ಗಣಿ ದುರಂತದಲ್ಲಿ ಸಿಲುಕಿರುವವರು ಪವಾಡದಿಂದ ಬದುಕಿಬರಬಹುದು, ಹುಡುಕಾಟ ನಿಲ್ಲಿಸಬೇಡಿ; ಸುಪ್ರೀಂಕೋರ್ಟ್​

ಗಣಿ ದುರಂತದಲ್ಲಿ ಸಿಲುಕಿದ ಕಾರ್ಮಿಕರು ಸತ್ತಿದ್ದಾರೋ, ಬದುಕಿದ್ದಾರೋ ನಮಗೆ ತಿಳಿದಿಲ್ಲ ಹೀಗಾಗಿ, ಈಗಲೇ ಯಾವ ನಿರ್ಧಾರಕ್ಕೂ ಬರುವುದು ಬೇಡ. ಏನಾಗಿದೆ ಎಂದು ಗೊತ್ತಾಗುವವರೆಗೂ ನಿಮ್ಮ ಪ್ರಯತ್ನವನ್ನು ಮುಂದುವರೆಸಿ ಎಂದು ನ್ಯಾಯಪೀಠ ಮೇಘಾಲಯ ಸರ್ಕಾರಕ್ಕೆ ಸೂಚನೆ ನೀಡಿದೆ.

sushma chakre | news18
Updated:January 11, 2019, 3:10 PM IST
ಗಣಿ ದುರಂತದಲ್ಲಿ ಸಿಲುಕಿರುವವರು ಪವಾಡದಿಂದ ಬದುಕಿಬರಬಹುದು, ಹುಡುಕಾಟ ನಿಲ್ಲಿಸಬೇಡಿ; ಸುಪ್ರೀಂಕೋರ್ಟ್​
ಶೋಧಕಾರ್ಯದಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ
sushma chakre | news18
Updated: January 11, 2019, 3:10 PM IST
ಶಿಲ್ಲಾಂಗ್​ (ಜ. 11): ಡಿಸೆಂಬರ್​ 15ರಂದು ಮೇಘಾಲಯದಲ್ಲಿ ಸಂಭವಿಸಿದ ಗಣಿ ದುರಂತದಲ್ಲಿ ಸಿಲುಕಿರುವ 15 ಕಾರ್ಮಿಕರನ್ನು ರಕ್ಷಣೆ ಮಾಡಲು ವಿಫಲವಾಗಿರುವ ಸರ್ಕಾರವನ್ನು ಸುಪ್ರೀಂಕೋರ್ಟ್​ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.

ಗಣಿ ದುರಂತದಲ್ಲಿ ಸಿಲುಕಿರುವ ಕಾರ್ಮಿಕರು ಸತ್ತಿದ್ದಾರೋ, ಬದುಕಿದ್ದಾರೋ ಎಂಬ ಬಗ್ಗೆ ನಮಗೆ ನಿಖರವಾಗಿ ಗೊತ್ತಿಲ್ಲ. ಅವರ ಮೃತದೇಹ ಪತ್ತೆಯಾಗುವವರೆಗೂ ನಾವು ಶೋಧ ಕಾರ್ಯ ಮುಂದುವರಿಸಬೇಕು. ಒಂದೊಮ್ಮೆ ಪವಾಡ ಸಂಭವಿಸಿ ಅವರೆಲ್ಲರೂ ಒಳಗೆ ಬದುಕಿರಲೂಬಹುದು. ಹಾಗಾಗಿ, ನಿಮ್ಮ ಪ್ರಯತ್ನವನ್ನು ನೀವು ಕೈಬಿಡಬೇಡಿ ಎಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಎಸ್​. ಅಬ್ದುಲ್ ನಜೀರ್​ ಮೇಘಾಲಯ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಮೇಘಾಲಯ ಗಣಿಗಾರಿಕೆ ಸ್ಥಳದಲ್ಲಿ ಮತ್ತೆರಡು ಮೃತದೇಹ ಪತ್ತೆ

ಡಿ.13 ರಂದು 15 ಕಾರ್ಮಿಕರು ಮೇಘಾಲಯದ ಗಣಿ ದುರಂತದಲ್ಲಿ ಸಿಲುಕಿದ್ದರು. ಲುಮಥರಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ 370 ಅಡಿ ಆಳದಲ್ಲಿ ಕಾರ್ಮಿಕರು ಆಕಸ್ಮಿಕವಾಗಿ ಸಿಲುಕಿಕೊಂಡಿದ್ದರು. ಅವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅದಾಗಿ ಹೆಚ್ಚೂಕಡಿಮೆ ಒಂದು ತಿಂಗಳಾದರೂ ಸರ್ಕಾರ ಅವರನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಮೇಘಾಲಯದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಇನ್ನು, ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಸರ್ಕಾರದ ರಕ್ಷಣಾ ಕಾರ್ಯದ ಬಗ್ಗೆ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಮೇಘಾಲಯ ಗಣಿ ರಕ್ಷಣಾ ಕಾರ್ಯಾಚರಣೆ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ​

ಭಾರತೀಯ ನೌಕಾಪಡೆಯ 14 ಸಿಬ್ಬಂದಿ, 72 ಎನ್​ಡಿಆರ್​ಎಫ್ ಯೋಧರು, 21 ಒರಿಸ್ಸಾ ಅಗ್ನಿಶಾಮಕ ದಳದ ಸಿಬ್ಬಂದಿ, 35 ಕೋಟ್ ಇಂಡಿಯಾ ಲಿಮಿಟೆಡ್ ಅಧಿಕಾರಿಗಳು ಹೀಗೆ 200ಕ್ಕೂ ಅಧಿಕ ತುರ್ತು ಕಾರ್ಯನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದವು.

ಅಲ್ಲಿನ ಜನರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬುದು ತಿಳಿದಿದ್ದರೂ ನೀವಿನ್ನೂ ಯಾಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ? ಅವರ ಹಣದಾಸೆಯಿಂದ 15 ಜನ ಭೂಮಿಯೊಳಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ ನ್ಯಾಯಾಲಯಕ್ಕೆ ಸರ್ಕಾರ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದೆ.
Loading...

ಮೇಘಾಲಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ 1 ಕೋಟಿ ಲೀಟರ್​ ನೀರನ್ನು ಗಣಿಪ್ರದೇಶದಿಂದ ಹೊರಹಾಕಲಾಗಿದೆ. ಆದರೆ, ಸಮೀಪದಲ್ಲಿಯೇ ಇರುವ ನದಿಯ ಕಾರಣದಿಂದ ಕೆಳಗೆ ಅಗೆದಷ್ಟೂ ಕಲ್ಲುಗಳ ಸುತ್ತಲಿಂದ ನೀರು ಒಸರುತ್ತಲೇ ಇದೆ. ಇದರಿಂದ ಶೋಧಕಾರ್ಯಕ್ಕೆ ಅಡ್ಡಿಯುಂಟಾಗುತ್ತಿದೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ