Kashmir Solution: ಕಾಶ್ಮೀರದ ಅವ್ಯವಸ್ಥೆ ಪರಿಹರಿಸಿ ಎಂದ IIT ಪದವೀಧರರಿಗೆ ರೂ. 50,000 ದಂಡ!

ಜಮ್ಮು ಮತ್ತು ಕಾಶ್ಮೀರಕ್ಕೆ ಮನಮೋಹನ್-ಮುಷರಫ್ ಸೂತ್ರವನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯು ಸುಪ್ರೀಂ ಕೋರ್ಟ್‌ನ ಆಕ್ರೋಶಕ್ಕೆ ಕಾರಣವಾಗಿದ್ದು, ಅರ್ಜಿದಾರ ಪ್ರಭಾಕರ ವೆಂಕಟೇಶ್ ದೇಶಪಾಂಡೆ ಮೇಲೆ ಸುಪ್ರೀಂ ಕೋರ್ಟ್ ರೂ 50,000 ದಂಡವನ್ನು ವಿಧಿಸಿದೆ.

ಐಐಟಿ ಮುಂಬೈ

ಐಐಟಿ ಮುಂಬೈ

  • Share this:
ಕಾಶ್ಮೀರ ಅವ್ಯವಸ್ಥೆಯನ್ನು ಪರಿಹರಿಸಲು ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir)  ಮನಮೋಹನ್-ಮುಷರಫ್ ಸೂತ್ರವನ್ನು ಜಾರಿಗೆ ತರುವಂತೆ ಕೋರಿ ಸಲ್ಲಿಸಲಾದ ಅರ್ಜಿಯು ಸುಪ್ರೀಂ ಕೋರ್ಟ್‌ನ (Supreme Court) ಆಕ್ರೋಶಕ್ಕೆ ಕಾರಣವಾಗಿದ್ದು, ಅರ್ಜಿದಾರ ಪ್ರಭಾಕರ ವೆಂಕಟೇಶ್ ದೇಶಪಾಂಡೆ ಮೇಲೆ ಸುಪ್ರೀಂ ಕೋರ್ಟ್ ರೂ 50,000 ದಂಡವನ್ನು ವಿಧಿಸಿದೆ. ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವಿನ ಕಾಶ್ಮೀರ ವಿವಾದಕ್ಕೆ ಮಿಲಿಟರಿ ಪರಿಹಾರ ಕಾರ್ಯಸಾಧ್ಯವಲ್ಲ ಎಂದು ಅರ್ಜಿದಾರರಾದ ಪ್ರಭಾಕರ ವೆಂಕಟೇಶ್ ದೇಶಪಾಂಡೆ (Prabhakar Venkatesh Deshpande) ವಾದಿಸಿದರು. ಬದಲಿಗೆ ಮನಮೋಹನ್-ಮುಷರಫ್ ಅವರ ನಾಲ್ಕು ಪಟ್ಟಿ ಸೂತ್ರ ಎಂದು ಕರೆಯಲಾದ ಅನುಷ್ಟಾನವನ್ನು ದೇಶಪಾಂಡೆ ಬೆಂಬಲಿಸಿದರು.

4 ಅಂಶಗಳ ಹೊಸ ಸೂತ್ರ ಜಾರಿಗೆ ತರುವಂತೆ ಕೋರಿ ಅರ್ಜಿ
ಐಐಟಿ ಪದವೀಧರರಾದ ಅರ್ಜಿದಾರರು ನ್ಯಾಯಾಲಯದ ಸಮಯವನ್ನು ವ್ಯರ್ಥಮಾಡಿದ್ದಾರೆಂದು ದ್ವಿಸದಸ್ಯ ಪೀಠವು ಹೇಳಿದೆ. ಪ್ರಭಾಕರ್ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ನಾವು ಒಲವು ಹೊಂದಿಲ್ಲವೆಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಹೇಳಿದೆ.

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಧಿಕಾರಾವಧಿಯಲ್ಲಿ ರೂಪಿಸಲಾದ 4 ಅಂಶಗಳ ಹೊಸ ಸೂತ್ರವನ್ನು ಜಾರಿಗೆ ತಂದಲ್ಲಿ ಕಾಶ್ಮೀರ ವಿವಾದವನ್ನು ಪರಿಹರಿಸಬಹುದು ಎಂದು ಪ್ರಭಾಕರ್ ಪೀಠಕ್ಕೆ ತಿಳಿಸಿದ್ದರು. ಅಂತೆಯೇ ಹೊಸ ಸೂತ್ರವನ್ನು ಜಾರಿಗೆ ತರುವಂತೆ ಕೋರಿದ್ದರು. ಸೂತ್ರವು ಸ್ವಾಯತ್ತತೆ, ಜಂಟಿ ನಿಯಂತ್ರಣ, ಸಶಸ್ತ್ರೀಕರಣ ಮತ್ತು ದೇಶಗಳನ್ನು ವಿಭಜಿಸುವ ಗಡಿ ರೇಖೆಗಳನ್ನು ಒಳಗೊಂಡಿತ್ತು.

ಇದನ್ನೂ ಓದಿ: Bharat Jodo: ಯೇಸು ಮಾತ್ರ ನಿಜವಾದ ದೇವರು: ವಿವಾದಿತ ಪಾದ್ರಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಬಿಜೆಪಿ, ಕೈ ಸಮರ!

ಅರ್ಜಿದಾರರಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್
ಕೇಂದ್ರ ಸರಕಾರದ ನೀತಿಯ ವ್ಯಾಪ್ತಿಯನ್ನು ಪ್ರವೇಶಿಸಲು ಹಾಗೂ ಸರಕಾರದ ನಿಯಮಗಳಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ತಿಳಿಸಿದ್ದು, ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿದೆ ಹಾಗೂ ಅರ್ಜಿದಾರರಿಗೆ ರೂ 50,000 ಜುಲ್ಮಾನೆಯನ್ನು ವಿಧಿಸಿದೆ. ಆರಂಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ಸೂಚನೆ ನೀಡಿದ್ದು, ಇಂತಹ ಅರ್ಜಿಗಳೊಂದಿಗೆ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದಲ್ಲಿ ನ್ಯಾಯಾಲಯ ವಿಧಿಸುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ನಿಜವಾಗಿಯೂ ನಿಮ್ಮ ಅರ್ಜಿಯನ್ನು ನಾವು ಪರಿಗಣಿಸುತ್ತೇವೆ ಅಂತೆಯೇ ನಿಮ್ಮ ವಾದವನ್ನು ಆಲಿಸುತ್ತೇವೆ ಆದರೆ ವೆಚ್ಚವನ್ನು ವಿಧಿಸುತ್ತಿದ್ದೇವೆ ಎಂಬ ಸೂಚನೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂಬುದಾಗಿ ಪೀಠವು ಮುನ್ಸೂಚನೆ ನೀಡಿದೆ.

ಈ ಬಗ್ಗೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು ಏನು ಹೇಳಿದ್ದಾರೆ 
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರಾದ ಅರೂಪ್ ಬ್ಯಾನರ್ಜಿ, 70 ವರ್ಷಗಳಲ್ಲಿ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದೊಂದಿಗೆ ದೇಶವು ಏಕಕಾಲದಲ್ಲಿ ಆಂತರಿಕ ಯುದ್ಧಗಳನ್ನು ನಡೆಸಿದೆ ಆದರೆ ಯಾವುದೇ ಪರಿಹಾರ ಕಂಡುಬಂದಿಲ್ಲ. ಅರ್ಜಿದಾರರು ತ್ವರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸುವಂತೆ ವಿನಂತಿಸುತ್ತಿರುವುದರಿಂದ ಮುಷರಫ್-ಮನಮೋಹನ್ ಸಿಂಗ್ ಒಪ್ಪಂದವನ್ನು ಜಾರಿಗೆ ತರಬಹುದು ಎಂದು ಸೂಚಿಸುತ್ತಿದ್ದಾರೆ ಎಂಬುದಾಗಿ ಮನವಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: HDI: ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ: ಭಾರತಕ್ಕೆ ಎಷ್ಟನೇ ಸ್ಥಾನ? 

ಕೆಲವು ನಿಮಿಷಗಳ ಕಾಲ ವಿಚಾರಣೆ ನಡೆಸಿದ ಪೀಠವು, ಅರ್ಜಿಯನ್ನು ಪರಿಗಣಿಸಲು ಒಲವು ಹೊಂದಿಲ್ಲ ಎಂದು ಹೇಳಿತು ಮತ್ತು ಅರ್ಜಿದಾರರ ಮೇಲೆ ರೂ 50,000 ಶುಲ್ಕ ವಿಧಿಸಿತು

ಭಾರತ ಪಾಕಿಸ್ತಾನ ಒಪ್ಪಂದದಲ್ಲಿ ನಾಲ್ಕು ಸೂತ್ರಗಳ ಪ್ರಸ್ತಾಪ
ಕಾಶ್ಮೀರ ವಿವಾದಕ್ಕೆ ಉತ್ತಮ ಪರಿಹಾರವಾಗಿ 2004-2007ರಲ್ಲಿ ಆಗಿನ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಡುವೆ ನಡೆದ ಒಪ್ಪಂದದಲ್ಲಿ ಈ ನಾಲ್ಕು ಸೂತ್ರಗಳನ್ನು ಪ್ರಸ್ತಾವಿಸಲಾಗಿತ್ತು. ಈ ಸೂತ್ರಗಳು ಕಾಶ್ಮೀರ ಸಂಘರ್ಷಕ್ಕೆ ಲಭ್ಯವಿರುವ ಅತ್ಯುತ್ತಮ ಪರಿಹಾರವೆಂದು ಇಬ್ಬರೂ ನಾಯಕರು ಮನಗಂಡಿದ್ದರು. ಈ ಸೂತ್ರಗಳನ್ನು ಎರಡೂ ದೇಶಗಳಲ್ಲಿ ಅನುಸರಿಸುವ ಕುರಿತು ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ (ಯುಎಸ್ಐಪಿ) ವರದಿ ವಿಶ್ಲೇಷಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸೂತ್ರಗಳನ್ನು ಅಳವಡಿಸುವುದು ಕೊಂಚ ಪ್ರಯಾಸವಾದರೂ, ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ನಡುವಿನ ಭವಿಷ್ಯದ ಮಾತುಕತೆಗಳಿಗೆ ಸೂತ್ರವು ಲಭ್ಯವಿರುವ ಅತ್ಯುತ್ತಮ ಆಧಾರವಾಗಿದೆ ಎಂದು ವರದಿ ಹೇಳುತ್ತದೆ.
Published by:Ashwini Prabhu
First published: