ಹುರಿಯತ್ ಕಾನ್ಫೆರೆನ್ಸ್​ಗೆ ಪ್ರತ್ಯೇಕತಾವಾದಿಗಳ ನಾಯಕ ಸೈಯದ್ ಅಲಿ ಗೀಲಾನಿ ರಾಜೀನಾಮೆ

1993ರಿಂದ ಕಾಶ್ಮೀರದ ಪ್ರತ್ಯೇಕತಾವಾದಿ ಚಳುವಳಿಯನ್ನು ಮುನ್ನಡೆಸಿದ್ದ ಸೈಯದ್ ಶಾ ಅಲಿ ಗೀಲಾನಿ ರಾಜೀನಾಮೆ ನೀಡಿದ್ದಾರೆ. 90 ವರ್ಷದ ಗೀಲಾನಿ ಅನಾರೋಗ್ಯದ ನಡುವೆ ಆಡಿಯೋ ಸಂದೇಶದ ಮೂಲಕ ರಾಜೀನಾಮೆ ನೀಡಿರುವ ವಿಚಾರವನ್ನು ತಿಳಿಸಿದ್ದಾರೆ.

Sushma Chakre | news18-kannada
Updated:June 29, 2020, 2:59 PM IST
ಹುರಿಯತ್ ಕಾನ್ಫೆರೆನ್ಸ್​ಗೆ ಪ್ರತ್ಯೇಕತಾವಾದಿಗಳ ನಾಯಕ ಸೈಯದ್ ಅಲಿ ಗೀಲಾನಿ ರಾಜೀನಾಮೆ
ಸೈಯದ್ ಅಲಿ ಷಾ ಗೀಲಾನಿ
  • Share this:
ನವದೆಹಲಿ (ಜೂ. 29): ಕಳೆದ 27 ವರ್ಷಗಳಿಂದ ಕಾಶ್ಮೀರದ ಪ್ರತ್ಯೇಕತಾವಾದಿಯಾಗಿ ಗುರುತಿಸಿಕೊಂಡಿದ್ದ ಸೈಯದ್ ಅಲಿ ಷಾ ಗೀಲಾನಿ ಪ್ರತ್ಯೇಕತಾವಾದಿಗಳ ಸಂಘಟನೆಯಾದ ಹುರಿಯತ್ ಕಾನ್ಫರೆನ್ಸ್​ಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯೇ ತಮ್ಮ ಈ ನಿರ್ಧಾರಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

2003ರಲ್ಲಿ ಗಿಲಾನಿ ಅವರನ್ನು ಹುರಿಯತ್ ಕಾನ್ಫರೆನ್ಸ್​ಗೆ ಚೇರ್ಮನ್ ಆಗಿ ನೇಮಕ ಮಾಡಲಾಗಿತ್ತು. 90 ವರ್ಷದ ಗೀಲಾನಿ ಅನಾರೋಗ್ಯದ ನಡುವೆ ಆಡಿಯೋ ಸಂದೇಶದ ಮೂಲಕ ಹುರಿಯತ್ ಕಾನ್ಫರೆನ್ಸ್​ಗೆ ರಾಜೀನಾಮೆ ನೀಡಿರುವ ವಿಚಾರವನ್ನು ತಿಳಿಸಿದ್ದಾರೆ. ಆದರೆ, ಇದಕ್ಕೆ ನಿಖರವಾದ ಕಾರಣವನ್ನು ಅವರು ನೀಡಿಲ್ಲ. ನನ್ನ ಈ ನಿರ್ಧಾರಕ್ಕೆ ಸದ್ಯದ ಪರಿಸ್ಥಿತಿಯೇ ಕಾರಣ ಎಂದಷ್ಟೇ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನನಗೆ ಉಸಿರಾಡಲೂ ಆಗುತ್ತಿಲ್ಲ ಅಪ್ಪಾ; ಆಸ್ಪತ್ರೆಯಿಂದ ಸೆಲ್ಫೀ ವಿಡಿಯೋ ಕಳುಹಿಸಿ ಪ್ರಾಣ ಬಿಟ್ಟ ಮಗ!


2018ರಲ್ಲಿ ಗೀಲಾನಿ ತಮ್ಮದೇ ಆದ ಪ್ರತ್ಯೇಕತಾವಾದಿ ಪಕ್ಷ ತೆಹ್ರೀಕ್-ಎ-ಹುರಿಯತ್ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು. ಬಳಿಕ ಗಿಲಾನಿ ಅವರ ಆಪ್ತ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಟಿಇಎಚ್ ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. 1993ರಿಂದ ಕಾಶ್ಮೀರದ ಪ್ರತ್ಯೇಕತಾವಾದಿ ಚಳುವಳಿಯನ್ನು ಮುನ್ನಡೆಸಿದ್ದ ಸೈಯದ್ ಶಾ ಅಲಿ ಗೀಲಾನಿ ಇದೀಗ ರಾಜೀನಾಮೆ ನೀಡಿದ್ದಾರೆ. ಅವರಿಗೆ ಕೆಲವು ದಿನಗಳಿಂದ ಆರೋಗ್ಯ ಸರಿಯಿರಲಿಲ್ಲ. ಗೀಲಾನಿ ಅವರ ಈ ದಿಢೀರ್ ನಿರ್ಧಾರದಿಂದ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳು ಆಶ್ಚರ್ಯಗೊಂಡಿದ್ದಾರೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading