Nitish Kumar: ಏಕಾಏಕಿ ಎದ್ದು ನಿಂತ ನಿತೀಶ್ ಕುಮಾರ್​, ಕೈ ಹಿಡಿದು ಕುರ್ತಾ ಎಳೆದ ಕೆಸಿಆರ್​, ನಡೆದಿದ್ದೇನು?

ತೆಲಂಗಾಣ ಮುಖ್ಯಮಂತ್ರಿ ಕೆ. 2024ರಲ್ಲಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷದ ನೇತೃತ್ವ ವಹಿಸುತ್ತಾರೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ್ ರಾವ್ ಅವರನ್ನು ಪ್ರಶ್ನಿಸಲಾಯಿತು. ಈ ವೇಳೆ ನಿತೀಶ್‌ ಕುಮಾರ್‌ ಪ್ರಧಾನಿ ಅಭ್ಯರ್ಥಿಯ ಹೆಸರು ಕೇಳಿದ ತಕ್ಷಣ ಪತ್ರಿಕಾಗೋಷ್ಠಿಯ ಮಧ್ಯದಲ್ಲಿ ಕುರ್ಚಿ ಬಿಟ್ಟು ಎದ್ದು ನಿಂತರು. ಇದು ಬಹಳ ಸಮಯದವರೆಗೆ ವಿಚಿತ್ರ ಪರಿಸ್ಥಿತಿಗೆ ಕಾರಣವಾಯಿತು. ಕೆಸಿಆರ್ ನಿರಂತರವಾಗಿ ಮಾತನಾಡುತ್ತಿದ್ದರು. ಹೀಗಿದ್ದರೂ ನಿತೀಶ್ ಕುಮಾರ್ ಅವರ ಪಕ್ಕದಲ್ಲಿಯೇ ನಿಂತುಕೊಂಡಿದ್ದರು.

ಸುದ್ದಿಗೋಷ್ಠಿಯಲ್ಲಿ ಏಕಾಏಕಿ ಎದ್ದು ನಿಂತ ನಿತೀಶ್

ಸುದ್ದಿಗೋಷ್ಠಿಯಲ್ಲಿ ಏಕಾಏಕಿ ಎದ್ದು ನಿಂತ ನಿತೀಶ್

  • Share this:
ಪಾಟ್ನಾ(ಸೆ.01): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (Telangana Chief Minister KCR) ಅವರು ಬುಧವಾರ ಒಂದು ದಿನದ ಭೇಟಿಗಾಗಿ ಬಿಹಾರದ ರಾಜಧಾನಿ ಪಾಟ್ನಾ (Bihar Capital Patna) ತಲುಪಿದ್ದರು. ಇಲ್ಲಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ (Chief Minister Nitish Kumar) ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav)  ಅವರೊಂದಿಗೆ ಸುದೀರ್ಘ ಮಾತುಕತೆ ರಹಸ್ಯ ಮಾತುಕತೆ ನಡೆಸಿದರು. ಸಭೆಯ ನಂತರ ಮೂವರು ನಾಯಕರು ಪತ್ರಿಕಾಗೋಷ್ಠಿಗಾಗಿ ಕೊಠಡಿಯಿಂದ ಹೊರಬಂದರು ಮತ್ತು ಪತ್ರಕರ್ತರ ಪ್ರಶ್ನೋತ್ತರ ಪ್ರಾರಂಭವಾಯಿತು, ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು, ಆದರೆ ಕೆಸಿಆರ್ ಅವರು 'ಬಿಜೆಪಿ -ಮುಕ್ತ ಭಾರತ್' ಮಾಡುವುದೇ ತಮ್ಮ ಮತ್ತು ನಿತೀಶ್ ಕುಮಾರ್ ಅವರ ಗುರಿ ಎಂದು ಹೇಳಿದ್ದಾರೆ. ಆ ಕೂಡಲೇ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಯಾಗಬಹುದೇ ಎಂದು ಪತ್ರಕರ್ತರು ಪ್ರಶ್ನೆ ಎಸೆದಿದ್ದಾರೆ. ಆದರೆ ಇದಾದ ಬಳಿಕ ನಡೆದ ಸಂಗತಿಗೆ ರಾಜಕೀಯ ಅರ್ಥವೇನು ಎಂಬ ಉತ್ತರ ಸದ್ಯ ಹುಡುಕಾಡಲಾಗುತ್ತಿದೆ.

ಕುರ್ತಾ ಎಳೆದ ಕೆಸಿಆರ್​

2024ರಲ್ಲಿ ನಿತೀಶ್ ಕುಮಾರ್ ವಿರೋಧ ಪಕ್ಷದ ನೇತೃತ್ವ ವಹಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಸಿಎಂ ಕೆಸಿಆರ್‌ಗೆ ಕೇಳಲಾಯಿತು. ನಿತೀಶ್‌ ಕುಮಾರ್‌ ಪ್ರಧಾನಿ ಅಭ್ಯರ್ಥಿಯ ಹೆಸರು ಕೇಳಿದ ತಕ್ಷಣ ಪತ್ರಿಕಾಗೋಷ್ಠಿಯ ಮಧ್ಯದಲ್ಲಿ ಕುರ್ಚಿ ಬಿಟ್ಟು ಎದ್ದು ನಿಂತರು. ಇದು ಬಹಳ ಸಮಯದವರೆಗೆ ವಿಚಿತ್ರ ಪರಿಸ್ಥಿತಿಗೆ ಕಾರಣವಾಯಿತು. ಕೆಸಿಆರ್ ನಿರಂತರವಾಗಿ ಮಾತನಾಡುತ್ತಿದ್ದರು ಹೀಗಿದ್ದರೂ ನಿತೀಶ್ ಕುಮಾರ್ ಅವರ ಪಕ್ಕದಲ್ಲಿಯೇ ನಿಂತುಕೊಂಡಿದ್ದರು. ಈ ವೇಳೆ ಕೆಸಿಆರ್ ಅವರು ನಿತೀಶ್ ಕುಮಾರ್ ಅವರ ಕೈ ಹಿಡಿದು ಎಳೆಯುತ್ತಾ, ಕೆಲವೊಮ್ಮೆ ಅವರ ಕುರ್ತಾ ಎಳೆದು ಅವರನ್ನು ಕುಳಿತುಕೊಳ್ಳಿಸಲು ಪ್ರಯತ್ನಿಸಿದರು, ಆದರೆ ನಿತೀಶ್ ಕುಮಾರ್ ಕುಳಿತುಕೊಳ್ಳಲು ಸಿದ್ಧರಿರಲಿಲ್ಲ. ಅಲ್ಲದೇ ಈ ಇಡೀ ಘಟನಾವಳಿ ಸಂದರ್ಭದಲ್ಲಿ ನಿತೀಶ್​ ನಗುತ್ತಲೇ ಇದ್ದರೆಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ಮೂರ್ಖ ಪ್ರಶ್ನೆಗಳು

ಅವರು ಕುಳಿತುಕೊಳ್ಳದಿರುವುದನ್ನು ನೋಡಿದ ಕೆಸಿಆರ್​ ಪದೇ ಪದೇ ನಿತೀಶ್ ಜೀ ಕುಳಿತುಕೊಳ್ಳಿ ಎಂದು ಹೇಳುತ್ತಿದ್ದರು. ಇದಕ್ಕೆ ನಿತೀಶ್ ಕುಮಾರ್ ಅವರು, ಇಲ್ಲ-ಇಲ್ಲ ಬನ್ನಿ, ಪತ್ರಕರ್ತರು ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ. ಹೀಗಿರುವಾಗಲೇ ಪತ್ರಕರ್ತರು ಕೆಸಿಆರ್​ ಬಳಿ ತೃತೀಯ ರಂಗ ರಚನೆಯಾಗಲಿದೆಯೇ? ಹಾಗಾದ್ರೆ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನುಮತ್ತೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೆಸಿಆರ್​ ನಾವೆಲ್ಲಾ ಕುಳಿತು ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸುತ್ತೇವೆ, ನೀವು ಈ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದರು.

ಇದನ್ನೂ ಓದಿ: Bihar Politics: ಬಿಜೆಪಿಯಿಂದ ನಿತೀಶ್ ದೂರಾ ದೂರ, ವೈರಲ್ ಆಯ್ತು ಲಾಲೂ ಯಾದವ್ 5 ವರ್ಷ ಹಳೇ ಟ್ವೀಟ್​!

ನಗು ತಡೆಯದಾದ ನಿತೀಶ್ ಕುಮಾರ್

ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಶ್ನೋತ್ತರಗಳ ನಡುವೆ ಹೆಚ್ಚಿನ ಸಮಯ ನಿಂತುಕೊಂಡಿದ್ದರು. ಕೆಸಿಆರ್ ಅವರನ್ನು ಕೂರಿಸಲು ಪ್ರಯತ್ನಿಸುತ್ತಲೇ ಇದ್ದರು. ಅಂತಿಮವಾಗಿ ನಿತೀಶ್ ಕುಮಾರ್ ಒಪ್ಪಿ ತಮ್ಮ ಕುರ್ಚಿಯ ಮೇಲೆ ಕುಳಿತಿದ್ದಾರೆ.ಅಷ್ಟರಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಕಿವಿಯಲ್ಲಿ ಏನೋ ಹೇಳಿದ್ದಾರೆ. ಇದಾದ ಬಳಿಕ ಇಬ್ಬರೂ ಸೇರಿ ಮತ್ತೆ ನಗಲು ಪ್ರಾರಂಭಿಸಿದರು. ನಂತರ ಮತ್ತೊಮ್ಮೆ ಅವರಿಗೆ 2024ರಲ್ಲಿ ಕಾಂಗ್ರೆಸ್ ಮತ್ತು ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳನ್ನು ಕೇಳಲಾಯಿತು, ಆಗ ನಿತೀಶ್ ಕುಮಾರ್ ಎದ್ದುನಿಂತು ಈಗ ಪತ್ರಿಕಾಗೋಷ್ಠಿಯನ್ನು ಮುಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Published by:Precilla Olivia Dias
First published: