ಚಳಿಗಾಲ ಆರಂಭ ಹಿನ್ನೆಲೆ; ಬಾಗಿಲು ಮುಚ್ಚಲಿವೆ ಕೇದಾರನಾಥ, ಬದ್ರೀನಾಥ ದೇವಾಲಯಗಳು

ಬದ್ರೀನಾಥ ದೇವಾಲಯ ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು, ವಿಷ್ಣುವನ್ನು ಆರಾಧಿಸಲಾಗುತ್ತದೆ. ಈ ದೇವಾಲಯ ಉತ್ತರಾಖಂಡದ ಬದರೀನಾಥ್​ನಲ್ಲಿದೆ. ಇಲ್ಲಿಗೆ ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ವಿಷ್ಣುವಿನ ದರ್ಶನ ಪಡೆಯುತ್ತಾರೆ.

Latha CG | news18-kannada
Updated:October 9, 2019, 8:11 AM IST
ಚಳಿಗಾಲ ಆರಂಭ ಹಿನ್ನೆಲೆ; ಬಾಗಿಲು ಮುಚ್ಚಲಿವೆ ಕೇದಾರನಾಥ, ಬದ್ರೀನಾಥ ದೇವಾಲಯಗಳು
ಬದ್ರೀನಾಥ್ ದೇವಾಲಯ
  • Share this:
ಉತ್ತರಾಖಂಡ(ಅ.09): ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗಲಿದೆ. ಈ ಕಾರಣದಿಂದ ಉತ್ತರಾಖಂಡದ ಬದ್ರೀನಾಥ​ ಮತ್ತು ಕೇದಾರನಾಥ ದೇವಾಲಯಗಳನ್ನು ಮುಚ್ಚಲಾಗುತ್ತಿದೆ. ಅಕ್ಟೋಬರ್ 29ರಿಂದ ಕೇದಾರನಾಥ ದೇವಾಲಯ ಹಾಗೂ ನವೆಂಬರ್ 17ರಿಂದ ಬದ್ರೀನಾಥ ದೇವಾಲಯದ ಬಾಗಿಲುಗಳು ಮುಚ್ಚಲ್ಪಡುತ್ತವೆ.

ಬದರೀನಾಥ್ ದೇವಾಲಯದ ಮುಖ್ಯ ಅರ್ಚಕರಾದ ಈಶ್ವರಿ ಪ್ರಸಾದ್ ನಂಬುದಿರಿ ಈ ಘೋಷಣೆ ಹೊರಡಿಸಿದ್ದಾರೆ. ಚಳಿಗಾಲ ಇರುವ ಹಿನ್ನೆಲೆ, ನವೆಂಬರ್ 17ರಂದು ಸಂಜೆ 5.13ಕ್ಕೆ ಬದ್ರೀನಾಥ ದೇವಾಲಯವನ್ನು ಮುಚ್ಚಲಾಗುತ್ತಿದೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೇದಾರನಾಥ ದೇವಾಲಯವನ್ನು ಅ.29ರಂದು ಬೆಳಗ್ಗೆ 8.30ಕ್ಕೆ ಮುಚ್ಚಲಾಗುತ್ತದೆ. ಈ ವರ್ಷ ಕೇದಾರನಾಥ ಮತ್ತು ಬದ್ರೀನಾಥ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ದಾಖಲೆಯಾಗಿದೆ.

Nita Ambani in Sports Business Summit | ಲಂಡನ್ನಲ್ಲಿ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರುಪಡಿಸಿದ ನೀತಾ ಅಂಬಾನಿ

ಬದ್ರೀನಾಥ ಮತ್ತು ಕೇದಾರನಾಥ ದೇವಾಲಯಗಳು ಬಾಗಿಲು ಮುಚ್ಚುವಾಗ ಅನೇಕ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ವಿಧಿ ವಿಧಾನಗಳು ನೆರವೇರಲಿವೆ.  ಬದ್ರೀನಾಥ ದೇವಾಲಯ ಪ್ರಸಿದ್ಧ ಹಿಂದೂ ದೇವಾಲಯವಾಗಿದ್ದು, ವಿಷ್ಣುವನ್ನು ಆರಾಧಿಸಲಾಗುತ್ತದೆ. ಈ ದೇವಾಲಯ ಉತ್ತರಾಖಂಡದ ಬದರೀನಾಥ್​ನಲ್ಲಿದೆ. ಇಲ್ಲಿಗೆ ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ವಿಷ್ಣುವಿನ ದರ್ಶನ ಪಡೆಯುತ್ತಾರೆ.

ಹಿಮಾಲಯದ ದೇವಸ್ಥಾನಗಳಾದ ಕೇದಾರನಾಥ, ಬದ್ರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲದಲ್ಲಿ ಮುಚ್ಚಲಾಗುತ್ತದೆ. ಚಳಿಗಾಲದಲ್ಲಿ ಈ ಪ್ರದೇಶಗಳಲ್ಲಿ ಅತಿಯಾದ ಹಿಮ ಸುರಿಯುತ್ತದೆ.  ಹೀಗಾಗಿ, ದೇವಾಲಯ ಹಿಮಾವೃತವಾಗಲಿದೆ. ಅಲ್ಲದೆ, ಅಲ್ಲಿಗೆ ತೆರಳುವುದು ಕೂಡ ಅಸಾಧ್ಯ. ಏಪ್ರಿಲ್​-ಮೇ ತಿಂಗಳ ವೇಳೆಗೆ ಮತ್ತೆ ದೇವಾಲಯಗಳ ಬಾಗಿಲು ತೆರೆಯಲಾಗುತ್ತದೆ.

First published: October 9, 2019, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading