ದೆಹಲಿ ವಿಧಾನಸಭೆ ಚುನಾವಣೆ; ಒಂದೇ ಹಂತದಲ್ಲಿ 70 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಎಎಪಿ, ನವದೆಹಲಿಯಿಂದ ಕೇಜ್ರಿವಾಲ್ ಸ್ಪರ್ಧೆ

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಚುನಾವಣಾ ಆಯೋಗ ಜಾರಿ ಮಾಡಿದೆ. 

HR Ramesh | news18-kannada
Updated:January 15, 2020, 9:02 AM IST
ದೆಹಲಿ ವಿಧಾನಸಭೆ ಚುನಾವಣೆ; ಒಂದೇ ಹಂತದಲ್ಲಿ 70 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಎಎಪಿ, ನವದೆಹಲಿಯಿಂದ ಕೇಜ್ರಿವಾಲ್ ಸ್ಪರ್ಧೆ
ಅರವಿಂದ ಕೇಜ್ರಿವಾಲ್.
  • Share this:
ನವದೆಹಲಿ:  ದೆಹಲಿ ವಿಧಾನಸಭಾ ಚುನಾವಣೆಗೆ ತಿಂಗಳಿಗೂ ಕಡಿಮೆ ಅವಧಿ ಇದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಮಂಗಳವಾರ ಎಲ್ಲ 70 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 46 ಮಂದಿ ಪುನರ್​ಅಭ್ಯರ್ಥಿಗಳಾಗಿದ್ದಾರೆ.

ಪಕ್ಷದ ರಾಜಕೀಯ ವ್ಯವಹಾರ ಸಮಿತಿ ಮಂಗಳವಾರ ಸಂಜೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮನೀಶ್ ಸಿಸೋಡಿಯಾ ಪತ್ಪರ್​ಗಂಜ್​ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಸತ್ಯೇಂದ್ರ ಜೈನ್ ಅವರು ಶಾಕೂರ್ ಬಸ್ತಿ, ಜೀತೇಂದ್ರ ತೋಮರ್ ಅವರು ಟ್ರಿ ನಗರ್​ನಿಂದ, ಜರ್ನೈಲ್ ಸಿಂಗ್ ಅವರು ತಿಲಕ್ ನಗರದಿಂದ, ಅತಿಶಿ ಅವರು ಕಲ್ಕಾಜಿಯಿಂದ ಹಾಗೂ ಎಸ್​ಕೆ ಬಗ್ಗಾ ಅವರು ಕೃಷ್ಣ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ.

ಹಾಗೆಯೇ ನವದೆಹಲಿ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಎಲ್ಲರಿಗೂ ಶುಭವಾಗಲಿ. ಎಎಪಿ ಬಗ್ಗೆ ಜನರು ತುಂಬಾ ವಿಶ್ವಾಸ ಇಟ್ಟಿದ್ದಾರೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್​ ಮಾಡಿ ಪಕ್ಷದ ಎಲ್ಲ ಅಭ್ಯರ್ಥಿಗಳಿಗೂ ಶುಭ ಹಾರೈಸಿದ್ದಾರೆ.

Important Announcement :ಇದನ್ನು ಓದಿ: ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯಲು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಆಪ್; ಸಿಎಎ ವಿಚಾರವಾಗಿ ತಟಸ್ಥ ನಿಲುವು

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಚುನಾವಣಾ ಆಯೋಗ ಜಾರಿ ಮಾಡಿದೆ.
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading