ಕೇರಳ: ವರ್ಷ ಪೂರ್ತಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು (Students) ಫಲಿತಾಂಶಕ್ಕಾಗಿ (Result) ಕಾಯುತ್ತಿರುತ್ತಾರೆ. ಆದರೆ ಫಲಿತಾಂಶ ಪ್ರಕಟಗೊಂಡು ರಾಜ್ಯಕ್ಕೆ ಟಾಪರ್ (State Topper) ಎನಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬ ಆ ಕ್ಷಣವನ್ನು ಸಂಭ್ರಮಿಸುವ ಮೊದಲೇ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದಲ್ಲಿ (Kerala) ಈ ಘಟನೆ ನಡೆದಿದ್ದು, ಈತ 10ನೇ ತರಗತಿ ಪರೀಕ್ಷೆಯಲ್ಲಿ ಯಾವುದೇ ಗ್ರೇಸ್ ಮಾರ್ಕ್ಸ್ಗಳನ್ನು( ಪಡೆಯದೇ ಎಲ್ಲಾ ವಿಷಯದಲ್ಲೂ A+ ಗ್ರೇಡ್ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದ. ಆದರೆ ಅಪಘಾತದಲ್ಲಿ ಬಾಲಕ ಬಲಿಯಾಗಿದ್ದಾನೆ.
16 ವರ್ಷದ ಬಾಲಕ ಸಾರಂಗ್ ಮೃತ ದುರ್ದೈವಿ. ಈತ ಆಲಂಕೋಡ್ ವಂಚಿಯೂರು ಮೂಲದ ಪಿ ಬಿನೇಶ್ ಕುಮಾರ್ ಮತ್ತು ಜಿಟಿ ರಂಜಿನಿ ದಂಪತಿಯ ಪುತ್ರ ಎಂದು ತಿಳಿದುಬಂದಿದೆ. ಅಟ್ಟಿಂಗಲ್‌ನ ಸರ್ಕಾರಿ ಬಾಲಕರ ಶಾಕೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಾರಂಗ್ ಮೇ 13 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಕಲ್ಲಂಬಲಂ-ನಾಗರೂರು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದರು. ಈತ ಕುಳಿತಿದ್ದ ಆಟೋ ರಿಕ್ಷಾ ಮತ್ತೊಂದು ವಾಹನಕ್ಕೆ ಜಾಗ ಬಿಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಪಲ್ಟಿಯಾಗಿದೆ.
ಇದನ್ನೂ ಓದಿ: Cabinet Framing: ಸಿದ್ದರಾಮಯ್ಯ ಬಳಿ ಸುಳಿಯದ ಆಪ್ತ ಶಾಸಕರು; ಯಾಕೆ ಈ ಮುನಿಸು?
ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ
ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾರಂಗ್ ಮೃತಪಟ್ಟರು ಕುಟುಂಸ್ಥರು ಆತನ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಸಾರಂಗ್ನ ದೇಹದ ಅಂಗಾಂಗಗಳು 6 ಜನರಿಗೆ ಜೀವನ ಕಲ್ಪಿಸಿಕೊಟ್ಟಿದೆ. ಈ ಮೂಲಕ ಕುಟುಂಬಸ್ಥರು ಚಿಕ್ಕ ವಯಸ್ಸಿನಲ್ಲಿ ಮಗನನ್ನು ಕಳೆದುಕೊಂಡರೂ, ಅತನ ಅಂಗಾಂಗಗಳನ್ನು ದಾನ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ