Kerala Assembly Election 2021: ಕೇರಳದಲ್ಲಿ ಸದಾನಂದಗೌಡರಿಂದ ಎರಡನೇ ಸುತ್ತಿನ ಚುನಾವಣಾ ಪ್ರಚಾರ 

ಚುನಾವಣಾ ಪ್ರಚಾರದಲ್ಲಿ ಡಿ.ವಿ.ಸದಾನಂದಗೌಡ

ಚುನಾವಣಾ ಪ್ರಚಾರದಲ್ಲಿ ಡಿ.ವಿ.ಸದಾನಂದಗೌಡ

ಒಕ್ಕೂಟ ವ್ಯವಸ್ಥೆಯಲ್ಲಿ ದೇಶ ಅಭಿವೃದ್ಧಿಯಾಗಬೇಕಾದರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಪರಸ್ಪರ ವಿಶ್ವಾಸ ಹಾಗೂ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ಎಲ್ಡಿಎಫ್ ಸರ್ಕಾರದ ಅಸಹಕಾರದಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೇಂದ್ರ ಸರ್ಕಾರ ಪ್ರಾಯೋಜಿತ ಅನೇಕ ಯೋಜನೆಗಳು ಕೇರಳದಲ್ಲಿ ಕುಂಠಿತಗೊಂಡಿವೆ ಎಂದು ಸದಾನಂದಗೌಡ ಆಪಾದಿಸಿದರು.

ಮುಂದೆ ಓದಿ ...
  • Share this:

ಕೊಟ್ಟಾಯಂ (ಏ. 2): ದಶಕಗಳಿಂದ ಎಡರಂಗ ಹಾಗೂ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳ ಭ್ರಷ್ಟಾಚಾರ, ದುರಾಡಳಿತದಿಂದ ಬಸವಳಿದಿರುವ ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.


ಕಳೆದ ವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ದುರಾಡಳಿತದ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದ ಸದಾನಂದಗೌಡ ಅವರು ಕೇರಳದಲ್ಲಿ ಗುರುವಾರ ಎನ್ ಡಿಎ ಪರವಾಗಿ ಎರಡನೇ ಸುತ್ತಿನ ಪ್ರಚಾರ ಕೈಗೊಂಡಿದ್ದರು.


ಕಂಜಿರಾಪಳ್ಳಿ ಮತ್ತಿತರ ಕಡೆಗಳಲ್ಲಿ ಗುರುವಾರ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಕೊಟ್ಟಾಯಮ್ಮಿನಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಸದಾನಂದಗೌಡ, ಕೇರಳದಲ್ಲಿ ಎನ್​ಡಿಎ ದಿನದಿಂದ ದಿನಕ್ಕೆ  ಬಲಗೊಳ್ಳುತ್ತಿದೆ. ಇದಕ್ಕೆ ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯೇ ಸಾಕ್ಷಿಯಾಗಿದೆ. ಆ ಚುನಾವಣೆಯಲ್ಲಿ ನಾವು ಪಡೆದ ಶೇಕಡಾವಾರು ಮತ 7ರಿಂದ 17ಕ್ಕೆ ಏರಿತು. ಈ ಚುನಾವಣೆಯಲ್ಲಿ ಏನಿಲ್ಲವೆಂದರೂ ಶೇಕಡಾ 35ರಷ್ಟು ಮತ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಕೇರಳಕ್ಕೆ ದೇಶದ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮುವ ಎಲ್ಲ ಅರ್ಹತೆಯೂ ಇದೆ. ಆದರೆ ಕಾಂಗ್ರೆಸ್ ಮತ್ತು ಎಡರಂಗ ಸರ್ಕಾರಗಳು ಕಳೆದ 70 ವರ್ಷಗಳಿಂದ ಸತತವಾಗಿ ನಡೆಸಿದ ದುರಾಡಳಿತದಿಂದ ರಾಜ್ಯ ಹಿಂದೆ ಬಿದ್ದಿದೆ. ಕಾನೂನು ಮತ್ತು ಸುವ್ಯವಸ್ಥೆ ತೀರಾನೇ ಹದಗೆಟ್ಟಿದೆ. ದ್ವೇಷದ ರಾಜಕಾರಣ ಹಾಸುಹೊಕ್ಕಾಗಿದೆ. ರಾಜಕೀಯ ಹತ್ಯೆಗಳು ಎಗ್ಗಿಲ್ಲದೆ ನಡೆದಿವೆ. ಜನ ಹಿಂಸಾ ರಾಜಕಾರಣದಿಂದ ಬೇಸತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ರಂಗಗಳಲ್ಲಿಯೂ ಕೇರಳವನ್ನು ಮುಂದೆಕ್ಕೆ ತರುತ್ತೇವೆ. ನಮಗೊಂದು ಅವಕಾಶ ನೀಡಿ ಎಂದು ಬಿಜೆಪಿ ನಾಯಕ ವಿನಂತಿಸಿದರು.


Covid-19 Vaccine: 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ಅಭಿಯಾನ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ


ಕೇರಳದಲ್ಲಿ “ಲವ್-ಜಿಹಾದ್” ಒಂದು ಪಿಡುಗಾಗಿ ಪರಿಣಮಿಸಿದೆ. ನಾವು ಅಧಿಕಾರಕ್ಕೆ ಬಂದರೆ ಇದರ ವಿರುದ್ಧ ಕಠಿಣ ಕಾನೂನು ರೂಪಿಸುತ್ತೇವೆ. ವಿಚಿತ್ರವೆಂದರೆ ಕೇರಳದಲ್ಲಿ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿಗಳು ಎಡಪಂಥೀಯರ ರಾಜಕೀಯ ಅಡ್ಡೆಗಳಾಗಿವೆ. ಇವಕ್ಕೆಲ್ಲ ಇತಿಶ್ರೀ ಹಾಕುತ್ತೇವೆ. ಕೇರಳ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ದಿನಂಪ್ರತಿ ವರದಿ ಮಾಡುತ್ತಿವೆ. ಮುಖ್ಯಮಂತ್ರಿ ಕಚೇರಿ ಆಶ್ರಯದಲ್ಲಿಯೇ ಚಿನ್ನ ಕಳ್ಳಸಾಗಣೆ ಆಗುತ್ತಿರುವ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿ, ಸ್ಪೀಕರ್, ಅರ್ಧ ಡಜನ್ ಮಂತ್ರಿಗಳ ಹೆಸರುಗಳು ತಳುಕಿಹಾಕಿಕೊಂಡಿವೆ. ಯುಡಿಎಫ್ ಅವಧಿಯಲ್ಲಿ ಸರಿತಾ ಚಾಲ್ತಿಯಲ್ಲಿದ್ದರೆ ಎಲ್ಡಿಎಫ್ ಕಾಲದಲ್ಲಿ ಸ್ವಪ್ನಾ ಚಾಲನೆಯಲ್ಲಿದ್ದಾರೆ ಎಂದು ಸದಾನಂದಗೌಡ ವ್ಯಂಗವಾಡಿದರು.


ಒಕ್ಕೂಟ ವ್ಯವಸ್ಥೆಯಲ್ಲಿ ದೇಶ ಅಭಿವೃದ್ಧಿಯಾಗಬೇಕಾದರೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಪರಸ್ಪರ ವಿಶ್ವಾಸ ಹಾಗೂ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ಎಲ್ಡಿಎಫ್ ಸರ್ಕಾರದ ಅಸಹಕಾರದಿಂದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಕೇಂದ್ರ ಸರ್ಕಾರ ಪ್ರಾಯೋಜಿತ ಅನೇಕ ಯೋಜನೆಗಳು ಕೇರಳದಲ್ಲಿ ಕುಂಠಿತಗೊಂಡಿವೆ ಎಂದು ಸದಾನಂದಗೌಡ ಆಪಾದಿಸಿದರು.


ಕೇಂದ್ರ ಸಚಿವರು ನಂತರ ಕಂಜಿರಾಪಳ್ಳಿ ಮತ್ತಿತರ ಕಡೆ ‘ರೋಡ್-ಶೋ’ ಮೂಲಕ ಎನ್ ಡಿಎ ಪರವಾಗಿ ಮತಯಾಚಿಸಿದರು. ಮಾಜಿ ಕೇಂದ್ರ ಸಚಿವ ಅಲ್ಫೊನ್ಸ್ ಕಣ್ಣಂತನಂ ಮುಂತಾದವರು ಪಾಲ್ಗೊಂಡಿದ್ದರು.

First published: