ತೆಲಂಗಾಣ ಸರ್ಕಾರದ ಸಂಪುಟ ವಿಸ್ತರಣೆ; ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​​, ಸೋದರಳಿಯ ಹರೀಶ್​​ ರಾವ್​​ಗೆ ಮಂತ್ರಿ ಸ್ಥಾನ

ಮುಂದೆ ತೆಲಂಗಾಣದಲ್ಲಿ ಟಿಆರ್‌ಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಲಿದೆ. ಈ ಜಟಾಪಟಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದಲೇ ಪುತ್ರ ಕೆಟಿಆರ್​​​ ಮತ್ತು ಹರೀಶ್​​ ರಾವ್​​​​ಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲಾಗಿದೆ.

news18
Updated:September 9, 2019, 12:37 PM IST
ತೆಲಂಗಾಣ ಸರ್ಕಾರದ ಸಂಪುಟ ವಿಸ್ತರಣೆ; ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​​, ಸೋದರಳಿಯ ಹರೀಶ್​​ ರಾವ್​​ಗೆ ಮಂತ್ರಿ ಸ್ಥಾನ
ಕೆಸಿಆರ್​​, ಕೆಟಿಆರ್​​, ಹರೀಶ್​ ರಾವ್​​
  • News18
  • Last Updated: September 9, 2019, 12:37 PM IST
  • Share this:
ಹೈದರಬಾದ್​​(ಸೆ.09): ಸಿಎಂ ಕೆ. ಚಂದ್ರಶೇಖರ್ ರಾವ್​​ ನೇತೃತ್ವದ ತೆಲಂಗಾಣ ಸರ್ಕಾರದ ಸಂಪುಟ ವಿಸ್ತರಣೆ ಮಾಡಲಾಗಿದೆ. ಇದಿನಿಂದ ವಿಧಾನಸಭಾ ಅಧಿವೇಶನ ಶುರುವಾಗಲಿದ್ದು, ಈ ಮುನ್ನವೇ ಭಾನುವಾರ(ನಿನ್ನೆ) ಸಿಎಂ ಕೆಸಿಆರ್​​ ಸಂಪುಟ ವಿಸ್ತರಿಸಿದ್ದಾರೆ. ಇನ್ನು ಸಂಪುಟದಲ್ಲಿ ಈ ಬಾರಿಯೂ ಸಿಎಂ ಕೆಸಿಆರ್​​, ತಮ್ಮ ಪುತ್ರ ಟಿಆರ್​ಎಸ್​​ ಕಾರ್ಯಾಕಾರಿ ಅಧ್ಯಕ್ಷ ಕೆ. ತಾರಕರಾಮ ರಾವ್(ಕೆಟಿಆರ್​​), ಸೋದರಳಿಯ ಟಿ.ಹರೀಶ್ ರಾವ್​​ಗೆ ಸ್ಥಾನ ನೀಡಿದ್ದಾರೆ ಎಂಬುದು ಗಮನಾರ್ಹ.

ಸಿಎಂ ಕೆಸಿಆರ್​​ ಪುತ್ರ ಕೆಟಿಆರ್​​ ಮತ್ತು ಹರೀಶ್ ರಾವ್ ಈ ಹಿಂದಿನ ಸರ್ಕಾರದಲ್ಲೂ ಸಚಿವರಾಗಿದ್ದರು. ಸರ್ಕಾರಕ್ಕೆ ಯಾವುದೇ ರೀತಿಯ ಸಂಕಷ್ಟ ಬಂದಾಗಲೂ ಮೊದಲಿಗೆ ಕೆಸಿಆರ್​​ ಬೆನ್ನಿಗೆ ನಿಲ್ಲುವ ಆಪತ್ಬಾಂಧವರು. ಹೀಗಾಗಿ ಕೆ. ಚಂದ್ರಶೇಖರ್​​ ಎಂದಿನಂತೆಯೇ ಈ ಸಲವೂ ತಮ್ಮ ಪಕ್ಷದ ಆಪತ್ಬಾಂಧವರಿಗೆ ಮಂತ್ರಿ ಸ್ಥಾನ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು.

ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಸಿಎಂ ಕೆಸಿಆರ್​​ ನೇತೃತ್ವದ ಟಿಆರ್​​ಎಸ್​​ ವಿರುದ್ಧ ಬಿಜೆಪಿ ಸೆಣೆಸಿತ್ತು. ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯೂ ಟಿಆರ್​ಎಸ್​​ ನಾಡಲ್ಲಿ ಕೇಸರಿ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಆದ್ದರಿಂದಲೇ ಕೇಂದ್ರ ಸರ್ಕಾರ ಸದ್ಯವೀಗ ತಮಿಳ್‌ಸಾಯಿ ಅವರನ್ನು ತೆಲಂಗಾಣ ರಾಜ್ಯಪಾಲೆಯಾಗಿ ನೇಮಕ ಮಾಡಿದೆ.

ಇದನ್ನೂ ಓದಿ: 100 days No Vikas: ಪ್ರಧಾನಿ ಮೋದಿ ಸರ್ಕಾರದ ಭಾರತ ವಿಕಾಸದ ಬಗ್ಗೆ ರಾಹುಲ್​​ ಗಾಂಧಿ ಹೇಳಿದ್ದೇನು?

ಮುಂದೆ ತೆಲಂಗಾಣದಲ್ಲಿ ಟಿಆರ್‌ಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಶುರುವಾಗಲಿದೆ. ಈ ಜಟಾಪಟಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದಲೇ ಪುತ್ರ ಕೆಟಿಆರ್​​​ ಮತ್ತು ಹರೀಶ್​​ ರಾವ್​​​​ಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲಾಗಿದೆ.

ಸಿಎಂ ಕೆ. ಚಂದ್ರಶೇಖರ್​​ ರಾವ್​​ ನೇತೃತ್ವದ ಸಂಪುಟದಲ್ಲಿ ಈ ಇಬ್ಬರ ಜೊತೆಗೆ ಇನ್ನೂ ನಾಲ್ವರಿಗೆ ಸ್ಥಾನ ನೀಡಲಾಗಿದೆ. ಈ ಪೈಕಿ ಇಬ್ಬರು ಮಹಿಳೆಯರಾಗಿದ್ದಾರೆ. ಆರು ಜನರನ್ನು ಸೇರಿದ ಬಳಿಕ ತೆಲಂಗಾಣ ಸರ್ಕಾರದ ಸಚಿವ ಸಂಪುಟದ ಸದಸ್ಯರ ಸಂಖ್ಯೆ 18ಕ್ಕೆ ಏರಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ-------------
First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading