• Home
  • »
  • News
  • »
  • national-international
  • »
  • Pulitzer Prize: ಪುಲಿಟ್ಜರ್ ಪ್ರಶಸ್ತಿ ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸದಂತೆ ಫೋಟೊ ಜರ್ನಲಿಸ್ಟ್‌ಗೆ ತಡೆ

Pulitzer Prize: ಪುಲಿಟ್ಜರ್ ಪ್ರಶಸ್ತಿ ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸದಂತೆ ಫೋಟೊ ಜರ್ನಲಿಸ್ಟ್‌ಗೆ ತಡೆ

ಸನ್ನಾ ಇರ್ಷಾದ್ ಮಟ್ಟೂ

ಸನ್ನಾ ಇರ್ಷಾದ್ ಮಟ್ಟೂ

28 ವರ್ಷದ ಸನ್ನಾ ಇರ್ಷಾದ್ ಮಟ್ಟೂ, ನ್ಯೂಯಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ಅಧಿಕಾರಿಗಳು ಇವರನ್ನು ಹೋಗದಂತೆ ಅಲ್ಲೇ ತಡೆದಿದ್ದಾರೆ. ಈ ಘಟನೆ ಜುಲೈನಲ್ಲಿ ನಡೆದಿದ್ದು, ಮೂರು ತಿಂಗಳ ನಂತರ ಇರ್ಷಾದ್ ಮಟ್ಟೂ ಟ್ವೀಟ್‌ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Jammu and Kashmir, India
  • Share this:

ಪುಲಿಟ್ಜರ್ ವಿಜೇತೆ (Pulitzer winner) ಕಾಶ್ಮೀರಿ ಫೋಟೊ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರು ತಮ್ಮ ಪ್ರಶಸ್ತಿಯನ್ನು ಸ್ವೀಕರಿಸಲು ಯುನೈಟೆಡ್ ಸ್ಟೇಟ್ಸ್‌ಗೆ (United States) ತೆರಳುವ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾನ್ಯವಾದ ವೀಸಾ ಮತ್ತು ಟಿಕೆಟ್ ಹೊಂದಿದ್ದರೂ ದೆಹಲಿ ವಿಮಾನ ನಿಲ್ದಾಣದಲ್ಲಿ(Airport) ಅವರನ್ನು ನಿರ್ಬಂಧಿಸಲಾಗಿದೆ. ಸನ್ನಾ ಇರ್ಷಾದ್ ಮಟ್ಟೂ (Sanna Irshad Mattoo) ಅವರು ಶ್ರೀನಗರ ಮೂಲದ ಜಮ್ಮು ಮತ್ತು ಕಾಶ್ಮೀರದ ಭಾರತೀಯ ಭೂಪ್ರದೇಶದ ಫೋಟೋ ಜರ್ನಲಿಸ್ಟ್. ಕೋವಿಡ್ ಸಾಂಕ್ರಾಮಿಕದ ಪ್ರಸಾರಕ್ಕಾಗಿ 2022ರ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಅಗತ್ಯ ದಾಖಲೆಗಳಿದ್ದರೂ ನಿರ್ಬಂಧ
28 ವರ್ಷದ ಸನ್ನಾ ಇರ್ಷಾದ್ ಮಟ್ಟೂ, ನ್ಯೂಯಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸಲು ಯುಎಸ್‌ಗೆ ಪ್ರಯಾಣಿಸಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಆದರೆ ಅಧಿಕಾರಿಗಳು ಇವರನ್ನು ಹೋಗದಂತೆ ಅಲ್ಲೇ ತಡೆದಿದ್ದಾರೆ. ಈ ಘಟನೆ ಜುಲೈನಲ್ಲಿ ನಡೆದಿದ್ದು, ಮೂರು ತಿಂಗಳ ನಂತರ ಇರ್ಷಾದ್ ಮಟ್ಟೂ ಟ್ವೀಟ್‌ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ. ಅಗತ್ಯ ದಾಖಲೆಗಳಿದ್ದರೂ ತನ್ನನ್ನು ತಡೆದಿರುವುದಾಗಿ ಕಾಶ್ಮೀರ ಮೂಲದ ಮಟ್ಟೂ ಹೇಳಿದ್ದಾರೆ.


ಇದನ್ನೂ ಓದಿ:  Viral News: ಗಂಡನ ಜೀವ ಉಳಿಸೋಕೆ 70ರಲ್ಲೂ ತನ್ನ ಕಿಡ್ನಿ ದಾನ ಮಾಡಿದ ಹೆಂಡ್ತಿ! ಇಂಥ ಪತ್ನಿ ಎಷ್ಟು ಜನಕ್ಕೆ ಸಿಗ್ತಾರೆ ಹೇಳಿ


ಟ್ವೀಟ್‌ ಮೂಲಕ ಬೇಸರ ವ್ಯಕ್ತಪಡಿಸಿದ ಇರ್ಷಾದ್ ಮಟ್ಟೂ
ಘಟನೆ ನಡೆದು ಮೂರು ತಿಂಗಳ ಬಳಿಕ ಟ್ವೀಟ್‌ ಮಾಡಿರುವ ಇರ್ಷಾದ್ ಮಟ್ಟೂ "ನಾನು ನ್ಯೂಯಾರ್ಕ್‌ನಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು (@Pulitzerprizes) ಸ್ವೀಕರಿಸಲು ಹೊರಟಿದ್ದೆ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನನ್ನನ್ನು ತಡೆ ಹಿಡಿದರು. ನನ್ನ ಬಳಿ ಮಾನ್ಯವಾದ ಯುಎಸ್ ವೀಸಾ ಮತ್ತು ಟಿಕೆಟ್ ‌ಇದ್ದರೂ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸಲಾಯಿತು" ಎಂದು ಅವರು ಟ್ವೀಟ್ ಮಾಡಿದ್ದಾರೆ. ಇರ್ಷಾದ್ ಮಟ್ಟೂ ತನ್ನ ಪಾಸ್‌ಪೋರ್ಟ್‌ನ ಫೋಟೋ, ಬೋರ್ಡಿಂಗ್ ಪಾಸ್ ಮತ್ತು "ದಿ ಪುಲಿಟ್ಜರ್ ಪ್ರಶಸ್ತಿಗಳು" ಎಂಬ ಶೀರ್ಷಿಕೆಯೊಂದಿಗೆ ಈ ವಿಚಾರವನ್ನು ಟ್ವೀಟ್‌ ಮಾಡಿದ್ದಾರೆ.


ಎರಡನೇ ಬಾರಿ ಇರ್ಷಾದ್ ಮಟ್ಟೂಗೆ ನಿರ್ಬಂಧ
"ಕಾರಣ ಅಥವಾ ಕಾರಣವಿಲ್ಲದೆ ನನ್ನನ್ನು ನಿಲ್ಲಿಸಿರುವುದು ಇದು ಎರಡನೇ ಬಾರಿ. ಮೂರು ತಿಂಗಳ ಅವಧಿಯಲ್ಲಿ ಭಾರತವನ್ನು ತೊರೆಯದಂತೆ ಎರಡು ಬಾರಿ ನನ್ನನ್ನು ನಿರ್ಬಂಧಿಸಲಾಗಿದೆ. ಕೆಲವು ತಿಂಗಳುಗಳ ಹಿಂದೆ ನಡೆದ ಘಟನೆಯ ನಂತರ ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿದರೂ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಜೀವಮಾನದಲ್ಲಿ ಒಮ್ಮೆ ಸಿಕ್ಕ ಅವಕಾಶವಾಗಿದೆ. ಆದರೆ ಅಧಿಕಾರಿಗಳ ಈ ನಡೆ ಬಗ್ಗೆ ನನಗೆ ಇನ್ನೂ ತಿಳಿಯುತ್ತಿಲ್ಲ" ಎಂದಿದ್ದಾರೆ.


ಫ್ರಾನ್ಸ್‌ ಪ್ರಯಾಣವನ್ನೂ ತಡೆಹಿಡಿದ ಅಧಿಕಾರಿಗಳು
ಸೆರೆಂಡಿಪಿಟಿ ಆರ್ಲೆಸ್ ಗ್ರ್ಯಾಂಟ್‌ನ 10 ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿ ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಪ್ರದರ್ಶನಕ್ಕಾಗಿ ಫ್ರಾನ್ಸ್‌ಗೆ ಪ್ರಯಾಣಿಸುತ್ತಿದ್ದ ಮಟ್ಟೂ ಅವರನ್ನು ಜುಲೈ 2 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಂತರ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದು, ಕಾರಣವನ್ನು ನಿರ್ದಿಷ್ಟಪಡಿಸದೆ ಮಟ್ಟೂ ಅವರ ಹೆಸರು ನೋ ಫ್ಲೈ ಲಿಸ್ಟ್‌ನಲ್ಲಿದೆ ಎಂದಿದ್ದರು.


ಇದನ್ನೂ ಓದಿ:  Arshabh Behera: ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಹೆಸರು ದಾಖಲಿಸಿದ 7 ವರ್ಷದ ಬಾಲಕ


ಮಟ್ಟೂ, ಅದ್ನಾನ್ ಅಬಿದಿ, ಅಮಿತ್ ಡೇವ್ ಮತ್ತು ಡ್ಯಾನಿಶ್ ಸಿದ್ದಿಕಿ ಅವರಿಗೆ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಸಾರಕ್ಕಾಗಿ ವೈಶಿಷ್ಟ್ಯ ಛಾಯಾಗ್ರಹಣ ವಿಭಾಗದಲ್ಲಿ 2022 ರ ಪುಲಿಟ್ಜೆರ್ ಪ್ರಶಸ್ತಿಯನ್ನು ನೀಡಲಾಯಿತು.


ಕಾಶ್ಮೀರಿ ಪತ್ರಕರ್ತರಿಗೆ ತಡೆ
ಕಾಶ್ಮೀರದ ಮತ್ತೊಬ್ಬ ಪತ್ರಕರ್ತ ಆಕಾಶ್ ಹಾಸನ್ ಅವರನ್ನು ಜುಲೈ 26 ರಂದು ಕೊಲಂಬೊಗೆ ತರಳದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿಯೇ ತಡೆಹಿಡಿಯಲಾಗಿತ್ತು. 2019 ರಲ್ಲಿ, ಕಾಶ್ಮೀರಿ ಪತ್ರಕರ್ತ-ಲೇಖಕ ಗೋಹರ್ ಗಿಲಾನಿ ಜರ್ಮನಿಗೆ ಪ್ರಯಾಣಿಸದಂತೆ ಅಧಿಕಾರಿಗಳು ತಡೆದಿದ್ದರು.

Published by:Ashwini Prabhu
First published: