Christian Priest: ಚರ್ಚ್ನೊಳಗೆ ಹದಿಹರೆಯದ ಹುಡುಗರ ಮೇಲೆ ದೌರ್ಜನ್ಯ! ಪಾದ್ರಿಗೆ 18 ವರ್ಷ ಜೈಲು ಶಿಕ್ಷೆ
ಪ್ರತಿಷ್ಠಿತ ಚರ್ಚ್ನ ಫಾದರ್ ಒಬ್ಬರು ಲೈಂಗಿಕ ದೌರ್ಜನ್ಯ (Harassment) ಎಸಗಿದ್ದಾರೆ. ಅದೂ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿರುವ ಹುಡುಗರ (Boys) ಮೇಲೆ. ಇದೀಗ ಮಾಡಿದ ತಪ್ಪಿಗೆ ಆತನಿಗೆ 18 ವರ್ಷ ಕಠಿಣ ಕಾರಾಗೃಹ ಶಿಕ್ಷೆ (imprisonment) ವಿಧಿಸಿ, ಕೇರಳ ಹೈಕೋರ್ಟ್ (Kerala High Court) ಆದೇಶಿಸಿದೆ.
ಕೇರಳ: ಚರ್ಚ್ನ (Church) ಪಾದ್ರಿಗಳು (Father) ಎಂದರೆ ದೇವರದ್ದೇ (God) ಸ್ವರೂಪ ಅಂತ ಜನಸಾಮಾನ್ಯರು ತಿಳಿದು ಕೊಳ್ಳುತ್ತಾರೆ. ನಮ್ಮ ಕಷ್ಟ, ಹರಕೆ ಅವರಿಗೆ ಹೇಳಿದರೆ ಅವರ ಮೂಲಕ ದೇವರನ್ನು ತಲುಪುತ್ತೆ ಅಂತ ನಂಬುತ್ತಾರೆ. ಯೇಸುವಿನ (Jesus) ಅನುಯಾಯಿಗಳು (Followers), ಕ್ರಿಶ್ಚಿಯನ್ (Christian) ಧರ್ಮದ ಜನರು ತಪ್ಪು ಮಾಡಿದಾಗ, ಅವರನ್ನು ತಿದ್ದಿ, ಬುದ್ದಿ ಹೇಳಿ, ಸರಿ ದಾರಿಗೆ ತರಬೇಕಾದ ಜವಾಬ್ದಾರಿ ಫಾದರ್ಗಳ ಮೇಲಿರುತ್ತದೆ. ಆದರೆ ಅಂತಹ ಮಹತ್ವದ ಸ್ಥಾನದಲ್ಲಿರುವ ಫಾದ್ರಿಗಳೇ ತಪ್ಪು ಮಾಡಿದರೆ? ಕೇರಳದಲ್ಲಿ (Kerala) ಆಗಿದ್ದೂ ಅದೇ, ಪ್ರತಿಷ್ಠಿತ ಚರ್ಚ್ನ ಫಾದರ್ ಒಬ್ಬರು ಲೈಂಗಿಕ ದೌರ್ಜನ್ಯ (Harassment) ಎಸಗಿದ್ದಾರೆ. ಅದೂ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿರುವ ಹುಡುಗರ (Boys) ಮೇಲೆ. ಇದೀಗ ಮಾಡಿದ ತಪ್ಪಿಗೆ ಆತನಿಗೆ 18 ವರ್ಷ ಕಠಿಣ ಕಾರಾಗೃಹ ಶಿಕ್ಷೆ (imprisonment) ವಿಧಿಸಿ, ಕೇರಳ ಹೈಕೋರ್ಟ್ (Kerala High Court) ಆದೇಶಿಸಿದೆ.
ಐದು ವರ್ಷಗಳ ಹಿಂದೆ ಬೆಳಕಿಗೆ ಬಂದಿದ್ದ ಪ್ರಕರಣ
5 ವರ್ಷಗಳ ಹಿಂದೆ ಕೊಲ್ಲಂ ಜಿಲ್ಲೆಯ ಸೆಮಿನರಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. 35 ವರ್ಷದ ಕ್ರಿಶ್ಚಿಯನ್ ಫಾದರ್ ಥಾಮಸ್ ಪರೆಕ್ಕುಳಂ, ಚೆನ್ನೈ ಮೂಲದ ಎಸ್ಡಿಎಂ ಮೈನರ್ ಸೆಮಿನರಿ ಸದಸ್ಯ, ಜಿಲ್ಲೆಯ ಪುಲ್ಲಮಲದಲ್ಲಿನ ಸೆಮಿನರಿಯೊಂದರ ವಿದ್ಯಾರ್ಥಿಗಳಾಗಿದ್ದ ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದೆ. ಐದು ವರ್ಷದ ಹಿಂದೆ ಆತ ರೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ.
ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಾಯ್ಬಿಟ್ಟಿದ್ಗ ಹುಡುಗರು
ಕ್ರಿಶ್ಚಿಯನ್ ಪಾದ್ರಿ ಥಾಮಸ್ ಪರೆಕ್ಕುಳಂನಿಂದ ದೌರ್ಜನ್ಯಕ್ಕೆ ಒಳಗಾದ ಹುಡುಗರು ಸುಮ್ಮನೆ ಇದ್ದರು. ಆದರೆ ಇದನ್ನು ಗಮನಿಸಿದ ಕೆಲವರು ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಿದ್ದರು. ಕಲ್ಯಾಣ ಸಮಿತಿ ಸದಸ್ಯರು ವಿಚಾರಣೆ ನಡೆಸಿದಾಗಿ ಆ ಹುಡುಗರು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಆರೋಪ ಹಾಗೂ ದೂರಿನ ಹಿನ್ನೆಲೆಯಲ್ಲಿ ಪಾದ್ರಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅಡಿ ಅಸ್ವಾಭಾವಿಕ ಅಪರಾಧಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಕಾಯಿದೆ, 2012ರ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತಪ್ಪಿಸಿಕೊಂಡು ಓಡಿ ಹೋಗಿದ್ದ ಪಾದ್ರಿ
ಆರೋಪಿ ಪಾದ್ರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆದರೆ, ಪೊಲೀಸರು ಅವರನ್ನು ಚೆನ್ನೈನಿಂದ ಬಂಧಿಸಿ, ಕೋರ್ಟ್ಗೆ ಹಾಜರು ಪಡಿಸಿದ್ದರು.
18 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್
ಇನ್ನು ಪಾದ್ರಿ ಎಸಗಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಕ್ಯಾಥೋಲಿಕ್ ಪಾದ್ರಿಗೆ 18 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮೂರು ಪ್ರಕರಣಗಳಲ್ಲಿ ತಲಾ ಐದು ವರ್ಷ ಮತ್ತು ನಾಲ್ಕನೇ ಪ್ರಕರಣದಲ್ಲಿ ಮೂರು ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಪ್ರತಿ ಪ್ರಕರಣಕ್ಕೂ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಇನ್ನು ಲೈಂಗಿಕ ದಾಳಿಯ ಸಂತ್ರಸ್ತರು ಅನುಭವಿಸಿದ ಆಘಾತವನ್ನು ಪರಿಗಣಿಸಿದ ನ್ಯಾಯಾಲಯವು ಸಂತ್ರಸ್ತರಿಗೆ ದೈಹಿಕ ಮತ್ತು ಮಾನಸಿಕ ಆಘಾತಕ್ಕೆ ಅನುಗುಣವಾಗಿ ಸೂಕ್ತ ಪರಿಹಾರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್ಎಸ್ಎ) ಶಿಫಾರಸು ಮಾಡಿದೆ. ಅವರಿಗೆ ಪುನರ್ವಸತಿ ಕಲ್ಪಿಸುವುದು ಅವಶ್ಯಕ" ಎಂದು ನ್ಯಾಯಾಲಯ ಹೇಳಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ