ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

news18
Updated:September 2, 2018, 5:30 PM IST
ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್
news18
Updated: September 2, 2018, 5:30 PM IST
ನ್ಯೂಸ್ 18 ಕನ್ನಡ 

ತಿರುವಂತಪುರಂ ( ಸೆ. 2) :  ವೈದ್ಯಕೀಯ ಚಿಕಿತ್ಸೆಗಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಅಮೆರಿಕಾಕ್ಕೆ ಪತ್ನಿ ಜತೆ ತೆರಳಿದರು.

ಅಮೇರಿದಲ್ಲಿರುವ ಮೆಯೋ ಕ್ಲಿನಿಕ್​ಗೆ  73 ವರ್ಷದ ಪಿಣರಾಯಿ ವಿಜಯನ್ ಅವರು ಚಿಕಿತ್ಸೆಗಾಗಿ ದಾಖಲಾಗಲಿದ್ದಾರೆ. ಈ ಹಿಂದೆ ನಿಗದಿಯಾದ ಆಗಸ್ಟ್ 19 ರಂದು ಅವರು ಅಮೆರಿಕಕ್ಕೆ ತೆರಳಬೇಕಿತ್ತು. ಆಸಮಯದಲ್ಲಿ ಕೇರಳ ರಾಜ್ಯದಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದ ಕಾರಣ ಪ್ರವಾಸವನ್ನು ಮುಂದೂಡಿದ್ದರು. ಮಾರ್ಚ್ 3 ರಂದು ಚೈನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ದಾಖಲಾಗಿದ್ದರು.

ಸಿಎಂ ಪಿಣರಾಯಿ ವಿಜಯನ್ ಅವರು ಮೂರು ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವ ಕಾಯಿಲೆಗೆ ಮುಖ್ಯಮಂತ್ರಿಳು ಚಿಕಿತ್ಸೆ ಪಡೆದುಕೊಳ್ಳತ್ತಿದ್ದಾರೆ ಎಂಬ ಮಾಹಿತಿ ನೀಡಲು ನಿರಾಕರಿಸಿದೆ.

ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸಂಪುಟಕ್ಕೆ ಮುರುಸೇರ್ಪಡೆಯಾದ ಸಚಿವ ಇ.ಪಿ.ಜಯರಾಜನ್ ಅವರು ಸಚಿವ ಸಂಪುಟ ಸಭೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ದೇಣಿಗೆಯನ್ನು ಸ್ವೀಕರಿಸಲಿದ್ದಾರೆ.

ಕೇರಳ ರಾಜ್ಯಪಾಲ ಪಿ. ಸದಾಶಿವಂ ಅವರನ್ನು ಶನಿವಾರ ರಾಜ್ಯಭವನದಲ್ಲಿ ಭೇಟಿಯಾದ ಸಿಎಂ ಪಿಣರಾಯ ವಿಜಯನ್ ಅವರು ಪ್ರವಾಸದ ಕುರಿತು ಮಾಹಿತಿ ನೀಡಿದ್ದರು. ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಲಾದ ಪರಿಹಾರ ಕಾರ್ಯದ ಪುನರ್​ ನಿರ್ಮಾಣ ಕೆಲಸಗಳ ಬಗ್ಗೆ ವಿವರಣೆ ನೀಡಿದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ