ಕೇರಳದಲ್ಲಿ ಈ ಬಾರಿ ಓಣಂ ಸಂಭ್ರಮವಿಲ್ಲ; ಹಬ್ಬದ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಘೋಷಿಸಿದ ಸರ್ಕಾರ

news18
Updated:August 14, 2018, 4:23 PM IST
ಕೇರಳದಲ್ಲಿ ಈ ಬಾರಿ ಓಣಂ ಸಂಭ್ರಮವಿಲ್ಲ; ಹಬ್ಬದ ಹಣವನ್ನು ಪ್ರವಾಹ ಸಂತ್ರಸ್ತರಿಗೆ ಘೋಷಿಸಿದ ಸರ್ಕಾರ
news18
Updated: August 14, 2018, 4:23 PM IST
ನ್ಯೂಸ್​18 ಕನ್ನಡ

ತಿರುವನಂತಪುರಂ (ಆ. 14):  ಕೇರಳ ರಾಜ್ಯದ ಪ್ರಮುಖ ಹಬ್ಬವಾದ ಓಣಂ ಆಚರಿಸಲು ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ತಮ್ಮ ಊರಿಗೆ ಮರಳುತ್ತಾರೆ. ಆದರೆ, ಈ ವರ್ಷ ಕೇರಳದಲ್ಲಿ ಓಣಂ ಹಬ್ಬವಿಲ್ಲ.

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಾವುಗಳು ಕೂಡ ಸಂಭವಿಸಿದೆ. ರಾಜ್ಯದ ಅನೇಕ ಹಳ್ಳಿಗಳು ಮುಳುಗಡೆಯಾಗಿದೆ. ಇದರಿಂದಾಗಿ ಈ ಬಾರಿಯ ಓಣಂ ಹಬ್ಬವನ್ನು ಸರ್ಕಾರ ಕ್ಯಾನ್ಸಲ್​ ಮಾಡಿದ್ದು, ಆ ಹಬ್ಬಕ್ಕಾಗಿ ಖರ್ಚು ಮಾಡಲು ಉದ್ದೇಶಿಸಿದ್ದ 30 ಕೋಟಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯ ಮೂಲಕ ಪ್ರವಾಹ ಸಂತ್ರಸ್ತರಿಗೆ ನೀಡಲು ಉದ್ದೇಶಿಸಲಾಗಿದೆ.

ಈ ಬಗ್ಗೆ ಇಂದು ಅಧಿಕೃತವಾಗಿ ಘೋಷಣೆ ಮಾಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್​, ರಾಜ್ಯಾದ್ಯಂತ ಓಣಂ ಹಬ್ಬವನ್ನು ಆಚರಿಸದಿರಲು ನಿರ್ಧರಿಸಲಾಗಿದೆ. ಆಗಸ್ಟ್​ 25ರಿಂದ ಒಂದು ವಾರಗಳ ಕಾಲ ನಡೆಸಲಾಗುತ್ತಿದ್ದ ಓಣಂ ಹಬ್ಬದ ಸಂಭ್ರಮವನ್ನು ಅನುಭವಿಸುವ ಪರಿಸ್ಥಿತಿಯಲ್ಲೂ ಕೇರಳದ ಜನತೆ ಇಲ್ಲ.

ನಮ್ಮ ರಾಜ್ಯದಲ್ಲಿ ಆಗಿರುವ ಪ್ರವಾಹ ಅತ್ಯಂತ ದೊಡ್ಡ ದುರಂತ. ಒಟ್ಟಾರೆ 444 ಹಳ್ಳಿಗಳು ಈ ಪ್ರವಾಹಕ್ಕೆ ಸಿಕ್ಕಿ ನಾಶವಾಗಿವೆ. ಓಣಂಗಾಗಿ ಮೀಸಲಿಟ್ಟಿದ್ದ ಹಣವನ್ನು ಈ ಪ್ರವಾಹದಲ್ಲಿ ಸಿಲುಕಿರುವ ಜನರ ಮೂಲಸೌಕರ್ಯಕ್ಕಾಗಿ ಬಳಸಲಾಗುವುದು. ಇದರ ಜೊತೆಗೆ ಬೇರೆಯವರ ಸಹಾಯವನ್ನು ಕೂಡ ಕೋರುತ್ತಿದ್ದೇವೆ. ನಮಗೆ ಈ ಆಘಾತದಿಂದ ಹೊರಬರಲು ಬಹಳ ಸಮಯ ಬೇಕಾಗುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್​ ತಿಳಿಸಿದ್ದಾರೆ.ಕಳೆದ ಒಂದು ವಾರದಿಂದ ಕೇರಳದಲ್ಲಿ ಸುರಿದ ಮಳೆಯಲ್ಲಿ 38 ಜನ ಸಾವನ್ನಪ್ಪಿದ್ದಾರೆ, 4 ಜನ ಕಾಣೆಯಾಗಿದ್ದಾರೆ. ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಅಧಿಕ ಜನ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ. ರಾಜ್ಯಮಟ್ಟದ ಬ್ಯಾಂಕರ್ಸ್​ ಕಮಿಟಿಯಯ ಅಧಿಕಾರಿಗಳನ್ನು ಸರ್ಕಾರ ಸಂಪರ್ಕಿಸಿದ್ದು, ಕೇಂದ್ರದಿಂದ ಬಿಡುಗಡೆಯಾಗಿರುವ ಪರಿಹಾರದ ಮೊತ್ತ ಯಾವಾಗ ಕೈಸೇರುತ್ತದೆ ಎಂಬ ಕುರಿತು ಚರ್ಚಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹಣದ ಅಗತ್ಯವಿದೆ ಎಂದು ಸಿಎಂ ಹೇಳಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ