Telangana: ಶೀಘ್ರದಲ್ಲೇ ಮಂಡಿಯೂರಲಿದೆ ಸರ್ಕಾರ: ಕೆಸಿಆರ್​ಗೆ ಬಹಿರಂಗ ಎಚ್ಚರಿಕೆ ಕೊಟ್ಟ ಬಿಜೆಪಿ

ಕೆ ಚಂದ್ರಶೇಖರ್ ರಾವ್

ಕೆ ಚಂದ್ರಶೇಖರ್ ರಾವ್

ಬಿಜೆಪಿಯು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಶೀಘ್ರದಲ್ಲೇ ಇಲ್ಲಿನ ಸರ್ಕಾರ ಮಂಡಿಯೂರಲಿದೆ ಎಂದು ಹೇಳಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ತೆಲಂಗಾಣ ಉಸ್ತುವಾರಿ ತರುಣ್ ಚುಗ್ ಅವರು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಬಂಧಿತ ಸಂಜಯ್ ಕುಮಾರ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಇದರ ವಿರುದ್ಧ ಪ್ರತಿಭಟನೆಗೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಹೈದರಾಬಾದ್(ಆ.25): ತೆಲಂಗಾಣ ಬಿಜೆಪಿ (Telangana BJP) ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಬಂಧನವನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸಿದ್ದು, ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರ (TRS Govt) ಶೀಘ್ರದಲ್ಲೇ ಮಂಡಿಯೂರಲಿದೆ ಎಂದು ಹೇಳಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ತೆಲಂಗಾಣ ಉಸ್ತುವಾರಿ ತರುಣ್ ಚುಗ್ (Tarun Chug) ಅವರು ರಾಜ್ಯದಲ್ಲಿ ಕೆ ಚಂದ್ರಶೇಖರ ರಾವ್ (K. Chandrashekar Rao) ಸರ್ಕಾರ ಶೀಘ್ರದಲ್ಲೇ ಮಂಡಿಯೂರಲಿದೆ ಎಂದು ಮಂಗಳವಾರ ಹೇಳಿದ್ದಾರೆ. ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಬಂಧನವನ್ನು ತೀವ್ರವಾಗಿ ಖಂಡಿಸಿದ ಅವರು, ಬಂಡಿ ಮತ್ತು ಪಕ್ಷದ ಕಾರ್ಯಕರ್ತರ ಬಂಧನದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು. ಮಂಗಳವಾರ, ಕವಿತಾ ಅವರ ಎಂಎಲ್‌ಸಿ ನಿವಾಸದ ಮೇಲೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆದರೆ ಬಂಡಿ ಸಂಜಯ್ ಕುಮಾರ್ ಕಾರ್ಯಕರ್ತರ ಬಂಧನವನ್ನು ಕಠಿಣವಾಗಿ ಖಂಡಿಸಿದ್ದರು. ಈ ಕಾರಣದಿಂದ ಬಂಡಿ ಸಂಜಯ್​ರನ್ನು​ ಹೈದರಾಬಾದ್ ಪೊಲೀಸರು ಬಂಧಿಸಿದ್ದರು.


ಇದನ್ನೂ ಓದಿ: ಪ್ರಧಾನಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ Telangana CMಗೆ ಹುಟ್ಟುಹಬ್ಬದ ಶುಭ ಕೋರಿದ Modi


ಬಂಡಿ ಸಂಜಯ್ ಕುಮಾರ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಚುಗ್ ಒತ್ತಾಯಿಸಿದ ಚುಗ್​ ತೆಲಂಗಾಣದಲ್ಲಿ ಕೆಸಿಆರ್ ಕುಟುಂಬದ ಆಡಳಿತದ ವಿರುದ್ಧ ಬಿಜೆಪಿ ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಕಲ್ವಕುಂತಲ ಚಂದ್ರಶೇಖರ ರಾವ್ (ಕೆಸಿಆರ್) ತೆಲಂಗಾಣ ಮುಖ್ಯಮಂತ್ರಿಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ. ಇವರ ಪತ್ನಿಯ ಹೆಸರು ಶೋಭಾ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗ, ಕೆಟಿ ರಾಮರಾವ್ ಶ್ರೀಶೈಲದಿಂದ ಶಾಸಕರಾಗಿದ್ದು, ಐಟಿ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಸಂಪುಟದ ಸಚಿವರಾಗಿದ್ದರೆ, ಮಗಳು ಕೆ ಕವಿತಾ ಎಂಎಲ್‌ಸಿಯಾಗಿದ್ದಾರೆ.


Telangana CM


ಮದ್ಯದ ಹಗರಣದಲ್ಲಿ ಕೆಸಿಆರ್ ಪುತ್ರಿ ಕವಿತಾ ಭಾಗಿಯಾಗಿರುವುದು ಶೀಘ್ರದಲ್ಲೇ ಬಯಲಿಗೆ ಬರಲಿದೆ ಎಂದು ತರುಣ್ ಚುಗ್ ಹೇಳಿದ್ದಾರೆ. ದೆಹಲಿ ಸರ್ಕಾರದ ಪರಿಷ್ಕೃತ ಮದ್ಯ ನೀತಿಯಡಿ ಕಮಿಷನ್ ಅನ್ನು ಶೇ 2.5 ರಿಂದ 12 ಕ್ಕೆ ಹೆಚ್ಚಿಸಲು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಲಂಚ ನೀಡಲಾಗಿದೆ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.


ಇದನ್ನೂ ಓದಿ: Telangana: ಮೋದಿ ಹುಲಿ, ತೆಲಂಗಾಣ ಸಿಎಂ KCR ನರಿ ಎಂದ ಬಿಜೆಪಿ ಮುಖಂಡ!


ಅದರ ಮೊದಲ ಕಂತನ್ನು ಕೂಡ ಅವರಿಗೆ ನೀಡಲಾಯಿತು. ಭಾರತದಲ್ಲಿ ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ ಹೊರಡಿಸಲಾದ ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಲಾಭ ಪಡೆದ ಆರೋಪ ಹೊತ್ತಿರುವ ಸಿಸೋಡಿಯಾಗೆ 150 ಕೋಟಿ ರೂಪಾಯಿ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಸಿಆರ್ ಸರ್ಕಾರದ ಕ್ರೌರ್ಯಕ್ಕೆ ಹೆದರಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ ತರುಣ್ ಚುಗ್, ರಾಜ್ಯ ಸರ್ಕಾರವು ಅಸಂವಿಧಾನಿಕ ರೀತಿಯಲ್ಲಿ ನಡೆಸುತ್ತಿರುವುದು ಅವರ ನಿಕಟವರ್ತಿಗಳಲ್ಲಿ ಭೀತಿ ಮತ್ತು ಆತಂಕವನ್ನು ತೋರಿಸುತ್ತದೆ ಎಂದು ಆರೋಪಿಸಿದರು.


ಬಿಜೆಪಿ ವಿರುದ್ಧ ಒಟ್ಟುಗೂಡುತ್ತಿರುವ ಪ್ರಾದೇಶಿಕ ಪಕ್ಷಗಳು


ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ತೆಲಂಗಾಣ ಮುಖ್ಯಮಂತ್ರಿಗೆ ಫೋನ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 2024 ರ ರಾಷ್ಟ್ರೀಯ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಡೆಗಳನ್ನು ಒಟ್ಟುಗೂಡಿಸುವ ತಮ್ಮ ಸಾಮಾನ್ಯ ಕಾರ್ಯಸೂಚಿಯಲ್ಲಿ ಇಬ್ಬರು ಮುಖ್ಯಮಂತ್ರಿಗಳು ಒಂದಾಗಿದ್ದಾರೆ. 2024ರಲ್ಲಿ ಬಿಜೆಪಿಯನ್ನು ಎದುರಿಸುವ ಸಾಧ್ಯತೆಯ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ. ಬಿಜೆಪಿಯೊಂದಿಗಿನ ದಶಕಗಳ ಹಳೆಯ ಸಂಬಂಧವನ್ನು ಶಿವಸೇನೆ ಮುರಿದುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರದಂದು ಕೆಸಿಆರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದಾರೆ.

top videos


    ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಕೂಢ  ಶೀಘ್ರದಲ್ಲೇ ಸಭೆ ನಡೆಸುವ ಸಾಧ್ಯತೆ ಇದೆ. ಫೆಬ್ರವರಿ 13 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್, ಮಮತಾ ಬ್ಯಾನರ್ಜಿ ತನಗೆ ಕರೆ ಮಾಡಿದ್ದಾರೆ  ಅವರನ್ನು ಭೇಟಿ ಮಾಡಲು ಹೈದರಾಬಾದ್‌ಗೆ ಬರುವುದಾಗಿ ಹೇಳಿದ್ದಾರೆ ಎಂದು  ಹೇಳಿದರು.

    First published: