ಜ್ಯೋತಿಷಿಗಳ ಮಾತು ಕೇಳಿ ವಿಧಾನಸಭೆ ವಿಸರ್ಜಿಸುವ ನಿರ್ಧಾರ ತೆಗೆದುಕೊಂಡರೆ ತೆಲಂಗಾಣ ಸಿಎಂ ಕೆಸಿಆರ್?

news18
Updated:September 6, 2018, 9:41 AM IST
ಜ್ಯೋತಿಷಿಗಳ ಮಾತು ಕೇಳಿ ವಿಧಾನಸಭೆ ವಿಸರ್ಜಿಸುವ ನಿರ್ಧಾರ ತೆಗೆದುಕೊಂಡರೆ ತೆಲಂಗಾಣ ಸಿಎಂ ಕೆಸಿಆರ್?
  • Advertorial
  • Last Updated: September 6, 2018, 9:41 AM IST
  • Share this:
ನ್ಯೂಸ್ 18 ಕನ್ನಡ 

ಹೈದರಾಬಾದ್ (ಸೆ.6): ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಸಂಪುಟ ಸಭೆ ಕರೆದಿದ್ದು, ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಸಭೆಯ ನಂತರ ಮುಖ್ಯಮಂತ್ರಿ ಕೆಸಿಆರ್​ ಅವರು ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದ್ದು, ನಂತರ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಕೆಸಿಆರ್​ನ ಸಂಬಂಧಿ ನೀರಾವರಿ ಸಚಿವ ಹರೀಶ್ ರಾವ್ ಅವರು ಸಭೆ ಸುಸೂತ್ರವಾಗಿ ನೆರವೇರುವಂತೆ ಎಲ್ಲ ವ್ಯವಸ್ಥೆಯನ್ನು ಮಾಡಿದ್ದಾರೆ.

ತೆಲಂಗಾಣ ರಾಜ್ಯದ ವಿಧಾನಸಭೆ ಅವಧಿ ಮುಂದಿನ ವರ್ಷ ಜೂನ್​ಗೆ ಕೊನೆಗೊಳ್ಳಲಿದೆ. ಈ ರಾಜ್ಯದ ಚುನಾವಣೆ ಲೋಕಸಭೆ ಚುನಾವಣೆ ಜೊತೆಗೆ ಏಕಕಾಲದಲ್ಲಿಯೇ ನಡೆಯಲಿದೆ.

ಕಳೆದ ಭಾನುವಾರವೇ ವಿಧಾನಸಭೆ ವಿಸರ್ಜನೆ ಕುರಿತು ನಿರ್ಧಾರ ಪ್ರಕಟಿಸಬೇಕಿದ್ದ ಕೆಸಿಆರ್​ ಸಂಪುಟ ಸಭೆ ನಡೆಸಿದರಾದರೂ ಆ ಬಗ್ಗೆ ಒಂದು ಮಾತನ್ನು ಆಡಲಿಲ್ಲ.

ಜ್ಯೋತಿಷಿಗಳ ಪ್ರಕಾರ, ಕೆ.ಸಿ.ಚಂದ್ರಶೇಖರ್ ಅವರು ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರಂತೆ. ಸಂಖ್ಯೆ 6 ಚಂದ್ರಶೇಖರ್ ರಾವ್​ ಅವರಿಗೆ ಅದೃಷ್ಟದ ಅಂಕಿಯಂತೆ. ಹೀಗಾಗೆ 6 ತಾರೀಖಿನಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಂಪುಟ ಸಭೆ ನಡೆಸುತ್ತಿದ್ದಾರಂತೆ. ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ನಂಬಿಕಸ್ಥ ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರ ಸಲಹೆ ತೆಗೆದುಕೊಳ್ಳುತ್ತಾರಂತೆ. ಅವರ ಹತ್ತಿರದವರೊಬ್ಬರು ಹೇಳುವ ಪ್ರಕಾರ, ಜ್ಯೋತಿಷಿಗಳ ಸಲಹೆಯಂತೆ ಅವಧಿಗೂ ಮುನ್ನ ವಿಧಾನಸಭೆ ವಿಸರ್ಜಿಸುವ ತೀರ್ಮಾನ ಮಾಡಿದ್ದಾರಂತೆ.ಕೆಸಿಆರ್​ನ ಕೆಲ ಆತ್ಮೀಯರು ಈ ವಿಚಾರವನ್ನು ಮರೆ ಮಾಡಿ, ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸುವುದು ಕಷ್ಟ. ಈಗಲೇ ವಿಧಾನಸಭೆಗೆ ಚುನಾವಣೆ ನಡೆದರೆ ಟಿಆರ್​ಎಸ್​ ಪಕ್ಷಕ್ಕೆ ಹೆಚ್ಚು ಅನುಕೂಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಕೆಸಿಆರ್​ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ