Kerala : 1 ವರ್ಷದ ಬಳಿಕ ಹೆತ್ತ ತಾಯಿಯ ಮಡಿಲು ಸೇರಿದ ಕಂದಮ್ಮ: ಸುಖಾಂತ್ಯ ಕಂಡ ಕೇರಳದ ದತ್ತು ವಿವಾದ!

Anupama DNA Test Case : ತಾಯಿಯ ಅನುಮತಿ ಇಲ್ಲದೆ ಮಗುವನ್ನು ಆಂಧ್ರಪ್ರದೇಶಕ್ಕೆ ದತ್ತು ನೀಡಿದ್ದ ಕೇರಳದ ಪ್ರಕರಣ ಸುಖಾಂತ್ಯ ಪಡೆದುಕೊಂಡಿದೆ.. ಕೋರ್ಟ್ ನಿಂದ ಹಿಡಿದು ಡಿಎನ್ಎ ಟೆಸ್ಟ್ ವರೆಗೂ ತಲುಪಿದ ಪ್ರಕರಣದಲ್ಲಿ, ಕೊನೆಗೂ ನಿಜವಾದ ಮಗುವನ್ನು ಹೆತ್ತ ಪೋಷಕರಿಗೆ ಜಯ ಸಿಕ್ಕಿದ್ದು ಮಗು ತಂದೆ-ತಾಯಿಗಳ ಮಡಿಲು ಸೇರಿದೆ.

ಕೇರಳ

ಕೇರಳ

 • Share this:
  ಅಮ್ಮ(Mother) ಎಂದರೇ ವರ್ಣಿಸಲಾಗದ ಅನುಭೂತಿ. ಪ್ರೀತಿ, (Love)ತ್ಯಾಗ, ಕರುಣೆ(care) ಹಾಗೂ ವಾತ್ಸಲ್ಯದ ಪ್ರತಿರೂಪ. ಒಂದು ವಾಕ್ಯದಲ್ಲಿ, ಒಂದು ಕತೆಯಲ್ಲಿ, ಒಂದು ಹೊತ್ತಿಗೆಯಲ್ಲಿ(Book) ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಅಮ್ಮನದು. ಅಮ್ಮ ಎಂದರೆ ದೇವರು(God) ಎನ್ನುತ್ತಾರೆ. ಅದು ಸುಲಭವಾಗಿ ಸಿಗುವ ಹೋಲಿಕೆ ಕೂಡ. ಹೀಗಾಗಿ ಹೆಣ್ಣು ತಾನು ತಾಯಿಯಾಗುತ್ತಿದ್ದೇನೆ ಎಂದು ತಿಳಿದ ದಿನದಿಂದ ಮಗು ಜಗತ್ತಿಗೆ ಬರುವವರೆಗೂ ಸಾಕಷ್ಟು ಕನಸುಗಳನ್ನು ಕಂಡಿರುತ್ತಾರೆ. ತನ್ನ ಮಗುವಿನ ಸುಖದಲ್ಲಿ ಎಲ್ಲಾ ಸುಖವನ್ನು ಕಾಣುತ್ತಾಳೆ. ಹೀಗಾಗಿ ಎಲ್ಲಾ ತಾಯಂದಿರಿಗೂ ತಮ್ಮ ಮಕ್ಕಳು ಅಮೂಲ್ಯವಾದ ರತ್ನ. ಆದರೆ ಕೇರಳದಲ್ಲಿ(Kerala) ಒಬ್ಬ ತಾಯಿ ತನ್ನ ಮಗು ಹುಟ್ಟಿದಾಗಲೇ ಕಳೆದುಕೊಂಡು, ಮಾತೃವಾತ್ಸಲ್ಯದಿಂದ ವಂಚಿತರಾಗಿ ಕೋರ್ಟ್(Court) ಕಾನೂನು ಎಂದು ಅಲೆದು ತಮ್ಮ ಮಗು ವಾಪಸ್ ಪಡೆದುಕೊಂಡು ತಾಯಿ ವಾತ್ಸಲ್ಯ ಮೆರೆದಿದ್ದಾರೆ.

  ಕೇರಳದಲ್ಲಿ ಸುಖಾಂತ್ಯ ಕಂಡ ದತ್ತು ವಿವಾದ

  ತಾಯಿಯ ಅನುಮತಿ ಇಲ್ಲದೆ ಮಗುವನ್ನು ಆಂಧ್ರಪ್ರದೇಶಕ್ಕೆ ದತ್ತು ನೀಡಿದ್ದ ಕೇರಳದ ಪ್ರಕರಣ ಸುಖಾಂತ್ಯ ಪಡೆದುಕೊಂಡಿದೆ. ಕೋರ್ಟ್ ನಿಂದ ಹಿಡಿದು ಡಿಎನ್ಎ ಟೆಸ್ಟ್ ವರೆಗೂ ತಲುಪಿದ ಪ್ರಕರಣದಲ್ಲಿ, ಕೊನೆಗೂ ನಿಜವಾದ ಮಗುವನ್ನು ಹೆತ್ತ ಪೋಷಕರಿಗೆ ಜಯ ಸಿಕ್ಕಿದ್ದು ಮಗು ತಂದೆ-ತಾಯಿಗಳ ಮಡಿಲು ಸೇರಿದೆ.

  ಇದನ್ನೂ ಓದಿ :ಆನ್​ಲೈನ್​ನಲ್ಲಿ ಪರಿಚಯವಾದ ಲವರ್​ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆ್ಯಸಿಡ್ ಎರಚಿದ ಮಹಿಳೆ!

  ಏನಿದು ಪ್ರಕರಣ..?

  ಕಳೆದ ವರ್ಷದ ಅಕ್ಟೋಬರ್ 19ರಂದು ಅನುಪಮ ಹಾಗೂ ಅಜಿತ್ ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡಿದ್ರು. ಆದ್ರೆ ಅನುಪಮ ಮಗುವಿಗೆ ಜನ್ಮ ನೀಡಿದ ವೇಳೆ ಆಕೆಗೆ ಇನ್ನೂ ಮದುವೆ ಆಗಿರಲಿಲ್ಲ.. ಅಜಿತ್ ಎಂಬುವವರ ಜೊತೆಗೆ ಅನುಪಮಾ ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಇದ್ದರೂ.. ಹೀಗಾಗಿ ಅನುಪಮಾ ಮಗುವಿಗೆ ಜನ್ಮ ನೀಡಿರುವುದು ಗೊತ್ತಾದರೆ ಆಕೆಯ ತಂಗಿಯ ಮದುವೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅನುಪಮಾ ಪೋಷಕರು ಆಕೆಯ ಅನುಮತಿ ಇಲ್ಲದೆ ಗಂಡು ಮಗುವನ್ನು ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ ಮೂಲಕ ಆಂಧ್ರಪ್ರದೇಶಕ್ಕೆ ದತ್ತು ನೀಡಲಾಗಿತ್ತು.. ಅಲ್ಲದೇ ಅನುಪಮಾಗೆ ಮಗುವನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಪೋಷಕರು ನಂಬಿಸಲು ಯತ್ನಿಸಿದ್ರು.

  ಅಜಿತ್ ಹಾಗೂ ಅನುಪಮಾ ಧರಣಿ

  ಅನುಪಮಾ ತಂದೆಗ ಸ್ಥಳೀಯ ಸಿಪಿಐಎಂ ನಾಯಕನಾಗಿರುವುದರಿಂದ ಪ್ರಭಾವಬೀರಿ ಮಗುವನ್ನ ಬೇರೆಕಡೆಗೆ ನೀಡಿರುವ ಅನುಮಾನಗೊಂಡ ಅನುಪಮ ಹಾಗೂ ಅಜಿತ್, ವಿಷಯ ತಿಳಿದು ಕೆಎಸ್‌ಸಿಸಿಡಬ್ಲ್ಯೂ ಕಚೇರಿಯ ಎದುರು ಹಲವಾರು ದಿನಗಳಿಂದ ಧರಣಿ ನಡೆಸಿದ್ದರು. ಹೀಗಾಗಿ ಕೇರಳ ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18ರಂದು ಆಂಧ್ರಪ್ರದೇಶಕ್ಕೆ ದತ್ತು ನೀಡಿದ್ದ ಮಗುವನ್ನು ವಾಪಸ್ ಕೇರಳಕ್ಕೆ ಮರಳಿ ತರುವಂತೆ ಕೆಎಸ್‌ಸಿಸಿಡಬ್ಲ್ಯೂ ಸೂಚನೆ ನೀಡಿತ್ತು.. ಅದರಂತೆ ಆಂಧ್ರಪ್ರದೇಶದಿಂದ ಕೇರಳಕ್ಕೆ ಬಂದ ಮಗುವನ್ನು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಆರೈಕೆ ಸಂಸ್ಥೆಯೊಂದು ವಶಕ್ಕೆ ಪಡೆದುಕೊಂಡಿದ್ದು.

  ಇದನ್ನೂ ಓದಿ :ಟೀ ಮಾರಿ ಬಂದ ಹಣದಿಂದ ಹೆಂಡತಿ ಜೊತೆಗೆ 25ಕ್ಕೂ ಹೆಚ್ಚು ದೇಶ ಸುತ್ತಿದ್ದ ಕೇರಳದ ವಿಜಯನ್ ನಿಧನ

  DNA ಟೆಸ್ಟ್ ಗೆ ಸೂಚನೆ ನೀಡಿದ್ದ ಕೋರ್ಟ್

  ಆದ ಪ್ರದೇಶದಿಂದ ತಿರುವನಂತಪುರಕ್ಕೆ ಬಂದ ಮಗುವನ್ನು ವಶಕ್ಕೆ ಪಡೆದುಕೊಂಡಿದ್ದ ಮಕ್ಕಳ ಕಲ್ಯಾಣ ಸಮಿತಿ, ಅನುಪಮ ಹಾಗೂ ಮಗುವಿನ ಡಿಎನ್ಎ ಪರೀಕ್ಷೆಗೆ ಆದೇಶ ನೀಡಿತ್ತು.. ಅದ್ರಂತೆ ತಿರುವನಂತಪುರಂನ ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯಲ್ಲಿ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು . ಡಿಎನ್ಎ ಪರೀಕ್ಷೆಯಲ್ಲಿ ಮಗು ಅನುಪಮಾಳದ್ದು ಎಂದು ಮಕ್ಕಳ ಕಲ್ಯಾಣ ಸಮಿತಿ ವರದಿ ಸಲ್ಲಿಸಿತ್ತು. ಹೀಗಾಗಿಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿಜು ಮೆನನ್  ಅನುಪಮಾ ಹಾಗೂ ಅಜಿತ್ ಗೆ ತಮ್ಮ ಒಂದು ವರ್ಷದ ಮಗುವನ್ನು ಒಪ್ಪಿಸಲು ಸೂಚಿಸಿದ್ದಾರೆ.

  ಅಲ್ಲದೇ ಒಂದು ವರ್ಷದ ಬಳಿಕ ತಾಯಿಯ ಮಡಿಲನ್ನು ಸೇರಿರುವ ಮಗುವನ್ನು ಚೆನ್ನಾಗಿ ಬಳಸುವಂತೆ ಅಜಿತ್ ಹಾಗೂ ಅನುಪಮಾ ದಂಪತಿಗೆ ನ್ಯಾಯಾಧೀಶ ಬಿಜು ಮೆನನ್ ಆದೇಶ ನೀಡಿದ್ದಾರೆ.
  Published by:ranjumbkgowda1 ranjumbkgowda1
  First published: