ಷದ ವಿರುದ್ಧ ಹಾಗೂ ಹೈ ಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ನಲ್ಲಿ ಯಾವುದೇ ಪ್ರಜಾಪ್ರಭುತ್ವ ಉಳಿದಿಲ್ಲ. ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ರಾಜ್ಯ ಕಾಂಗ್ರೆಸ್ ಸಮಿತಿಯೊಂದಿಗೆ ಚರ್ಚಿಸಲಾಗಿಲ್ಲ ಎಂದು ಅವರು ದೂರಿದ್ದಾರೆ. ಕಳೆದೊಂದು ವರ್ಷದಿಂದ ಪಕ್ಷದಲ್ಲಿ ಅಧ್ಯಕ್ಷರನ್ನು ಹೊಂದಿಲ್ಲ ಎಂಬುದನ್ನು ಕೂಡ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ಸಿಗರಾಗಿರುವುದು ಕಷ್ಟವಾಗಿದೆ. ಕೇರಳ ಕಾಂಗ್ರೆಸ್ನಲ್ಲಿ ಎರಡು ಗುಂಪಿದ್ದು, ಅದರಲ್ಲಿ ನೀವು ಗುರುತಿಸಿಕೊಂಡಿದ್ದರೆ ಮಾತ್ರ ಬದುಕುಳಿಯಬಹುದು ಎಂದಿದ್ದಾರೆ.
ಮಾಜಿ ಲೋಕಸಭಾ ಸದಸ್ಯರಾಗಿರುವ ಚಾಕೊ, ತಮ್ಮ ರಾಜೀನಾಮೆಯಿಂದಲಾದರೂ ಪಕ್ಷ ಕಣ್ತೆರದು ಕಾರ್ಯನಿರ್ವಹಿಸಲಿ ಎಂದು ಆಶಿಸಿದ್ದಾರೆ. ಕೇರಳ ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆ ನಗೆ ಅಸಮಾಧಾನ ಇದೆ, ಕಾಂಗ್ರೆಸ್ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ನನ್ನ ರಾಜೀನಾಮೆಯಿಂದ ಆದರೂ ಪಕ್ಷ ಈ ಬಗ್ಗೆ ಗಮನಹರಿಸಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಏಪ್ರಿಲ್ 6ರಿಂದ ಕೇರಳದಲ್ಲಿ ವಿಧಾನಸಭಾ ಮತದಾನ ಆರಂಭವಾಗಲಿದ್ದು, ಇದಕ್ಕೂ ಮುನ್ನ ನಡೆದಿರುವ ಈ ಬೆಳವಣಿಗೆ ಪಕ್ಷಕ್ಕೆ ಹೊಡೆತ ನೀಡಿದೆ.
ಕೇರಳ ಕಾಂಗ್ರೆಸ್ನಲ್ಲಿ ಉಮ್ಮನ್ಚಾಂಡಿ ನೇತೃತ್ವದ ಎ ಗುಂಪು ಮತ್ತು ರಮೇಶ್ ಚೆನ್ನಿಥಾಲಾ ನೇತೃತ್ವದ ಐ ಗುಂಪು ಕಾರ್ಯನಿರ್ವಹಿಸುತ್ತಿದೆ. ಈ ಗುಂಪುಗಳು ಹಿರಿಯ ನಾಯಕ ದಿ. ಕೆ ಕರುಣ್ಕರನ್ ಮತ್ತು ಹಿರಿಯ ನಾಯಕರ ಎಕೆ ಆಂಟನಿ ಕಾಲದಿಂದಲೂ ರಾಜ್ಯದ ಘಟಕದಲ್ಲಿ ಸಕ್ರಿಯವಾಗಿದೆ. 'ಎ' ಗುಂಪನ್ನು ಆಂಟನಿ ನಿರ್ವಹಿಸಿದರೆ, 'ಐ' ಗುಂಪಿನ ಸಾರಥಿ ಕರುನಾಕರನ್ ಆಗಿದ್ದರು.
ಇದನ್ನು ಓದಿ: ಮಗಳ ಮೇಲಿನ ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ ತಂದೆ ಅಪಘಾತದಲ್ಲಿ ಸಾವು
ಕಳೆದ ಕೆಲವು ದಿನಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತು ನಾನು ಚಿಂತಿಸುತ್ತಿದೆ. ನಾನು ಕೇರಳದಿಂದ ಬಂದಿದ್ದೇವೆ. ಅಲ್ಲಿ ಕಾಂಗ್ರೆಸ್ ಪಕ್ಷವಿಲ್ಲ ಅಲ್ಲಿರುವುದು ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಎ) ಪಕ್ಷ. ಈ ಎರಡು ಪಕ್ಷಗಳು ಕೆಪಿಸಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಮನ್ವಯ ಸಮಿತಿಯಾಗಿದೆ ಎಂದಿದ್ದಾರೆ.
ಪಕ್ಷದಲ್ಲಿನ ಈ ಗುಂಪುಗಾರಿಕೆ ವಿರುದ್ಧ ಹೈಕಮಾಂಡ್ನೊಂದಿಗಿನ ಹೋರಾಟ ಕೂಡ ಅಂತಿಮವಾಗಿದೆ. ಕೇರಳದಲ್ಲಿ ನಿರ್ಣಾಯಕ ಚುನಾವಣೆಯನ್ನು ಪಕ್ಷ ಎದುರಿಸುತ್ತಿದ್ದು, ಕಾಂಗ್ರೆಸ್ ಮರಳಿ ಬರಬೇಕೆಂದು ಜನರು ಬಯಸುತ್ತಿದ್ದಾರೆ. ಆದರೆ, ಕಾಂಗ್ರೆನ್ ಪ್ರಮುಖ ನಾಯಕರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಇದು ನಿಲ್ಲಬೇಕು ಎಂದು ನಾನು ಹೈ ಕಮಾಂಡ್ಗೆ ತಿಳಿಸುತ್ತೇನೆ. ಆದರೆ, ಹೈ ಕಮಾಂಡ್ ಈ ಎರಡೂ ಗುಂಪುಗಳ ಪ್ರಸ್ತಾಪಗಳನ್ನು ಸಹ ಸಮ್ಮತಿಸುತ್ತದೆ ಎಂದು ಬೇಸರ ಹೊರಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ