ಆಪ್​ ಜೊತೆ ಕೈ ಜೋಡಿಸಲು ರಾಹುಲ್​ ಗಾಂಧಿ ಒಪ್ಪಿಲ್ಲ; ಊಹಾಪೋಹಗಳಿಗೆ ತೆರೆ ಎಳೆದ ಸಿಎಂ ಅರವಿಂದ್​ ಕೇಜ್ರಿವಾಲ್

ಭಾನುವಾರ ಈ ಬಗ್ಗೆ ಮಾತನಾಡಿದ್ದ ಶೀಲಾ ದೀಕ್ಷಿತ್​ ಆಪ್​ ಜೊತೆ ನಾವು ಮೈತ್ರಿ ಮಾಡಿಕೊಳ್ಳುತ್ತೇವೋ ಅಥವಾ ಇಲ್ಲವೋ ಎನ್ನುವ ವಿಚಾರದ ಬಗ್ಗೆ ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದಿದ್ದರು. ಈಗ ಕೇಜ್ರಿವಾಲ್​ ಅವರಿಂದಲೇ ಸ್ಪಷ್ಟನೆ ಸಿಕ್ಕಂತಾಗಿದೆ.

Rajesh Duggumane | news18
Updated:April 1, 2019, 11:11 AM IST
ಆಪ್​ ಜೊತೆ ಕೈ ಜೋಡಿಸಲು ರಾಹುಲ್​ ಗಾಂಧಿ ಒಪ್ಪಿಲ್ಲ; ಊಹಾಪೋಹಗಳಿಗೆ ತೆರೆ ಎಳೆದ ಸಿಎಂ ಅರವಿಂದ್​ ಕೇಜ್ರಿವಾಲ್
ಅರವಿಂದ್​ ಕೇಜ್ರಿವಾಲ್​
  • News18
  • Last Updated: April 1, 2019, 11:11 AM IST
  • Share this:
ನವದೆಹಲಿ (ಮಾ01): ಆಮ್​ ಆದ್ಮಿ ಪಕ್ಷದ (ಎಎಪಿ) ಜೊತೆ ಕೈ ಜೋಡಿಸಲು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನಿರಾಕರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ. ಈ ಮೂಲಕ ಕೆಲ ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಮಾಧ್ಯಮದವರ ಜೊತೆಗೆ ಕೇಜ್ರಿವಾಲ್​ ಮಾತನಾಡಿದ್ದಾರೆ. “ರಾಹುಲ್​ ಗಾಂಧಿ ನಮ್ಮ ಜೊತೆ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಹಾಗಾಗಿ ನಾವು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದ್ದೇವೆ,” ಎಂದರು ಅವರು.

ಮೈತ್ರಿ ವಿಚಾರವಾಗಿ ಅರವಿಂದ್​ ಕೇಜ್ರಿವಾಲ್​ ನಮ್ಮನ್ನು ಭೇಟಿ ಮಾಡಿಯೇ ಇಲ್ಲ ಎಂದು ಶೀಲಾ ದೀಕ್ಷಿತ್​ ಹೇಳಿದ್ದರು. ಈ ಹೇಳಿಕೆ ಬಗ್ಗೆಯೂ ಕೇಜ್ರಿವಾಲ್​ ಸ್ಪಷ್ಟನೆ ನೀಡಿದ್ದಾರೆ. “ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ನಾವು ರಾಹುಲ್​ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇವೆ. ಶೀಲಾ ದೀಕ್ಷಿತ್​ ಪ್ರಮುಖ ನಾಯಕಿಯೇ ಅಲ್ಲ,” ಎಂದರು. ಈ ಮೂಲಕ ಅವರ ಮಾತಿಗೆ ಬೆಲೆ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಭಾನುವಾರ ಈ ಬಗ್ಗೆ ಮಾತನಾಡಿದ್ದ ಶೀಲಾ ದೀಕ್ಷಿತ್​ ಆಪ್​ ಜೊತೆ ನಾವು ಮೈತ್ರಿ ಮಾಡಿಕೊಳ್ಳುತ್ತೇವೋ ಅಥವಾ ಇಲ್ಲವೋ ಎನ್ನುವ ವಿಚಾರದ ಬಗ್ಗೆ ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದಿದ್ದರು. ಈಗ ಕೇಜ್ರಿವಾಲ್​ ಅವರಿಂದಲೇ ಸ್ಪಷ್ಟನೆ ಸಿಕ್ಕಂತಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಸಿಎಂ ಕೇಜ್ರಿವಾಲ್​​​- ಪ್ರಕಾಶ್​​ ರೈ ಭೇಟಿ: ಸಂಪೂರ್ಣ ಬೆಂಬಲ ನೀಡುವುದಾಗಿ ಆಪ್​​ ಘೋಷಣೆ!

ಪಂಜಾಬ್​, ಹರಿಯಾಣ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳಲು ಆಪ್​ ಮುಂದಾಗಿತ್ತು. ದೆಹಲಿಯಲ್ಲಿ ಐದು ಸ್ಥಾನಗಳನ್ನು ಬಿಟ್ಟುಕೊಡುವಂತೆ ಆಗ್ರಹಿಸಿತ್ತು. ಆದರೆ, ಮಾತುಕತೆ ನಂತರದಲ್ಲಿ ಕಾಂಗ್ರೆಸ್​ ಈ ಆಫರ್​ ತಿರಸ್ಕರಿಸಿದೆ ಎನ್ನಲಾಗಿದೆ.

First published: April 1, 2019, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading