ಕೇಂದ್ರದಲ್ಲಿ ಕಾಂಗ್ರೆಸ್​​ ನೇತೃತ್ವದಲ್ಲಿ ಸರ್ಕಾರಕ್ಕೆ ಸಿದ್ಧ ಎಂದ ಕೆಸಿಆರ್​​; ಉಪ ಪ್ರಧಾನಿ ಹುದ್ದೆ ಮೇಲೆ ಬಿತ್ತಾ ತೆಲಂಗಾಣ ಸಿಎಂ ಕಣ್ಣು?

ಇತ್ತೀಚೆಗೆ ಡಿಎಂಕೆ ಅಧ್ಯಕ್ಷ ಸ್ಟಾಲಿನ್​​​​​ ಕೆಸಿಆರ್​​​ ಪ್ರಧಾನಿ ಹುದ್ದೆ ಕನಸಿಗೆ ತಣ್ಣೀರು ಎರಚಿದ್ದಾರೆ. ಹಾಗೆಯೇ ಕಾಂಗ್ರೆಸ್​​ ಮತ್ತು ಬಿಜೆಪಿಯೇತರ ತೃತೀಯ ರಂಗ ಸಾಧ್ಯವಿಲ್ಲ ಎಂದು ಸ್ಟಾಲಿನ್​​​ ಕೆಸಿಆರ್​​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೆ. ಚಂದ್ರಶೇಖರ್​​ ರಾವ್​

ಕೆ. ಚಂದ್ರಶೇಖರ್​​ ರಾವ್​

  • News18
  • Last Updated :
  • Share this:
ನವದೆಹಲಿ(ಮೇ.15): ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಬಾಕಿ ಇರುವಾಗಲೇ ದೇಶದಲ್ಲಿ ಅತಂತ್ರ ಫಲಿತಾಂಶ ಉಂಟಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದಂತಿದೆ. ಹಾಗಾಗಿಯೇ ಕಾಂಗ್ರೆಸ್​​ ವರಿಷ್ಠೆ ಸೋನಿಯಾ ಗಾಂಧಿಯವರು, ಬಿಜೆಪಿ ವಿರೋಧಿ ರಂಗ ರಚನೆಗೆ ಮುಂದಾಗಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​​ ಮತ್ತು ಬಿಜೆಪಿಯೇತರ ತೃತೀಯ ರಂಗ ಕಟ್ಟಲು ಸಕ್ರಿಯ ಓಡಾಟ ನಡೆಸುತ್ತಿದ್ದ ಸಿಎಂ ಕೆ. ಚಂದ್ರಶೇಖರ್​​ ರಾವ್​ ಅವರು ಕೂಡ, ರಾಹುಲ್​​ ಪಡೆ ಜತೆ ಮೈತ್ರಿಯಾಗುವುದಕ್ಕೆ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಪ್ರಧಾನಿ ಮಂತ್ರಿ ಹುದ್ದೆ ಮಾತ್ರ ಕಾಂಗ್ರೆಸ್​​ನವರಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಸದ್ಯ ಚುನಾವಣೆ ಫಲಿತಾಂಶ ಬರುವ ಹೊತ್ತಿಗೆ ದೇಶದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದು ಊಹಿಸಲು ಸಾಧ್ಯವಾಗದಂತೆ ಆಗಿದೆ. ತೃತೀಯ ರಂಗ ಸರ್ಕಾರ ರಚನೆಗೆ ಮುಂದಾಗುವ ಮೂಲಕ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದ ಸಿಎಂ ಕೆಸಿಆರ್​​ ಈಗ ಮನಸ್ಸು ಬದಲಿಸಿದಂತಿದೆ. ಪ್ರಧಾನಿ ಹುದ್ದೆ ಬದಲಿಗೆ ಟಿಆರ್​​ಎಸ್​​ ಮುಖ್ಯಸ್ಥ ಈಗ ಉಪಪ್ರಧಾನಿಯ ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ದೇಶದಲ್ಲೀಗ ಪ್ರಾದೇಶಿಕ ನಾಯಕರು ತೃತೀಯ ರಂಗ ರಚನೆ ಆಗಬೇಕು ಎನ್ನುತ್ತಿದ್ದಾರೆ. ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಈ ವಿಚಾರ ಕೆಸಿಆರ್​​ ಮತ್ತೆ ಮುನ್ನೆಲೆಗೆ ತಂದಿದ್ದೇನೆ. ಹೇಗಾದರೂ ಮಾಡಿ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಸರ್ಕಾರ ರಚನೆ ಮಾಡಬೇಕು. ಪ್ರಾದೇಶಿಕ ನಾಯಕರನ್ನು ಒಂದು ವೇದಿಕೆಗೆ ತರುವ ಪ್ರಯತ್ನ ಮಾಡುತ್ತಿರುವ ನನ್ನ ಪ್ರಯತ್ನಕ್ಕೆ ​ ಡಿಎಂಕೆ ಮತ್ತು ಜೆಡಿಎಸ್​ ಕೈ ಜೋಡಿಸಬಹುದು ಎಂದು ಕೆಸಿಆರ್​​ ಭಾವಿಸಿದ್ದರು.

ಆದರೆ, ಡಿಎಂಕೆ ಅಧ್ಯಕ್ಷ ಸ್ಟಾಲಿನ್​​​​​ ಕೆಸಿಆರ್​​​ ಪ್ರಧಾನಿ ಹುದ್ದೆ ಕನಸಿಗೆ ತಣ್ಣೀರು ಎರಚಿದ್ದಾರೆ. ಹಾಗೆಯೇ ಕಾಂಗ್ರೆಸ್​​ ಮತ್ತು ಬಿಜೆಪಿಯೇತರ ತೃತೀಯ ರಂಗ ಸಾಧ್ಯವಿಲ್ಲ ಎಂದು ಸ್ಟಾಲಿನ್​​​ ಕೆಸಿಆರ್​​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸ್ಟಾಲಿನ್​​​ ತೃತೀಯ ರಂಗಕ್ಕೆ ತಣ್ಣೀರು ಎರಚುತ್ತಿದ್ದಂತೆಯೇ ಕಾಂಗ್ರೆಸ್​​ ಜತೆಗಾದರೂ ಸೇರಿ ಸರ್ಕಾರ ರಚಿಸಬಹುದು ಎಂಬ ನಿರ್ಣಯಕ್ಕೆ ಕೆಸಿಆರ್​​ ಬಂದಂತಿದೆ. ಕಾಂಗ್ರೆಸ್ ತಾನಾಗಿಯೇ ಬೆಂಬಲ ನೀಡಿದರೆ ಕೇಂದ್ರ 'ಸರ್ಕಾರದಲ್ಲಿ ಮುಖ್ಯ ಪಾತ್ರ' ವಹಿಸುವುದಕ್ಕೆ ಸಾಧ್ಯವಿಲ್ಲ. ನಾವು ಹೇಳಿದಂತೆಯೇ ಕಾಂಗ್ರೆಸ್​ ಕೇಳಬಹುದು. ತೃತೀಯ ರಂಗ ಸರ್ಕಾರ ರಚನೆಯಾಗದೇ ಪ್ರಧಾನಿ ಅವಕಾಶ ತಪ್ಪಿದರೂ, ಉಪಪ್ರಧಾನಿ ಹುದ್ದೆಗಾದರೂ ಗಾಳ ಹಾಕಬಹುದು ಎಂದು ಕೆಸಿಆರ್ ಪ್ರಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
First published: