Kathua Case Verdict; ಪೂಜಾರಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ, ಮೂವರು ಪೊಲೀಸ್ ಅಧಿಕಾರಿಗಳಿಗೆ 5 ವರ್ಷ ಜೈಲು

Kathua Case Verdict; ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಲಾಗಿತ್ತು. ಅಲ್ಲದೆ ಸತತ ಮೂರು ದಿನ ಆಕೆಯನ್ನು ಒಂದು ದೇವಾಲಯದಲ್ಲಿ ಇರಿಸಿ ಅತ್ಯಾಚಾರ ಮಾಡಿ ಕೊನೆಗೆ ಕೊಲೆ ಮಾಡಲಾಗಿತ್ತು.

HR Ramesh | news18
Updated:June 10, 2019, 6:00 PM IST
Kathua Case Verdict; ಪೂಜಾರಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ, ಮೂವರು ಪೊಲೀಸ್ ಅಧಿಕಾರಿಗಳಿಗೆ 5 ವರ್ಷ ಜೈಲು
ಕಥುವಾ ಪ್ರಕರಣದ ಪ್ರಮುಖ ಆರೋಪಿ ಸಂಜಿ ರಾಮ್​
  • News18
  • Last Updated: June 10, 2019, 6:00 PM IST
  • Share this:

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ದೇವಸ್ಥಾನ ಪೂಜಾರಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಪಠಾಣ್​ಕೋಟ್​ ವಿಶೇಷ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.ಪ್ರಕರಣ ಪ್ರಮುಖ ಆರೋಪಿ ಸಂಜಿ ರಾಮ್​ ಮತ್ತು ಆತನ ಸಂಬಂಧಿಗಳಾದ ಪರ್ವೇಶ್​ ಕುಮಾರ್, ದೀಪಕ್​ ಕುಂಜಾರಿಯಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಪೊಲೀಸ್​ ಸಬ್ಇನ್ಸ್​ಪೆಕ್ಟರ್​ ಆನಂದ್​ ದತ್ತಾ, ಹೆಡ್​ ಕಾನ್ಸ್​ಟೇಬಲ್​ ತಿಲಕ್​ ರಾಜ್​ ಮತ್ತು ವಿಶೇಷ ಪೊಲೀಸ್​ ಅಧಿಕಾರಿ ಸುರೇಂದರ್ ವರ್ಮಾ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ಏನಿದು ಪ್ರಕರಣ

ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ 8 ವರ್ಷದ ಬಾಲಕಿ ಕುದುರೆಗೆ ಮೇವು ತಿನ್ನಿಸಲು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಲಾಗಿತ್ತು. ಅಲ್ಲದೆ ಸತತ ಮೂರು ದಿನ ಆಕೆಯನ್ನು ಒಂದು ದೇವಾಲಯದಲ್ಲಿ ಇರಿಸಿ ಅತ್ಯಾಚಾರ ಮಾಡಿ ಕೊನೆಗೆ ಕೊಲೆ ಮಾಡಲಾಗಿತ್ತು.
ಬಾಲಕಿ ಅಪಹರಣವಾಗಿ ಮೂರು ದಿನಗಳ ನಂತರ ಆಕೆಯ ಮೃತ ದೇಹ ದೇವಾಲಯದ ಬಳಿ ಪತ್ತೆಯಾಗಿತ್ತು. ಈ ಪ್ರಕರಣ ದೇಶದಾದ್ಯಂತ ಭಾರೀ ಟೀಕೆಗೆ ಹಾಗೂ ಚರ್ಚೆಗೆ ಗುರಿಯಾಯಿತು. ನಂತರ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ತಮಗೆ ಪ್ರಾಣ ಭಯವಿದೆ ಹಾಗೂ ಇಲ್ಲಿ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಮೃತಳ ಪೋಷಕರು ಸುಪ್ರೀಂ ಕೋರ್ಟ್​ಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಮ್ಮು-ಕಾಶ್ಮೀರದಿಂದ 30 ಕಿಮೀ ದೂರ ವಿರುವ ಪಂಜಾಬ್ ಪ್ರಾಂತ್ಯದ ಪಠಾಣ್​ಕೋಟ್​ಗೆ ಈ ಪ್ರಕರಣವನ್ನು ಸುಪ್ರೀಂ ಹಸ್ತಾಂತರಿಸಿತ್ತು. ಅಲ್ಲದೆ ಪ್ರತಿದಿನ ವಿಡಿಯೋ ಕ್ಯಾಮರಾಗಳ ಮೂಲಕ ವಿಚಾರಣೆ ನಡೆಸಿ ಶೀಘ್ರದಲ್ಲಿ ತೀರ್ಪು ನೀಡಬೇಕು ಎಂದು ನಿರ್ದೇಶನ ನೀಡಿತ್ತು. ಸತತ ವಿಚಾರಣೆ ನಡೆಸಿರುವ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಶಾಚಿಕ ಕೃತ್ಯ ಸಾಕ್ಷಿ ಸಮೇತ ಋಜುವಾತಾಗಿದೆ ಎಂದು ಅಭಿಪ್ರಾಯಪಟ್ಟು, ಈ ಶಿಕ್ಷೆ ವಿಧಿಸಿದೆ. ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂಬ ಕೂಗು ವ್ಯಾಪಕವಾಗಿತ್ತು. ಆದರೆ, ಮರಣದಂಡನೆ ಶಿಕ್ಷೆಯಿಂದ ಪಾರಾಗಿರುವ ತಪ್ಪಿತಸ್ಥರು ಈ ಶಿಕ್ಷೆಗೆ ಗುರಿಯಾಗಿದ್ದಾರೆ.

First published: June 10, 2019, 5:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading