ಕಮ್ಯೂನಿಸ್ಟ್, ಸೆಕ್ಯೂಲರಿಸ್ಟ್ ನಂಬಿಕೊಂಡ್ರೆ ಏನು ಸಾಧಿಸುತ್ತೀರಿ? ದಂಗೆ ಏಳಿ ಎಂದು ಮುಸ್ಲಿಮರಿಗೆ ಕರೆ ನೀಡಿದ ಕಾಶ್ಮೀರೀ ಉಗ್ರ ಸಂಘಟನೆ

ಕಮ್ಯೂನಿಸ್ಟ್ ಪಕ್ಷದ ಯುವ ಮುಖಂಡ ಕನ್ಹಯ್ಯ ಕುಮಾರ್, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಮುಸ್ಲಿಮ್ ಪಂಡಿತರಾದ ಮಹಮೂದ್ ಮದನಿ, ಅರ್ಷದ್ ಮದನಿ ಮೊದಲಾದವರೂ ಕೂಡ ಮುಸ್ಲಿಮ್ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾವತ್-ಉಲ್-ಹಿಂದ್ ಆಕ್ರೋಶ ವ್ಯಕ್ತಪಡಿಸಿದೆ.

Vijayasarthy SN | news18
Updated:February 25, 2020, 1:50 PM IST
ಕಮ್ಯೂನಿಸ್ಟ್, ಸೆಕ್ಯೂಲರಿಸ್ಟ್ ನಂಬಿಕೊಂಡ್ರೆ ಏನು ಸಾಧಿಸುತ್ತೀರಿ? ದಂಗೆ ಏಳಿ ಎಂದು ಮುಸ್ಲಿಮರಿಗೆ ಕರೆ ನೀಡಿದ ಕಾಶ್ಮೀರೀ ಉಗ್ರ ಸಂಘಟನೆ
ಉಗ್ರ ಸಂಘಟನೆ
  • News18
  • Last Updated: February 25, 2020, 1:50 PM IST
  • Share this:
ನವದೆಹಲಿ(ಫೆ. 15): ಎರಡು ತಿಂಗಳಿನಿಂದ ಶಾಂತಿಯುತ ಪೌರತ್ವ ಕಾಯ್ದೆ ವಿರೋಧಿ ಹೋರಾಟ ಕಂಡಿದ್ದ ದೆಹಲಿಯಲ್ಲಿ ನಿನ್ನೆಯಿಂದ ಹಿಂಸಾಚಾರ ಉದ್ಭವಿಸಿದೆ. ಪೌರತ್ವ ಕಾಯ್ದೆ ವಿರೋಧಿ ಹೋರಾಟಗಾರರು ಮತ್ತು ಪೌರತ್ವ ಕಾಯ್ದೆ ಸಮರ್ಥಕ ಗುಂಪುಗಳ ಮಧ್ಯೆ ಘರ್ಷಣೆಯಾಗಿದೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು  ಹಲವರು ಮೃತಪಟ್ಟಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ಧಾರೆ. ಉಗ್ರ ಸಂಘಟನೆಗಳಿಗೆ ಅನುಕೂಲವಾಗುವಂಥ ಪರಿಸರ ನಿರ್ಮಣವಾಗುತ್ತಿದೆ. ವಿಶ್ವದಲ್ಲಿ ಇಸ್ಲಾಮ್​ನ ದೊಡ್ಡ ಸಾಮ್ರಾಜ್ಯ ನಿರ್ಮಿಸಲುವ ಕನಸು ಕಾಣುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ದೆಹಲಿಯ ಹಿಂಸಾಚಾರವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಯತ್ನಿಸಿದೆ. ಶಾಂತಿಯುತ ಪ್ರತಿಭಟನೆ ಕೈಬಿಟ್ಟು ಹಿಂಸಾ ಮಾರ್ಗ ಹಿಡಿಯುವಂತೆ ಭಾರತೀಯ ಮುಸ್ಲಿಮರಿಗೆ ಇಸ್ಲಾಮಿಕ್ ಸ್ಟೇಟ್ ಕರೆ ನೀಡಿದೆ.

ಕಾಶ್ಮೀರ ವಿಭಾಗದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಆನ್​ಲೈನ್ ಪತ್ರಿಕೆಯಾದ ಸಾವತ್ ಉಲ್ ಹಿಂದ್ (ಹಿಂದೂಸ್ತಾನದ ಧ್ವನಿ) ನಿನ್ನೆ ರಾತ್ರಿ ಮುಸ್ಲಿಮರನ್ನು ಪ್ರಚೋದಿಸುವ ಬರಹವನ್ನು ಪ್ರಕಟಿಸಿದೆ. ಪ್ರಜಾಪ್ರಭುತ್ವದಲ್ಲಿ ನಿಮಗೆ ರಕ್ಷಣೆ ಸಿಕ್ಕೋದಿಲ್ಲ. ಖಿಲಾಫಾದ ಅಡಿಯಲ್ಲಿ ಶರಿಯಾದ ಮೂಲ ಕಾನೂನು ಜಾರಿಗೆ ಬಂದರೆ ಬಂದರೆ ಮಾತ್ರ ನೀವು ಬದುಕಬಹುದು ಎಂದು ಈ ಪತ್ರಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಆರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೂ ಹೆಚ್1ಎನ್1 ಸೋಂಕು

“ಹಿಂದೂಸ್ತಾನದಲ್ಲಿರುವ ಮುಸ್ಲಿಮರೆ, ಮೈಮೇಲೆ ಪ್ರಜ್ಞೆಯೇ ಇಲ್ಲದಷ್ಟು ನಿದ್ರಾವಸ್ತೆಗೆ ಜಾರಿರುವ ನೀವು ಎಚ್ಚೆತ್ತುಕೊಳ್ಳುವ ಸಮಯ ಇನ್ನೂ ಬಂದಿಲ್ಲವೇ? ನೀವು ಇಸ್ಲಾಮ್ ಧರ್ಮವನ್ನು ತ್ಯಜಿಸುವವರೆಗೂ ವಿಗ್ರಹಾರಾಧಕ ಹಿಂದೂಗಳು ನಿಮ್ಮ ಬಗ್ಗೆ ತೃಪ್ತಿ ಹೊಂದಲಾರರು ಎಂಬುದು ನಿಮಗೆ ಇನ್ನೂ ಅರಿವಾಗಿಲ್ಲವೇ?” ಎಂದು ಪ್ರಶ್ನೆ ಮಾಡಲಾಗಿದೆ.

ಭಾರತದಲ್ಲಿ ಮುಸ್ಲಿಮರ ದಯನೀಯ ಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಷ್ಟೇ ಅಲ್ಲ ಜಾತ್ಯತೀತರು ಮತ್ತು ಕಮ್ಯೂನಿಸ್ಟರೂ ಕಾರಣರೆಂದು ಈ ಪತ್ರಿಕೆ ಟೀಕಿಸಿದೆ. ಕಮ್ಯೂನಿಸ್ಟ್ ಪಕ್ಷದ ಯುವ ಮುಖಂಡ ಕನ್ಹಯ್ಯ ಕುಮಾರ್, ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, ಮುಸ್ಲಿಮ್ ಪಂಡಿತರಾದ ಮಹಮೂದ್ ಮದನಿ, ಅರ್ಷದ್ ಮದನಿ ಮೊದಲಾದವರೂ ಕೂಡ ಮುಸ್ಲಿಮ್ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಾವತ್-ಉಲ್-ಹಿಂದ್ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ತಾಜ್ ಮಹಲ್ ಹಾಗೂ ಪ್ರೇಮಕಥೆ ತಿಳಿದು ಭಾವುಕರಾದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ

“ದೇವರ ಸನ್ನಿಧಾನಕ್ಕೆ ಹೋಗಲು ಇದು ಸರಿಯಾದ ಮಾರ್ಗ ಎಂದನಿಸುತ್ತದಾ? ಕಮ್ಯೂನಿಸ್ಟರು, ನಾಸ್ತಿಕರು, ಕ್ರೈಸ್ತರು ಮತ್ತು ಜಾತ್ಯತೀತರೊಂದಿಗೆ ಕೈ ಜೋಡಿಸಿದರೆ ನಿಮ್ಮ ಬಯಕೆ ಈಡೇರುತ್ತದೆ ಎಂದುಕೊಂಡಿರಾ?” ಎಂದು ಪ್ರಶ್ನಿಸಿದೆ.ಅಲ್ಲದೇ, ಭಾರತೀಯ ಮುಸ್ಲಿಮರು ಎಷ್ಟರಮಟ್ಟಿಗೆ ರಾಜಿ ಮಾಡಿಕೊಂಡಿದ್ದಾರೆಂದರೆ ಅವರು ಮತ್ತು ಹಿಂದೂಗಳ ಮಧ್ಯೆ ಹೆಸರಷ್ಟೇ ವ್ಯತ್ಯಾಸ ಕಾಣುತ್ತದೆ ಎಂದೂ ಈ ಡಿಜಿಟಲ್ ಪತ್ರಿಕೆ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಶ್ಮೀರೀ ಜಿಹಾದಿ ಸಂಘಟನೆಗಳ ತಜ್ಞ ಖಾಲಿದ್ ಶಾ ಅವರು ಮುಸ್ಲಿಮರ ಭಯವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.

“ಸಿಎಎ ಬಗ್ಗೆ ಮುಸ್ಲಿಮರಿಗೆ ಇರುವ ಭಯ ಮತ್ತು ಆತಂಕಗಳನ್ನು ಇಸ್ಲಾಮೀ ಸಂಘಟನೆಗಳು ತಮ್ಮ ಅನುಕೂಲಕ್ಕೆ ಬಳಕೆ ಮಾಡಿಕೊಂಡು ತಮ್ಮ ಉದ್ದೇಶಕ್ಕೆ ಮಾನ್ಯತೆ ಸಿಗುವ ಪ್ರಯತ್ನ ಮಾಡಿದ್ಧಾರೆ. ನಾಯಕರಹಿತವಾಗಿ ನಡೆಯುತ್ತಿರುವ ಈ ಪ್ರತಿಭಟನೆಗಳಿಂದ ಲಾಭ ಮಾಡಿಕೊಳ್ಳುವುದು ಅವರ ಉದ್ದೇಶ” ಎಂದು ಖಾಲಿದ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ