ದೆಹಲಿಯಲ್ಲಿ ಅದ್ದೂರಿ ಮದುವೆಗೆ ಬ್ರೇಕ್​ ಹಾಕಲಿದೆಯಾ ಕೇಜ್ರಿವಾಲ್​ ಸರ್ಕಾರ?

ಮದುವೆಗಳಂತಹ ದೊಡ್ಡ ಸಮಾರಂಭಗಳಲ್ಲಿ ದುಂದುವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ, ದೆಹಲಿಯಲ್ಲಿ ನಡೆಯುವ ಮದುವೆ ಇನ್ನಿತರ ಬೃಹತ್​ ಸಮಾರಂಭಗಳಿಗೆ ಇಂತಿಷ್ಟೇ ಅತಿಥಿಗಳನ್ನು ಆಹ್ವಾನಿಸಬೇಕೆಂಬ ನಿಯಮವನ್ನು ತರಲು ದೆಹಲಿಯ ಅರವಿಂದ್​ ಕೇಜ್ರಿವಾಲ್​ ಸರ್ಕಾರ ಕಾರ್ಯೋನ್ಮುಖವಾಗಿದೆ.

sushma chakre | news18
Updated:December 12, 2018, 3:51 PM IST
ದೆಹಲಿಯಲ್ಲಿ ಅದ್ದೂರಿ ಮದುವೆಗೆ ಬ್ರೇಕ್​ ಹಾಕಲಿದೆಯಾ ಕೇಜ್ರಿವಾಲ್​ ಸರ್ಕಾರ?
ಸಾಂದರ್ಭಿಕ ಚಿತ್ರ
  • News18
  • Last Updated: December 12, 2018, 3:51 PM IST
  • Share this:
ನವದೆಹಲಿ (ಡಿ. 12): ಇತ್ತೀಚೆಗೆ ಮದುವೆ ಸಮಾರಂಭವೆಂದರೆ ಪ್ರತಿಷ್ಠೆಯ ಸಂಕೇತ ಎಂಬ ಭಾವನೆ ಹೆಚ್ಚಾಗುತ್ತಿದೆ. ಮಹಾನಗರಗಳಲ್ಲಿ ನಡೆಯುವ ಮದುವೆಗಳಲ್ಲಂತೂ ಅದ್ದೂರಿತನವೇ ಜಾಸ್ತಿ. ಅದರಿಂದ ತ್ಯಾಜ್ಯವೂ ಹೆಚ್ಚಾಗಿ, ಖಾಲಿಯಾಗದೆ ಉಳಿದ ಆಹಾರಪದಾರ್ಥಗಳ ರಾಶಿಯೂ ಹೆಚ್ಚುತ್ತದೆ. ಹಾಗಾಗಿ, ಇಂತಹ ದುಂದುವೆಚ್ಚ ಮತ್ತು ತ್ಯಾಜ್ಯದ ಸಮಸ್ಯೆಗೆ ಬ್ರೇಕ್​ ಹಾಕಲು ದೆಹಲಿ ಸರ್ಕಾರ ಮುಂದಾಗಿದೆ.

ದೆಹಲಿಯಲ್ಲಿ ನಡೆಯುವ ಮದುವೆ ಇನ್ನಿತರ ಬೃಹತ್​ ಸಮಾರಂಭಗಳಿಗೆ ಇಂತಿಷ್ಟೇ ಅತಿಥಿಗಳನ್ನು ಆಹ್ವಾನಿಸಬೇಕೆಂಬ ನಿಯಮವನ್ನು ತರಲು ದೆಹಲಿಯ ಅರವಿಂದ್​ ಕೇಜ್ರಿವಾಲ್​ ಸರ್ಕಾರ ಕಾರ್ಯೋನ್ಮುಖವಾಗಿದೆ. ಈ ಬಗ್ಗೆ ವರದಿ ಪ್ರಕಟಿಸಿರುವ ಟೈಮ್ಸ್​ ಆಫ್​ ಇಂಡಿಯಾ ಪತ್ರಿಕೆ, ಈ ಬಗ್ಗೆ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ್ದು, ಅತಿಥಿಗಳನ್ನು ನಿಯಂತ್ರಿಸಲು ಯೋಜನೆಯೊಂದನ್ನು ರೂಪಿಸಲು ಸರ್ಕಾರ ಚಿಂತಿಸಿದೆ. ಹಾಗೇ, ಆಹಾರ ಪದಾರ್ಥಗಳ ದುಂದುವೆಚ್ಚ ಮತ್ತು ಟ್ರಾಫಿಕ್​ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳಲು ಯೋಚಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯ ಚುನಾವಣಾ ಫಲಿತಾಂಶ; ಬಿಜೆಪಿ ವರ್ಚಸ್ಸು ಕಳೆದುಕೊಳ್ಳುತ್ತಿದೆ: ರಜನಿಕಾಂತ್

ದೊಡ್ಡ ಸಮಾರಂಭಗಳ ಹೆಸರಿನಲ್ಲಿ ಆಹಾರ ಮತ್ತು ನೀರನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಇನ್ನೊಂದೆಡೆ ಹಸಿವಿನಿಂದ ಸಾಯುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಈ ಹಿಂದೆ ಹೇಳಿತ್ತು. ಹೀಗಾಗಿ, ಆ ಬಗ್ಗೆ ಕ್ರಮ ಕೈಗೊಳ್ಳಲು ಆಪ್​ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಇದನ್ನೂ ಓದಿ: ಮುಂಬೈನಲ್ಲಿ ಇಂದು ಉದ್ಯಮಿ ಮುಖೇಶ್ ಅಂಬಾನಿ ಮಗಳು ಇಶಾ ಮದುವೆ; ಗಣ್ಯಾತಿಗಣ್ಯರು ಭಾಗಿ

ಬೃಹತ್​ ಸಮಾರಂಭಗಳಿಗೆ ಹೆಚ್ಚು ಅತಿಥಿಗಳನ್ನು ಆಹ್ವಾನಿಸದೆ ಇರುವುದು, ಅನಗತ್ಯ ಆಹಾರವನ್ನು ಸಿದ್ಧಮಾಡದೆ ಇರುವುದು ಅಥವಾ ಹೆಚ್ಚಾದ ಆಹಾರವನ್ನು ಎನ್​ಜಿಓಗಳ ಮೂಲಕ ಬಡ ಜನರಿಗೆ ವಿತರಿಸುವುದು ಹೀಗೆ ಕೆಲವು ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಕಾರ್ಯಕ್ರಮಗಳ ಆಯೋಜಕರಿಗೆ ಅನುಕೂಲಕರವಾದ ಆಯ್ಕೆಯನ್ನು ನೀಡಲಾಗುವುದು. ಆದರೆ, ಆಹಾರ ಮತ್ತು ನೀರಿನ ದುಂದುವೆಚ್ಚವನ್ನು ಹೇಗಾದರೂ ಮಾಡಿ ನಿಯಂತ್ರಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.

ಇನ್ನು 6 ವಾರಗಳ ಒಳಗೆ ಯೋಜನೆಯನ್ನು ಜಾರಿಗೆ ತರಲಾಗುವುದು. ದೆಹಲಿಯ ಸುತ್ತಮುತ್ತಲೂ ಇರುವ ಫಾರ್ಮ್​ ಹೌಸ್​ಗಳು, ಹೋಟೆಲ್​ಗಳು, ಛತ್ರಗಳಲ್ಲಿ ಈ ಬಗ್ಗೆ ನಿರ್ದೇಶನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
First published:December 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ