ನವಜೋತ್ ಸಿಂಗ್ ಸಿಧು ಎಎಪಿ ಸೇರ್ಪಡೆಗೆ ಪ್ರಶಾಂತ್ ಕಿಶೋರ್ ಮಧ್ಯಸ್ಥಿಕೆ ಊಹಾಪೋಹದ ನಡುವೆ ಪಕ್ಷಕ್ಕೆ ಸ್ವಾಗತ ಕೋರಿದ ಸಿಎಂ ಕೇಜ್ರಿವಾಲ್

2017ರಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದಿತ್ತು. 117 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎಎಪಿ 20, ಎಸ್​ಎಡಿ 15, ಬಿಜೆಪಿ 3 ಹಾಗೂ ಲೋಕ ಇನ್​ಸಾಫ್ ಪಾರ್ಟಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಅರವಿಂದ ಕೇಜ್ರಿವಾಲ್.

ಅರವಿಂದ ಕೇಜ್ರಿವಾಲ್.

 • Share this:
  ನವದೆಹಲಿ: ಕ್ರಿಕೆಟಿಗನಾಗಿ ರಾಜಕೀಯಕ್ಕೆ ಬಂದ ಪಂಜಾಬ್​ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ಕಾಂಗ್ರೆಸ್​ ತೊರೆದು ಎಎಪಿ ಸೇರಲಿದ್ದಾರೆ ಎಂಬ ಊಹಾಪೋಹಗಳಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೆರೆ ಎಳೆದಿದ್ದಾರೆ. ನಮ್ಮ ತಂಡದಲ್ಲಿ 56 ವರ್ಷದ ವ್ಯಕ್ತಿ ಅವರಾಗಿರುವುದು ಸಂತೋಷವಾಗಿದೆ ಎಂದು ಹೇಳಿದ್ದಾರೆ.

  ನ್ಯೂಸ್ 18 ಇಂಡಿಯಾ ಸಂವಾದದಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ಅಮೃತಸರ ಪೂರ್ವ ಶಾಸಕರಿಗೆ ಎಎಪಿ ಸೇರಲು ಸ್ವಾಗತ ಎಂದು ಸಿಧು ಬಗ್ಗೆ ಕೇಳಿದಾಗ ಹೀಗೆ ಹೇಳಿದ್ದಾರೆ.

   

  ಆಮ್​ ಆದ್ಮಿ ಪಕ್ಷದಲ್ಲಿ ಯಾರಾದರೂ 56 ವರ್ಷ ತಲುಪಿದ ರಾಜಕಾರಣಿ ಇದ್ದಾರೆಯೇ ಎಂದು ಸಂವಾದದಲ್ಲಿ ಕೇಳಿದಾಗ ಕೇಜ್ರಿವಾಲ್ ಅವರು, ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ನೀವು ರಾಜಕೀಯ ಪ್ರಶ್ನೆಗಳನ್ನು ಕೇಳಿದರೆ, ಹೆಚ್ಚು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  ಪಂಜಾಬ್ ವಿಧಾನಸಭೆ ಚುನಾವಣೆಗೂ ಮುನ್ನ ಎಎಪಿ ಸೇರುವ ಸಂಬಂಧ ನವಜೋತ್ ಸಿಂಗ್ ಸಿಧು ಅವರು ಚುನಾವಣಾ ತಂತ್ರಗಾರ ನಿಪುಣ ಪ್ರಶಾಂತ್ ಕಿಶೋರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಸಿಧು ಬಿಜೆಪಿಯನ್ನು ತೊರೆದು 2017ರಲ್ಲಿ ಕಾಂಗ್ರೆಸ್ ಸೇರಿದ್ದರು. ಆ ಬಳಿಕ ಸಿಎಂ ಅಮರಿಂದರ್ ಸಿಂಗ್ ಅವರ ಸಚಿವ ಸಂಪುಟದಿಂದ ಅವರನ್ನು ಕೈ ಬಿಡಲಾಯಿತು.

  ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿಯೂ ಸಹ ಎಎಪಿ ಸಿಧು ಜೊತೆಗೆ ಮಾತುಕತೆ ನಡೆಸಿತ್ತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಷಯವಾಗಿ ಈ ಮಾತುಕತೆ ಸಫಲವಾಗಲಿಲ್ಲ. ಬಳಿಕ ಸಿಧು ಕಾಂಗ್ರೆಸ್ ಸೇರಿ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದರು.

  ವಿಪರ್ಯಾಸವೆಂದರೆ, ಇಂದು ಎಎಪಿ ಮತ್ತು ಸಿಧು ನಡುವಿನ ಮಧ್ಯವರ್ತಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಶಾಂತ್ ಕಿಶೋರ್, 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಮರಿಂದರ್ ಸಿಂಗ್ ಅವರ ಚುನಾವಣಾ ಪ್ರಚಾರವನ್ನು ನಿರ್ವಹಿಸಿದ್ದರು.

  ಇದನ್ನು ಓದಿ: ಮಹಾರಾಷ್ಟ್ರದ ಬಳಿಕ ದೆಹಲಿಯಲ್ಲೇ ಅತಿಹೆಚ್ಚು ಆ್ಯಕ್ಟೀವ್ ಕೊರೋನಾ ಕೇಸ್; ಚಿಕಿತ್ಸೆಗೆ ಹೊಸ ನಿಯಮ ಜಾರಿ

  ಈ ವರ್ಷದ ಮಾರ್ಚ್​ನಲ್ಲಿ ಎಎಪಿ ಪಂಜಾಬ್ ಘಟಕದ ಭಗವಂತ್ ಮನ್ನ್ ಅವರು ಸಿಧು ಎಎಪಿ ಸೇರಲು ನಿರ್ಧರಿಸಿದರೆ ಅವರನ್ನು ಮೊದಲು ಸ್ವಾಗತಿಸಲಾಗುವುದು ಎಂದು ಹೇಳಿದ್ದರು.

  2017ರಲ್ಲಿ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​, ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೆ ಬಂದಿತ್ತು. 117 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎಎಪಿ 20, ಎಸ್​ಎಡಿ 15, ಬಿಜೆಪಿ 3 ಹಾಗೂ ಲೋಕ ಇನ್​ಸಾಫ್ ಪಾರ್ಟಿ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

   
  First published: