ಪ್ರತಿ ವರ್ಷದಂತೆ ಈ ಬಾರಿಯೂ ಸೇನೆ ಜೊತೆ ಮೋದಿ ದೀಪಾವಳಿ ಆಚರಣೆ; ಗಡಿ ಭಾಗಕ್ಕೆ ತೆರಳಿದ ಪ್ರಧಾನಿ

ರಾಜಸ್ಥಾನದ ಜೈಸಲ್ಮಾರ್ ಗಡಿ ಭಾಗಕ್ಕೆ ಮೋದಿ ಮುಂಜಾನೆ 9:30ಕ್ಕೆ ತೆರಳಿದ್ದಾರೆ. ಸೇನೆ, ವಾಯು ಪಡೆ ಮತ್ತು ಗಡಿ ಭದ್ರತಾ ಪಡೆಯ 600 ಸಿಬ್ಬಂದಿ ಇಂದಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Narendra Modi

Narendra Modi

 • Share this:
  ನವದೆಹಲಿ (ನವೆಂಬರ್ 14): 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಪ್ರತಿ ವರ್ಷ ಗಡಿಯಲ್ಲಿ ದೀಪಾವಳಿ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಅವರು ಗಡಿ ಭಾಗಕ್ಕೆ ತೆರಳುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ಈ ಬಾರಿಯು ಸಂಪ್ರದಾಯದಂತೆ ಅವರು ಗಡಿ ಭಾಗಕ್ಕೆ ತೆರಳಿ ದೀಪಾವಳಿ ಆಚರಣೆ ಮಾಡಲಿದ್ದಾರೆ.

  ರಾಜಸ್ಥಾನದ ಜೈಸಲ್ಮಾರ್ ಗಡಿ ಭಾಗಕ್ಕೆ ಮೋದಿ ಮುಂಜಾನೆ 9:30ಕ್ಕೆ ತೆರಳಿದ್ದಾರೆ. ಸೇನೆ, ವಾಯು ಪಡೆ ಮತ್ತು ಗಡಿ ಭದ್ರತಾ ಪಡೆಯ 600 ಸಿಬ್ಬಂದಿ ಇಂದಿನ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಮೋದಿಯೊಂದಿಗೆ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಎಂಎಂ ನರವಾನೆ, ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ತಾನಾ ಕೂಡ ಭಾಗಿ ಆಗುವ ಸಾಧ್ಯತೆ ಇದೆ.  ಇಂದು ಮುಂಜಾನೆ ಟ್ವೀಟ್​ ಮಾಡಿರುವ ಮೋದಿ, ಎಲ್ಲರಿಗೂ ದೀಪಾವಳಿ ಶುಭಾಶಯಗಳು. ಈ ಹಬ್ಬವು ಸಂತೋಷ  ನೀಡಲಿ. ಎಲ್ಲರಿಗೂ ಸಮೃದ್ಧಿ ಹಾಗೂ ಆರೋಗ್ಯ ಸಿಗಲಿ ಎಂದು ಕೋರಿದ್ದಾರೆ.
  Published by:Rajesh Duggumane
  First published: