ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ ಆಟೋ ಚಾಲಕ

ಎರಡು ತಿಂಗಳ ಹಿಂದೆ ಕಾಸರಗೋಡಿನ ಮತ್ತೊಬ್ಬ ಆಟೋ ರಿಕ್ಷಾ ಚಾಲಕನ ಮೇಲೆ ಹಲಸಿನ ಹಣ್ಣು ಬಿದ್ದು, ಸರ್ಜರಿಗಾಗಿ ಆಸ್ಪತ್ರೆ ಸೇರಿದಾಗ ಆ ಸಂಗತಿ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿತ್ತು.

ಹಲಸಿನ ಹಣ್ಣು

ಹಲಸಿನ ಹಣ್ಣು

  • Share this:
ಕೇರಳದಲ್ಲಿ ಇತ್ತೀಚೆಗೆ ನಡೆದಿರುವ ಅಪರೂಪದ ವಿಚಿತ್ರ ಘಟನೆಯೊಂದು ಹೀಗಿದೆ. ನಮ್ಮ ಪಾಡಿಗೆ ನಾವು ರಸ್ತೆಯಲ್ಲಿ ಸಾಗುತ್ತಿದ್ದರೆ, ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದರೆ ಏನೆನ್ನಬೇಕು? ವಿಚಿತ್ರ ಎನ್ನಬೇಕೆ ಅಥವಾ ಹಣೆಬರಹ ಎನ್ನಬೇಕೆ? ಇಂತದ್ದೇ ಗೊಂದಲದಲ್ಲಿದ್ದಾರೆ ಕೇರಳದ ಕೊಟ್ಟಾಯಂ ಸಮೀಪದ ಕಾಪಿಕಾಡ್ ನಿವಾಸಿ ಸುದರ್ಶನ್. ಏಕೆಂದರೆ ಅವರ ಜೊತೆ ಇಂತದ್ದೇ ವಿಲಕ್ಷಣ ಘಟನೆ ನಡೆದಿದೆ. ಹೌದು, ಭಾನುವಾರ ಮಧ್ಯಾಹ್ನ ರಸ್ತೆ ಬದಿಯ ಮರವೊಂದರಲ್ಲಿದ್ದ ಹಲಸಿನ ಹಣ್ಣು ನೇರವಾಗಿ ಆಟೋ ಮೇಲೆ ಬಿದ್ದು, ನಂತರ ಅವರ ತಲೆಯ ಮೇಲೆ ಬಿದ್ದು, 55 ವರ್ಷದ ಸುದರ್ಶನ್ ಗಾಯಗೊಂಡರು. ಮಧುರವೇಲಿ-ಕುರುಪಂತಾರ ರಸ್ತೆಯ ಪ್ಲಮೂದ್ ಜಂಕ್ಷನ್‍ನಲ್ಲಿ ಈ ಘಟನೆ ನಡೆದಿದ್ದು, ಹಣ್ಣು ಬಿದ್ದ ವೇಗಕ್ಕೆ ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಸುದರ್ಶನ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದರು. ಅವರ ಆಟೋರಿಕ್ಷಾದಲ್ಲಿ ಆಗ ಯಾವುದೇ ಪ್ರಯಾಣಿಕರು ಇರಲಿಲ್ಲ. ಕೆಲಸ ಮುಗಿಸಿ ಮನೆಯ ಕಡೆ ಹೋಗುತ್ತಿದ್ದರು.

ಹಾಗಂತ, ಪಾಪ, ಹಲಸಿನ ಹಣ್ಣಿನ ಮರದ ಕೆಳಗೆ ನಿಲ್ಲಬಾರದಿತ್ತು ಎಂದು ಬೇಸರ ಪಟ್ಟುಕೊಳ್ಳುವ ಹಾಗೂ ಇಲ್ಲ, ಏಕೆಂದರೆ ಸುದರ್ಶನ್ ಹಲಸಿನ ಹಣ್ಣಿನ ಮರದ ಕೆಳಗೆ ನಿಂತಿರಲಿಲ್ಲ. ಅಲ್ಲೇ ಹತ್ತಿರದಲ್ಲಿರುವ ಪಟ್ಟಣ ಕುರುಪಂತಾರದಿಂದ ಮಧುರವೇಲಿಗೆ ತಮ್ಮ ಆಟೋದಲ್ಲಿ ಮರಳುತ್ತಿದ್ದರು. ಅಲ್ಲೇ ರಸ್ತೆ ಬದಿಯಲ್ಲಿ ಇದ್ದ ಹಲಸಿನ ಮರದ ಹಣ್ಣು ಆಟೋರಿಕ್ಷಾದ ಛಾವಣಿಯ ಮೇಲೆ ಚಾಲಕನ ಸೀಟಿನ ನೇರಕ್ಕೆ ಬಿದ್ದು, ಆಟೋದ ಮೃದು ಛಾವಣಿಯನ್ನು ಭೇದಿಸಿಕೊಂಡು ಸುದರ್ಶನ್ ತಲೆಗೆ ಹೊಡೆದಿದೆ. ಅದರ ಪರಿಣಾಮವಾಗಿ ಅವರು ಪ್ರಜ್ಞೆತಪ್ಪಿ ರಸ್ತೆಗೆ ಬಿದ್ದರು.

Auto travel rates in Bangalore increase by at least Rs 25
ಸಾಂದರ್ಭಿಕ ಚಿತ್ರ


ಅದೃಷ್ಟವಶಾತ್ ಅವರ ವಾಹನ ನಿಯಂತ್ರಣ ತಪ್ಪಲಿಲ್ಲ. ಸ್ಥಳೀಯರು ಅವರನ್ನು ನೇರವಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಸುದರ್ಶನ್‌ಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ: Kareena Kapoor: ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಹೇಗಿತ್ತು ಲೈಂಗಿಕ ಜೀವನ? ಗುಟ್ಟು ರಟ್ಟು ಮಾಡಿದ ನಟಿಆ ಪ್ರದೇಶದಲ್ಲಿ ಎಲ್ಲೆಡೆ ಹಲಸಿನ ಮರಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಆದರೆ ಇಂತಹ ವಿಚಿತ್ರ ಘಟನೆ ಯಾವತ್ತೂ ವರದಿಯಾಗಿಲ್ಲ. ಎರಡು ತಿಂಗಳ ಹಿಂದೆ ಕಾಸರಗೋಡಿನ ಮತ್ತೊಬ್ಬ ಆಟೋ ರಿಕ್ಷಾ ಚಾಲಕನ ಮೇಲೆ ಹಲಸಿನ ಹಣ್ಣು ಬಿದ್ದು, ಸರ್ಜರಿಗಾಗಿ ಆಸ್ಪತ್ರೆ ಸೇರಿದಾಗ ಆ ಸಂಗತಿ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಆ ಡ್ರೈವರ್‌ಗೆ ಕೊರೋನಾ ಇರುವುದು ಅದೇ ಸಂದರ್ಭದಲ್ಲಿ ಪತ್ತೆಯಾಗಿತ್ತು.

ಕಾಸರಗೋಡಿನ ಬೇಲೂರು ನಿವಾಸಿಯೊಬ್ಬರು 2020ರ ಮೇ ತಿಂಗಳಲ್ಲಿ ಮರದಿಂದ ಹಲಸಿನ ಹಣ್ಣು ಕೀಳುತ್ತಿದ್ದಾಗ, ಒಂದು ಹಣ್ಣು ನೇರವಾಗಿ ಬಿದ್ದು, ಬೆನ್ನುಮೂಳೆಗೆ ಪೆಟ್ಟಾಗಿತ್ತು. ಅದಕ್ಕಾಗಿ ಸರ್ಜರಿ ಮಾಡಬೇಕಾಗಿ ಬಂದಾಗ, ಈಗಿನ ನಿಯಮಗಳ ಪ್ರಕಾರ ಕೋವಿಡ್ ಪರೀಕ್ಷೆ ಮಾಡಲಾಯಿತು. ಅದರ ಫಲಿತಾಂಶ ಪಾಸಿಟಿವ್ ಆಗಿತ್ತು. ಆಗ ಈ ಸಂಗತಿ ವಿಧಾನ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಆಗುವಂತ ಅಸ್ವಾಭಾವಿಕ ಅಪಘಾತಗಳ ಸಾವನ್ನು, ಕೋವಿಡ್ ಮರಣಗಳ ಅಡಿಯಲ್ಲಿ ಪಟ್ಟಿ ಮಾಡಬಾರದು ಎಂದು ಆರೋಗ್ಯ ಮಂತ್ರಿ ಅಸೆಂಬ್ಲಿಯಲ್ಲಿ ಹೇಳಿದ್ದರು.ಇದನ್ನೂ ಓದಿ: Rashmika Mandanna: ಹಾಟ್​ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ: ಇದರ ಹಿಂದಿದೆ ಒಂದು ಕಾರಣ..!ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ  ಕೇರಳದಲ್ಲಿ ಹಲಸಿನ ಹಣ್ಣಿನ ಮರಗಳನ್ನು ನೆಡುವುದು ಒಂದು ಟ್ರೆಂಡ್ ಆಗಿದೆ. ಅದಲ್ಲದೆ ಲ್ಯಾಟೆಕ್ಸ್‌ನಿಂದ ಬರುತ್ತಿರುವ ಆದಾಯ ಇಳಿಕೆಯಾಗುತ್ತಿರುವುದರಿಂದ ರಬ್ಬರ್ ತೋಟಗಳಲ್ಲಿ ಪರ್ಯಾಯವಾಗಿ ಹಲಸಿನ ಹಣ್ಣಿನ ಮರಗಳನ್ನು ನೆಡಲಾಗುತ್ತಿದೆ.


Published by:Anitha E
First published: