ಆರ್ಥಿಕ ಕುಸಿತ ಹಾಗೂ ಕೇಂದ್ರ ಸಚಿವರ ಓಲಾ ಊಬರ್​ ಐನ್​ಸ್ಟೀನ್​ ಹೇಳಿಕೆ; ಟ್ವೀಟರ್​ನಲ್ಲಿ ಗೇಲಿ ಮಾಡಿದ ಪ್ರಿಯಾಂಕ ಗಾಂಧಿ

ದೇಶದ ಆರ್ಥಿಕ ಕುಸಿತವನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಓಲಾ-ಊಬರ್ ಉದಾಹರಣೆ ಕೊಟ್ಟು ನಗೆಪಾಟಲಿಗೆ ಈಡಾಗಿದ್ದಾರೆ, ರೈಲ್ವೆ ಸಚಿವ ಪಿಯೂಷ್​ ಗೋಯಲ್ ವಿಜ್ಞಾನಿ ಐನ್​ಸ್ಟೀನ್​ ಹಾಗೂ ಗುರುತ್ವಾಕರ್ಷಣೆಯ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ.

MAshok Kumar | news18-kannada
Updated:September 13, 2019, 4:56 PM IST
ಆರ್ಥಿಕ ಕುಸಿತ ಹಾಗೂ ಕೇಂದ್ರ ಸಚಿವರ ಓಲಾ ಊಬರ್​ ಐನ್​ಸ್ಟೀನ್​ ಹೇಳಿಕೆ; ಟ್ವೀಟರ್​ನಲ್ಲಿ ಗೇಲಿ ಮಾಡಿದ ಪ್ರಿಯಾಂಕ ಗಾಂಧಿ
ಪ್ರಿಯಾಂಕ ಗಾಂಧಿ.
  • Share this:
ನವ ದೆಹಲಿ (ಸೆಪ್ಟೆಂಬರ್.13); ದೇಶದ ಆರ್ಥಿಕ ಬೆಳವಣಿಗೆ ಪಾತಾಳಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕಟು ಟೀಕಾಪ್ರಹಾರ ನಡೆಸುತ್ತಿವೆ. ಆದರೆ, ಇದಕ್ಕೆ ಸಮಜಾಯಿಷಿ ನೀಡುವ ನೆಪದಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವರು ಮತ್ತಷ್ಟು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರ ಈ ನಡೆಯನ್ನು ಇದೀಗ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಟುವಾಗಿ ವಿರೋಧಿಸಿದ್ದಾರೆ.

ಈ ಹಿಂದೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ದೇಶದ ಆಟೋ ಮೊಬೈಲ್ ಕ್ಷೇತ್ರ ಗಣನೀಯವಾಗಿ ಕುಸಿಯಲು ಓಲಾ-ಊಬರ್ ಕಾರಣ. ಸಾರ್ವಜನಿಕರು ಹೆಚ್ಚಾಗಿ ಓಲಾ-ಊಬರ್ ಬಳಸುತ್ತಿರುವುದರಿಂದ ಆಟೋ ಮೊಬೈಲ್ ಕ್ಷೇತ್ರ ಕುಸಿತ ಕಂಡಿದೆ” ಎಂದು ಹೇಳುವ ಮೂಲಕ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದರು. ಅಲ್ಲದೆ ಟ್ರಾಲಿಗರ ಕೆಂಗಣ್ಣಿಗೂ ಗುರಿಯಾಗಿದ್ದರು.

ಇದನ್ನೂ ಓದಿ : ಪಾನಿಪುರಿ, BHEL, ರೊಟ್ಟಿ, ಪೀಜ್ಜಾ, ಊಬರ್ ಓಲಾ… ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಿರ್ಮಲಾ ಸೀತಾರಾಮನ್

ಇನ್ನೂ ನಿನ್ನೆ ಹೇಳಿಕೆ ನೀಡಿದ್ದ ರೈಲ್ವೆ ಸಚಿವ ಪಿಯೂಷ್ ಗೋಯಲ್, “ದೇಶದ ಅಭಿವೃದ್ಧಿಯನ್ನು ಗಣಿತದ ಲೆಕ್ಕಾಚಾರದ ಮೂಲಕ ಅಳೆಯಬಾರದು. ಭೂಮಿಯ ಗುರುತ್ವಾಕರ್ಷಣೆ ಕುರಿತ ಸಂಶೋಧನೆಯ ವೇಳೆ ಸ್ವತಃ ಆಲ್ಬರ್ಟ್ ಐನ್​ಸ್ಟೀನ್ ಸಹ ಗಣಿತವನ್ನು ಬಳಸಿರಲಿಲ್ಲ” ಎಂದು ಹೇಳಿಕೆ ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಹಾಸ್ಯಾಸ್ಪದಕ್ಕೆ ಗುರಿಯಾಗಿದ್ದರು.

"ಭೂಮಿಯ ಗುರುತ್ವಾಕರ್ಷಣೆ ಬಲವನ್ನು ಸಂಶೋಧನೆ ಮಾಡಿದ ವಿಜ್ಞಾನಿ ಐನ್​ಸ್ಟೀನ್ ಅಲ್ಲ ಸರ್ ಐಸಾಕ್ ನ್ಯೂಟನ್ ಎಂದು ಟ್ರಾಲಿಗರು ಪಿಯೂಷ್ ಗೋಯಲ್ ಅವರ ಕಾಲೆಳೆದಿದ್ದರು. ಮತ್ತೆ ಕೆಲವರು ಐನ್​ಸ್ಟೀನ್ ಗುರುತ್ವಾಕರ್ಷಣೆಯನ್ನು ಕಂಡುಕೊಂಡರೆ ನ್ಯೂಟನ್ ಮಾಡಿದ್ದಾದರೂ ಏನು?" ಎಂದು ಸಚಿವ ಪಿಯೂಷ್ ಗೋಯಲ್ ಕಾಲೆಳೆದಿದ್ದಾರೆ.

ಹೀಗಾಗಿ ದೇಶದ ಆರ್ಥಿಕ ಕುಸಿತ ಹಾಗೂ ಕೇಂದ್ರ ಸಚಿವರ ನಗೆಪಾಟಲಿನ ಹೇಳಿಕೆಗಳನ್ನು ಟ್ವೀಟರ್​ನಲ್ಲಿ ಕ್ರಿಕೆಟ್​ಗೆ ಹೋಲಿಸುವ ಮೂಲಕ ಟೀಕಿಸಿ ಬಿಜೆಪಿ ನಾಯಕರ ಕಾಲೆಳೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ”ಕ್ರಿಕೆಟ್​ನಲ್ಲಿ ಸರಿಯಾದ ಕ್ಯಾಚ್ ಪಡೆಯಲು ಚೆಂಡಿನ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಹಾಗೂ ಆಟದ ಸಾರವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ಹೀಗೆ ಊಲಾ, ಊಬರ್, ಗುರುತ್ವ, ಗಣಿತ ಎಂದು ದೂಷಿಸುತ್ತಾ ತಪ್ಪಿಸಿಕೊಳ್ಳಲು ನೆಪ ಹುಡುಕ ಬೇಕಾಗುತ್ತದೆ” ಎಂದು ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : ಆಟೋಮೊಬೈಲ್ ಕ್ಷೇತ್ರ ಕುಸಿತಕ್ಕೆ ಓಲಾ ಊಬರ್ ಕಾರಣವಲ್ಲ; ಸಚಿವೆ ನಿರ್ಮಲಾ ಸೀತಾರಾಮನ್​ಗೆ ತಿರುಗೇಟು ನೀಡಿದ ಮಾರುತಿ ಸುಜುಕಿ!
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading