• Home
 • »
 • News
 • »
 • national-international
 • »
 • Pulwama Terror Attack: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ದಾಳಿಗೆ ವರ್ಷ ಒಂದು; 50 ಸೈನಿಕರ ಬಲಿಗೆ ಪ್ರತೀಕಾರ ಎಂದು?

Pulwama Terror Attack: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ದಾಳಿಗೆ ವರ್ಷ ಒಂದು; 50 ಸೈನಿಕರ ಬಲಿಗೆ ಪ್ರತೀಕಾರ ಎಂದು?

ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿಗೆ ಛಿದ್ರಗೊಂಡಿರುವ ಸೈನಿಕರ ದೇಹ.

ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿಗೆ ಛಿದ್ರಗೊಂಡಿರುವ ಸೈನಿಕರ ದೇಹ.

ಸರ್ಕಾರದ ಅಂಗವಾಗಿರುವ ಅನೇಕ ಸಚಿವರುಗಳು ಬಾಲಾಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಹೆಚ್ಚು ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಪಾಕಿಸ್ತಾನ ಸರ್ಕಾರದಿಂದ ಅಂತಾರಾಷ್ಟ್ರೀಯ ಮಾಧ್ಯಮಗಳವರೆಗೆ ಎಲ್ಲರೂ ಭಾರತದ ಈ ವಾದವನ್ನು ಅಲ್ಲಗೆಳೆದಿದ್ದವು.

 • Share this:

  Pulwama Attack 2019: ಇಡೀ ದೇಶವೇ ಬೆಚ್ಚಿಬಿದ್ದ ಘಟನೆ ಅದು. ಕಳೆದ ಫೆಬ್ರವರಿ 14, 2019ರಂದು ಕಾರ್ ಒಂದರಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ತುಂಬಿಕೊಂಡು ಬಂದಿದ್ದ ಜೈಶ್​-ಎ-ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರನೋರ್ವ ಕಾಶ್ಮೀರದ ಪುಲ್ವಾಮಾ ಹೆದ್ದಾರಿ ಬಳಿ ನಿಂತಿದ್ದ ಮಿಲಿಟರಿ ಸೈನಿಕರ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ ಈ ಸ್ಫೋಟದಲ್ಲಿ ಸುಮಾರು 50 ಕ್ಕೂ ಹೆಚ್ಚು ಜನ ಸೈನಿಕರು ಮೃತಪಟ್ಟಿದ್ದರು.


  ಕಳೆದ ಎರಡು ದಶಕದಲ್ಲಿ ಭಾರತದ ಸೈನಿಕರ ಮೇಲೆ ನಡೆದಿರುವ ಅತ್ಯಂತ ಭಯಂಕರ ದಾಳಿ ಎಂದು ಈ ದಾಳಿಯನ್ನು ಗುರುತಿಸಲಾಗಿದೆ. ಈ ದಾಳಿಯನ್ನು ಸಂಘಟಿಸಲು ಪಾಕಿಸ್ತಾನ ಜೈಶ್​-ಎ-ಮೊಹಮ್ಮದ್ ಸಂಘಟನೆಗೆ ಸಹಾಯ ಮಾಡಿದೆ ಎಂದು ಭಾರತ ಬಲವಾಗಿ ಖಂಡಿಸಿತ್ತು.


  ಪರಿಣಾಮ ಎರಡು ದೇಶದ ನಡುವೆ ಯುದ್ಧದ ವಾತಾವರಣವೇ ನಿರ್ಮಾಣವಾಯಿತು. ಪುಲ್ವಾಮಾ ದಾಳಿಗೆ ಪ್ರತೀಕಾರ ನೀಡಲು ಮುಂದಾಗಿದ್ದ ಭಾರತದ ವಾಯು ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದ ಬಾಲಾಕೋಟ್​ ಎಂಬಲ್ಲಿರುವ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ಸಂಘಟಿಸಿತ್ತು.


  ಈ ದಾಳಿಯಲ್ಲಿ ಅಪಾರ ಪ್ರಮಾಣದ ಉಗ್ರಗಾಮಿಗಳು ಮೃತರಾಗಿದ್ದಾರೆ. ಸುಸಜ್ಜಿತ ಉಗ್ರಗಾಮಿ ನೆಲೆ ಧ್ವಂಸವಾಗಿದೆ ಎಂದು ಹೇಳಲಾಗಿತ್ತು. ಆದರೆ, ಈ ವಾದಕ್ಕೆ ಈವರೆಗೆ ಯಾವುದೇ ಅಧಿಕೃತ ದಾಖಲೆಯಾಗಲಿ ಅಥವಾ ಮಾಹಿತಿಯನ್ನಾಗಲಿ ಕೇಂದ್ರ ಸರ್ಕಾರ ಒದಗಿಸಿಲ್ಲ.


  ಸರ್ಕಾರದ ಅಂಗವಾಗಿರುವ ಅನೇಕ ಸಚಿವರುಗಳು ಬಾಲಾಕೋಟ್​ ದಾಳಿಯಲ್ಲಿ 300ಕ್ಕೂ ಹೆಚ್ಚು ಹೆಚ್ಚು ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ಪಾಕಿಸ್ತಾನ ಸರ್ಕಾರದಿಂದ ಅಂತಾರಾಷ್ಟ್ರೀಯ ಮಾಧ್ಯಮಗಳವರೆಗೆ ಎಲ್ಲರೂ ಭಾರತದ ಈ ವಾದವನ್ನು ಅಲ್ಲಗೆಳೆದಿದ್ದವು. ಈ ಮೂಲಕ ಬಾಲಾಕೋಟ್​ ದಾಳಿಯಲ್ಲಿ ಯಾವುದೇ ಉಗ್ರಗಾಮಿ ಮೃತನಾಗಿಲ್ಲ, ಬದಲಾಗಿ ಕಾಡಿನ ಬೆಟ್ಟದ ಮೇಲೆ ಭಾರತದ ವಾಯುಸೇನೆ ಸ್ಪೋಟಗಳನ್ನು ಎಸೆದಿತ್ತು ಎಂಬುದು ಸಾಬೀತಾಗಿತ್ತು.


  ಪುಲ್ವಾಮಾ ದಾಳಿಯಲ್ಲಿ ಭಾರತದ 50 ಸೈನಿಕರು ತಮ್ಮ ಪ್ರಾಣ ಚೆಲ್ಲಿ ಇಂದಿಗೆ ಒಂದು ವರ್ಷವೇ ಆಗಿದೆ. ಆದರೆ, ಇದಕ್ಕೆ ಭಾರತ ಸರ್ಕಾರ ಇದಕ್ಕೆ ತಕ್ಕ ಪ್ರತೀಕಾರ ತೀರಿಸಿತೇ? ಈ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಮಹಮ್ಮದ್ ಅಜರ್​ ಮಸೂದ್ ಹೆಡೆಮುರಿ ಕಟ್ಟಲು ನಿಜಕ್ಕೂ ಪ್ರಾಮಾಣಿಕ ಪ್ರಯತ್ನ ನಡೆಸೀತೇ? ಎಂಬುದು ಎಲ್ಲರ ಮುಂದಿರುವ ಪ್ರಮುಖ ಪ್ರಶ್ನೆ? ಮಿಲಿಯನ್ ಡಾಲರ್​ ಪ್ರಶ್ನೆ ಎಂದರೂ ತಪ್ಪಾಗಲಾರದು.


  ಇದನ್ನೂ ಓದಿ : ಪುಲ್ವಾಮ ದಾಳಿ, ಬಾಲಾಕೋಟ್ ಏರ್ ಸ್ಟ್ರೈಕ್, ಉಗ್ರ ನಿಗ್ರಹ ಕಾರ್ಯಾಚರಣೆ ಬಗ್ಗೆ ನೆಟ್ವರ್ಕ್18 ಜೊತೆ ಮೋದಿ ಮಾತು

  Published by:MAshok Kumar
  First published: