ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನ ಭಯೋತ್ಪಾದಕನಂತೆ ನಡೆಸಿಕೊಳ್ಳಲಾಯಿತು: ಮನೀಶ್​ ಸಿಸೋಡಿಯಾ ಆಕ್ಷೇಪ

ಕೇಜ್ರಿವಾಲ್ ಮತ್ತು ಸಿಸೋಡಿಯಾ ಹೊರತುಪಡಿಸಿ, ಶಾಸಕರಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ್ ಜಾ, ಅಜಯ್ ದತ್, ರಾಜೇಶ್ ರಿಷಿ, ರಾಜೇಶ್ ಗುಪ್ತಾ, ಮದನ್ ಲಾಲ್, ಪರ್ವೀನ್ ಕುಮಾರ್ ಮತ್ತು ದಿನೇಶ್ ಮೋಹನಿಯಾ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • Share this:
  ದೇಶದ ರಾಜ್ಯವೊಂದರ ಮುಖ್ಯಮಂತ್ರಿಯೊಬ್ಬರನ್ನು ಹೀಗೆ ಭಯೋತ್ಪಾದಕರಂತೆ ನಡೆಸಿಕೊಂಡ ರೀತಿ ಪ್ರಜಾಪ್ರಭುತ್ವದಂತಹ ದೇಶ ಭಾರತದಲ್ಲಿ ಇದೇ ಮೊದಲ ಪ್ರಕರಣ ಆಗಿದೆ ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದರು.

  ದೆಹಲಿ ನ್ಯಾಯಾಲಯವು ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್​  ಸಿಸೋಡಿಯಾ ಅವರನ್ನು 2018 ರಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಕೇಸು ದಾಖಲಿಸಲಾಗಿತ್ತು ಈಗ ನ್ಯಾಯಲಯ ಆ ಆರೋಪದಿಂದ ಇಬ್ಬರನ್ನು ಖುಲಾಸೆಗೊಳಿಸಿದೆ.

  "ಬಿಜೆಪಿಯು ಎಪಿಪಿ ಸರ್ಕಾರವನ್ನು ಉರುಳಿಸಲು ಹಾಗೂ ಹಳಿ ತಪ್ಪಿಸಲು ಇಂತಹ ಹೀನ ಕೃತ್ಯಕ್ಕೆ ಕೈ ಹಾಕಿತ್ತು ಮತ್ತು ನಮ್ಮ ವಿರುದ್ಧ ನಕಲಿ ಎಫ್ಐಆರ್ ದಾಖಲಿಸಿ ಹಿಂಸೆ ನೀಡಿತು. ಆದರೆ ಇಂದು ಸತ್ಯವು ಮೇಲುಗೈ ಸಾಧಿಸಿದೆ. ಈ ದಿನ ಸತ್ಯಮೇವ ಜಯತೇ ದಿನ, ”ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ಹೇಳಿದರು.ಬಿಜೆಪಿಯ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.


  ಆಡಳಿತಾರೂಡ ಆಮ್ ಆದ್ಮಿ ಪಕ್ಷದ ಒಂಬತ್ತು ಶಾಸಕರಿಗೆ ವಿಶೇಷ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. ಆದಾಗ್ಯೂ, ಇತರ ಇಬ್ಬರು ನಾಯಕರಾದ- ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಾಲ್ ಅವರಿಗೆ ಇದರಿಂದ ಇನ್ನೂ ಬಿಡುಗಡೆ ಭಾಗ್ಯ ದೊರೆತಿಲ್ಲ.


  ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಚಿನ್ ಗುಪ್ತಾ ಅಧ್ಯಕ್ಷತೆಯಲ್ಲಿರುವ ವಿಶೇಷ ಎಂಪಿ/ಎಂಎಲ್‌ಎ ನ್ಯಾಯಾಲಯವು ಖುಲಾಸೆಗೊಳಿಸಿರುವ ಆದೇಶವನ್ನು ಪ್ರಕಟಿಸಿತು.  ಫೆಬ್ರವರಿ 19 ಮತ್ತು 20, 2018 ರ ಮಧ್ಯರಾತ್ರಿ ಕೇಜ್ರಿವಾಲ್ ನಿವಾಸದಲ್ಲಿ ನನ್ನ ಮೇಲೆ ಹಲ್ಲೆ ನಡೆದಿತ್ತು ಎಂದು ಹೇಳಲಾಗಿದೆ, ಕೇಜ್ರಿವಾಲ್​ ಅವರ ಮನೆಗೆ ಮುಖ್ಯ ಕಾರ್ಯದರ್ಶಿ  ಪ್ರಕಾಶ್ ಅವರನ್ನು ಸಭೆಗೆ ಕರೆಯುವಂತೆ ನಾಟಕ ಮಾಡಿ ಹಲ್ಲೆ ನಡೆಸಲಾಗಿತ್ತು, ಅಲ್ಲದೇ ಆಪ್ ಶಾಸಕರು ಕೂಡ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಆರೋಪಿಸಿದ್ದರು.


  ಕೇಜ್ರಿವಾಲ್ ಮತ್ತು ಸಿಸೋಡಿಯಾ ಹೊರತುಪಡಿಸಿ, ಶಾಸಕರಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್, ಸಂಜೀವ್ ಜಾ, ಅಜಯ್ ದತ್, ರಾಜೇಶ್ ರಿಷಿ, ರಾಜೇಶ್ ಗುಪ್ತಾ, ಮದನ್ ಲಾಲ್, ಪರ್ವೀನ್ ಕುಮಾರ್ ಮತ್ತು ದಿನೇಶ್ ಮೋಹನಿಯಾ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು.
  ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ- ಎಎಪಿ ಜಟಾಪಟಿ ಇಂದು ನೆನ್ನೆಯದಲ್ಲ. ಪ್ರತಿ ಹಂತದಲ್ಲೂ ಎರಡೂ ಪಕ್ಷಗಳು ಅವಕಾಶ ಸಿಕ್ಕಾಗಲೆಲ್ಲಾ ಈ ರೀತಿಯ ಅವಕಾಶಕ್ಕೆ ಕಾಯುತ್ತಲೇ ಇರುತ್ತವೆ. ದೆಹಲಿಗೆ ಪೂರ್ಣ ರಾಜ್ಯದ ಹಕ್ಉ, ರಾಜ್ಯ ಸರ್ಕಾರದ ಅಧೀನಕ್ಕೆ ಪೊಲೀಸ್​ ಇಲಾಖೆ, ಲೆಫ್ಟಿನೆಂಟ್​ ಗವರ್ನರ್​ ಮತ್ತು ಸರ್ಕಾರದ ನಡುವಿನ ಕಿತ್ತಾಟ, ಇತ್ತೀಚೆಗೆ ಕೊರೋನಾ ಎರಡನೇ ಅಲೆಯ ವೇಳೆಯಲ್ಲಿ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಸುತ್ತಿಲ್ಲ ಎನ್ನುವ ಆಮ್​ ಆದ್ಮಿ ಪಕ್ಷದ ಆರೋಪ ವಿವಾದದ ಕಿಡಿ ಹೊತ್ತಿಸಿತ್ತು.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: