HOME » NEWS » National-international » KERALA CM SAYS THAT TOTAL 345 POSITIVE CASES IN STATE SO FAR GNR

ಕೇರಳದಲ್ಲಿ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆ: ಇಬ್ಬರು ಸಾವು, 84 ಮಂದಿ ಸಂಪೂರ್ಣ ಗುಣಮುಖ

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಏ.14ರವರೆಗೂ ಕೇರಳ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಕೇರಳದಲ್ಲಿ ಮತ್ಯಾವ ಸೇವೆಯೂ ಲಭ್ಯವಿರುವುದಿಲ್ಲ. ರಾಜ್ಯದ ಗಡಿಭಾಗಗಳಲ್ಲಿ ನಿರ್ಬಂಧ ಹಾಕಲಾಗಿದೆ. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪೆಟ್ರೋಲ್,​ ಎಲ್​ಪಿಜಿ ಗ್ಯಾಸ್​ ದೊರೆಯುತ್ತದೆ.

news18-kannada
Updated:April 8, 2020, 6:55 PM IST
ಕೇರಳದಲ್ಲಿ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆ: ಇಬ್ಬರು ಸಾವು, 84 ಮಂದಿ ಸಂಪೂರ್ಣ ಗುಣಮುಖ
ಸಿಎಂ ಪಿಣರಾಯಿ ವಿಜಯನ್.
  • Share this:
ನವದೆಹಲಿ(ಏ.08): ಕೇರಳದಲ್ಲಿ ಇದುವರೆಗೂ 345 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಸಿಎಂ ಪಿಣರಾಯ್​​ ವಿಜಯನ್​​ ನೇತೃತ್ವದ ಎಡ ಸರ್ಕಾರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಜತೆಗೆ ಕೊರೋನಾ ವೈರಸ್​ಗೆ ಇಬ್ಬರು ಬಲಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಏ.14ರವರೆಗೂ ಕೇರಳ ಲಾಕ್​ಡೌನ್​ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಕೇರಳದಲ್ಲಿ ಮತ್ಯಾವ ಸೇವೆಯೂ ಲಭ್ಯವಿರುವುದಿಲ್ಲ. ರಾಜ್ಯದ ಗಡಿಭಾಗಗಳಲ್ಲಿ ನಿರ್ಬಂಧ ಹಾಕಲಾಗಿದೆ. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪೆಟ್ರೋಲ್,​ ಎಲ್​ಪಿಜಿ ಗ್ಯಾಸ್​ ದೊರೆಯುತ್ತದೆ.

ರಾಜ್ಯದ ಎಲ್ಲಾ ರೆಸ್ಟೋರೆಂಟ್​ಗಳನ್ನು ಮುಚ್ಚಲಾಗಿದೆ. ಆದರೆ ಹೋಮ್ ಡೆಲಿವರಿ ಸೌಲಭ್ಯ ಇರುತ್ತದೆ. ಅಗತ್ಯ ವಸ್ತುಗಳ ವಿತರಣೆ ಲಭ್ಯವಿರುತ್ತದೆ. ಸಾರ್ವಜನಿಕರು ಆದಷ್ಟು ಮನೆಯೊಳಗೆ ಇರುವಂತೆ ಕೇರಳ ಸಿಎಂ ಮನವಿ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಬೇರೆ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರನ್ನು 14 ದಿನ ಕಡ್ಡಾಯವಾಗಿ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಿಂದ ದೆಹಲಿಯ ನಿಜಾಮುದ್ದೀನ್ ಸಭೆಗೆ ಹೋಗಿದ್ದವರು 1300 ಜನ; ಸರ್ಕಾರದಿಂದ ಅಧಿಕೃತ ಮಾಹಿತಿ

ಇದುವರೆಗೂ 345 ಕೋವಿಡ್​​​-19 ರೋಗಿಗಳ ಪೈಕಿ 84 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಚ್​​​ ಆಗಿದ್ದಾರೆ.
First published: April 8, 2020, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories