HOME » NEWS » National-international » KEJRIWAL GIVEN NO RELIEF FOR WOMEN UNDER ODD EVEN SCHEME GNR

ಸಮ-ಬೆಸ ಸಂಚಾರ ನಿಯಮಕ್ಕೆ ದೆಹಲಿ ಸರ್ಕಾರ ಸಿದ್ಧತೆ; ಮಹಿಳೆಯರಿಗೆ ವಿನಾಯಿತಿ ಘೋಷಿಸಿದ ಸಿಎಂ ಕೇಜ್ರಿವಾಲ್

ಸರ್ಕಾರ ಹೇಳುವಂತೆ ನವೆಂಬರ್‌ 4, 6, 8, 10, 12, 14ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳು ರಸ್ತೆಗಿಳಿಯಬಹುದು. ಇನ್ನುಳಿದ ದಿನಗಳಲ್ಲಿ ಮಾತ್ರ ಬೆಸ ಸಂಖ್ಯೆ ನೋಂದಣಿ ಹೊಂದಿದ ವಾಹನಗಳಿಗೆ ರಸ್ತೆಗಿಳಿಯಲು ಅವಕಾಶವಿದೆ.

news18-kannada
Updated:October 12, 2019, 4:48 PM IST
ಸಮ-ಬೆಸ ಸಂಚಾರ ನಿಯಮಕ್ಕೆ ದೆಹಲಿ ಸರ್ಕಾರ ಸಿದ್ಧತೆ; ಮಹಿಳೆಯರಿಗೆ ವಿನಾಯಿತಿ ಘೋಷಿಸಿದ ಸಿಎಂ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • Share this:
ನವದೆಹಲಿ(ಅ.12): ಮುಖ್ಯಮಂತ್ರಿ ಅರವಿಂದ್​​​ ಕೇಜ್ರಿವಾಲ್​​ ನೇತೃತ್ವದ ಆಪ್​​ ಸರ್ಕಾರವೂ ದೆಹಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ ನಿಯಮ ಜಾರಿಗೆ ತರಲು ಮುಂದಾಗಿದೆ. ಅಲ್ಲದೇ ಈ ನಿಯಮದಿಂದ ಮಹಿಳೆ ಸೇರಿದಂತೆ 12 ವರ್ಷದೊಳಗಿನ ಮಕ್ಕಳ ಜೊತೆಗೆ ಪ್ರಯಾಣಿಸುವ ಪ್ರತಿಯೊಬ್ಬರಿಗೂ ವಿನಾಯಿತಿ ನೀಡಲಾಗುವುದು ಎಂದು ಕೇಜ್ರಿವಾಲ್​​ ಘೋಷಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ದಿನೇದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಲೇ ಇದೆ. ಈ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮೂರನೇ ಬಾರಿಗೆ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಜಾರಿಗೆ ತರಲಾಗುವುದು. ಇದು ನವೆಂಬರ್.4 ರಿಂದ 15ರವರೆಗೂ ಅನ್ವಯವಾಗಿರಲಿದೆ ಎಂದು ಖುದ್ದು ಸಿಎಂ ಅರವಿಂದ್​​ ಕೇಜ್ರಿವಾಲ್​​ ಅವರೇ ತಿಳಿಸಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಅರವಿಂದ್​​ ಕೇಜ್ರಿವಾಲ್​​, ಎಂದಿನಂತೆ ಈ ಬಾರಿ ಖಾಸಗಿ ಸಿಎನ್​​ಜಿ ವಾಹನಗಳಿಗೆ ವಿನಾಯಿತಿ ನೀಡುವುದಿಲ್ಲ. ಬದಲಿಗೆ ವಾಹನದಲ್ಲಿ ಮಹಿಳೆಯರು ಮತ್ತು 12 ವರ್ಷದೊಳಗಿನ ಮಕ್ಕಳು ಇದ್ದರೇ ವಿನಾಯಿತಿ ಮಾತ್ರ ನೀಡುತ್ತೇವೆ ಎಂದೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮತ್ತೆ ಗ್ರೆನೇಡ್​​​ ದಾಳಿ: 7 ಮಂದಿಗೆ ತೀವ್ರ ಗಾಯ

ಇನ್ನು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಬೇಕೋ, ಬೇಡವೋ ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗದುಕೊಂಡಿಲ್ಲ. ಈ ಕುರಿತಾಗಿ ತಜ್ಞರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ ಎಂದು ಭರವಸೆ ನೀಡಿದರು.

ಏನಿದು ಸಮ-ಬೆಸ ಸಂಚಾರ ನಿಯಮ?: ಸರ್ಕಾರ ಹೇಳುವಂತೆ ನವೆಂಬರ್‌ 4, 6, 8, 10, 12, 14ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳು ರಸ್ತೆಗಿಳಿಯಬಹುದು. ಇನ್ನುಳಿದ ದಿನಗಳಲ್ಲಿ ಮಾತ್ರ ಬೆಸ ಸಂಖ್ಯೆ ನೋಂದಣಿ ಹೊಂದಿದ ವಾಹನಗಳಿಗೆ ರಸ್ತೆಗಿಳಿಯಲು ಅವಕಾಶವಿದೆ.
------------
First published: October 12, 2019, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading