News18 India World Cup 2019

ಮೀನು ಮಾರಿ ಖ್ಯಾತಿಗಳಿಸಿದ ಕೇರಳ ವಿದ್ಯಾರ್ಥಿನಿಗೆ ಅಪಘಾತ

news18
Updated:September 3, 2018, 4:15 PM IST
ಮೀನು ಮಾರಿ ಖ್ಯಾತಿಗಳಿಸಿದ ಕೇರಳ ವಿದ್ಯಾರ್ಥಿನಿಗೆ ಅಪಘಾತ
news18
Updated: September 3, 2018, 4:15 PM IST
ನ್ಯೂಸ್​ 18 ಕನ್ನಡ

ತ್ರಿಸ್ಸೂರು(ಸೆ.3): ಕಾಲೇಜ್​ ಸಮವಸ್ತ್ರದಲ್ಲೇ ಮೀನು ಮಾರಿ ರಾತ್ರೋ ರಾತ್ರಿ ಖ್ಯಾತಿಗಳಿಸಿದ ಕೇರಳ ಯುವತಿ ಹನನ್​ ಹಮೀದ್​ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಹಮೀದ್​ ಪ್ರಯಾಣಿಸುತ್ತಿದ್ದ ಕಾರ್​ ವಿದ್ಯುತ್​ ಕಂಬಕ್ಕೆ ಹೊಡೆದ ಪರಿಣಾಮವಾಗಿ ಆಕೆ ಎಡಗಾಲು, ಬೆನ್ನುಮೂಳೆ ಗಂಭೀರವಾಗಿ ಗಾಯಗೊಂಡಿದೆ. ಆಕೆಯನ್ನು ತ್ರಿಸ್ಸೂರಿನ ಮಾರ್ಡನ್​ ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಮೀದ್​ ಕಾಜಿಕೋಡ್​ನಲ್ಲಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಹೋಗಿ ಮರಳುವಾಗ ಈ ಘಟನೆ ನಡೆದಿದೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಅನಾಹುತ ಸಂಭವಿಸಿದೆ.

21 ವರ್ಷದ ಹಮೀನ್​ ಕಾಲೇಜು ಮುಗಿದ ಬಳಿಕ ಸಮವಸ್ತ್ರದಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದು ಈಕೆ ಟ್ರ

ತೊಡುಪುಜಾದಲ್ಲಿ ಇಡುಕಿಯ ಆಲ್​ ಅಜಾರ್​ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈಕೆಯನ್ನು ಟ್ರೋಲಿಗೆ ಒಳಗಾಗಿದ್ದಳು.  ಮೊದಲಿಗೆ ಸಿನಿಮಾ ಶೂಟಿಂಗ್​ಗಾಗಿ ಈ ರೀತಿ ಮಾಡುತ್ತಿದ್ದಾಳೆ​ ಎಂದು ಕೊಂಡಿದ್ದ ಜನರು ಈಕೆಯ ಚಲನಾವಲನ ಗಮನಿಸಿದಾಗ ಈಕೆ ನಿಜಕ್ಕೂ ಹೊಟ್ಟೆಪಾಡಿಗಾಗಿ ಮೀನು ಮಾರುತ್ತಿದ್ದಳು ಎಂಬುದು ತಿಳಿಯಿತು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಕೂಡ ಈಕೆಯನ್ನು ಕಚೇರಿಗೆ ಕರೆಯಿಸಿ ಮಾತನಾಡಿದ್ದರು.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...