• Home
  • »
  • News
  • »
  • national-international
  • »
  • Solar Eclipse 2022: 27 ವರ್ಷದ ಬಳಿಕ ಮುರಿಯಲಿದೆ ಕಾಶಿ ವಿಶ್ವನಾಥ ಧಾಮದ ಈ ಪ್ರಮುಖ ಪರಂಪರೆ!

Solar Eclipse 2022: 27 ವರ್ಷದ ಬಳಿಕ ಮುರಿಯಲಿದೆ ಕಾಶಿ ವಿಶ್ವನಾಥ ಧಾಮದ ಈ ಪ್ರಮುಖ ಪರಂಪರೆ!

 ಧಾರ್ಮಿಕ ನಗರಿ ಕಾಶಿ

 ಧಾರ್ಮಿಕ ನಗರಿ ಕಾಶಿ

ಜ್ಯೋತಿಷಿಗಳ ಪ್ರಕಾರ, 27 ವರ್ಷಗಳ ನಂತರ ಅನ್ನಕೂಟ ಮಹೋತ್ಸವ ಮತ್ತು ಗೋವರ್ಧನ ಪೂಜೆಯನ್ನು ದೀಪಾವಳಿಯ ಮೂರನೇ ದಿನದಂದು ಆಚರಿಸಲಾಗುತ್ತದೆ. ವಾಸ್ತವವಾಗಿ, ಈ ವರ್ಷ ಖಂಡಗ್ರಾಸ ಸೂರ್ಯ ಗ್ರಹಣವು ದೀಪಾವಳಿಯ ಒಂದು ದಿನ ಬಳಿಕ ಅಂದರೆ ಅಕ್ಟೋಬರ್ 25 ರಂದು ನಡೆಯುತ್ತಿದೆ. ಈ ಗ್ರಹಣ ಭಾರತದಲ್ಲೂ ಗೋಚರಿಸಲಿದೆ.

ಮುಂದೆ ಓದಿ ...
  • News18 Kannada
  • Last Updated :
  • Varanasi [Benares], India
  • Share this:

ಕಾಶಿ(ಅ.21): ಧಾರ್ಮಿಕ ನಗರಿ ಕಾಶಿಯಲ್ಲಿ (Kashi) ಈ ಬಾರಿಯ ಅನ್ನಕೂಟ ಮಹೋತ್ಸವವನ್ನು ದೀಪಾವಳಿಯ (Diwali 2022) ಎರಡನೇ ದಿನವಲ್ಲ, ಮೂರನೇ ದಿನ ಆಚರಿಸಲಾಗುತ್ತದೆ. ದೀಪಾವಳಿಯ ಮರುದಿನ ಖಂಡಗ್ರಾಸ ಸೂರ್ಯಗ್ರಹಣದಿಂದಾಗಿ (Solar Eclipse) ಇಂತಹ ಕಾಕತಾಳೀಯ ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ, 27 ವರ್ಷಗಳ ನಂತರ ಅನ್ನಕೂಟ ಮಹೋತ್ಸವ ಮತ್ತು ಗೋವರ್ಧನ ಪೂಜೆಯನ್ನು ದೀಪಾವಳಿಯ ಮೂರನೇ ದಿನದಂದು ಆಚರಿಸಲಾಗುತ್ತದೆ. ವಾಸ್ತವವಾಗಿ, ಈ ವರ್ಷ ಖಂಡಗ್ರಾಸ ಸೂರ್ಯ ಗ್ರಹಣವು ದೀಪಾವಳಿಯ ನಂತರ ಒಂದು ದಿನ ಅಂದರೆ ಅಕ್ಟೋಬರ್ 25 ರಂದು ನಡೆಯುತ್ತಿದೆ. ಈ ಗ್ರಹಣ ಭಾರತದಲ್ಲೂ ಗೋಚರಿಸಲಿದೆ.


ಜ್ಯೋತಿಷಿ ಕನ್ಹಯ್ಯಾ ಮಹಾರಾಜ್ ಪ್ರಕಾರ, ದೀಪಾವಳಿಯ ಎರಡನೇ ಅನ್ನಕೂಟಕ್ಕೆ ಕಾಶಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಪರಿಗಣಿಸಲಾಗಿದೆ. ಈ ದಿನ ಬಾಬಾ ವಿಶ್ವನಾಥರಿಗೆ 56 ಬಗೆಯ ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ಈ ಭೋಗವನ್ನು ಭಕ್ತರಿಗೂ ಹಂಚಲಾಗುತ್ತಿದ್ದು, ಈ ಬಾರಿ ಈ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.


ಇದನ್ನೂ ಓದಿ: ದೀಪಾವಳಿಗೂ ಮೊದಲು ಮನೆಯಿಂದ ಈ ವಸ್ತುಗಳನ್ನು ತೆಗೆದು ಹಾಕಲು ಮರೆಯಬೇಡಿ


ದೀಪಾವಳಿಯ ಎರಡನೇ ದಿನದಂದು, ಬಾಬಾ ವಿಶ್ವನಾಥನ ಧಾಮದವು ಖಾಲಿಯಾಗಿರುತ್ತದೆ, ಏಕೆಂದರೆ ಸೂರ್ಯಗ್ರಹಣವು ಅಕ್ಟೋಬರ್ 25 ರ ಸಂಜೆ 4:29 ಕ್ಕೆ ಸ್ಪರ್ಶಿಸಲಿದೆ. ಗ್ರಹಣದ ಸರಾಸರಿ ಸಮಯ ಸಂಜೆ 5:14 ಕ್ಕೆ ಮತ್ತು ಮೋಕ್ಷವು ಸಂಜೆ 5:42 ಕ್ಕೆ ಇರುತ್ತದೆ. ಸೂತಕ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳೆಲ್ಲ ಬಂದ್ ಆಗಿರುತ್ತವೆ. ಈ ಕಾರಣದಿಂದ ಈ ಬಾರಿ ದೇವಸ್ಥಾನಗಳಲ್ಲಿ ಅನ್ನಕೂಟ ಹಬ್ಬವನ್ನು ದೀಪಾವಳಿಯ ಎರಡನೇ ದಿನವಲ್ಲ, ಮೂರನೇ ದಿನ ಆಚರಿಸಲಾಗುತ್ತದೆ.


ಸಂಪ್ರದಾಯದ ಪ್ರಕಾರ, ಅನ್ನಕೂಟ ಮಹೋತ್ಸವವನ್ನು ವಾರಣಾಸಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಅನ್ನಪೂರ್ಣ ದೇವಾಲಯದ ಮಹಂತ್ ಶಂಕರ್ ಪುರಿ ಹೇಳುತ್ತಾರೆ. ಈ ದಿನದಂದು ವಾರಣಾಸಿಯ ಎಲ್ಲಾ ಸಣ್ಣ ಮತ್ತು ದೊಡ್ಡ ದೇವಾಲಯಗಳನ್ನು 56 ವ್ಯಂಜಕಗಳಿಂದ ಅಲಂಕರಿಸಲಾಗುತ್ತದೆ. ಈ ಕಾರ್ಯಕ್ರಮವು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅನ್ನಪೂರ್ಣ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ, ಆದರೆ ಈ ಬಾರಿ ಸೂರ್ಯಗ್ರಹಣದಿಂದಾಗಿ ಈ ಕಾರ್ಯಕ್ರಮವನ್ನು ಅಕ್ಟೋಬರ್ 26 ರಂದು ಆಚರಿಸಲಾಗುತ್ತದೆ.


ಇದನ್ನೂ ಓದಿ: ಮನೆಯಲ್ಲಿ ಬಳಸುವ ಕರ್ಟನ್ ಬಣ್ಣದಿಂದ ಉಂಟಾಗುತ್ತೆ ವಾಸ್ತು ದೋಷ; ಎಲ್ಲಿ ಯಾವ ಪರದೆ ಬಳಸಬೇಕು?


ಸೂತಕ ಕಾಲವಾದ್ದರಿಂದ ಆ.25ರಂದು ಬಹುತೇಕ ದೇವಸ್ಥಾನ ಮುಚ್ಚಲಿವೆ. ಸೂರ್ಯಗ್ರಹಣದಿಂದಾಗಿ ಅನ್ನಕೂಟದ ದಿನಾಂಕ ಬದಲಾಗಬೇಕಿದೆ. ಇದು 27 ವರ್ಷಗಳ ಬಳಿಕ ಇಂತಹುದ್ದೊಂದು ಬೆಳವಣಿಗೆ ಸಂಭವಿಸುತ್ತದೆ.


ದೀಪಾವಳಿಯಂದೇ ಸೂರ್ಯ ಗ್ರಹಣ


ಈ ವರ್ಷದ ಕೊನೆಯ ಸೂರ್ಯಗ್ರಹಣವು 25 ಅಕ್ಟೋಬರ್ 2022 ರಂದು ಸಂಭವಿಸುತ್ತದೆ. 27 ವರ್ಷಗಳ ನಂತರ, ಕಾಕತಾಳೀಯವೆಂಬಂತೆ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಲಿದೆ. ದೀಪಾವಳಿಯನ್ನು ಕಾರ್ತಿಕ ಅಮವಾಸ್ಯೆಯಂದು ಆಚರಿಸಲಾಗುತ್ತದೆ, ಈ ಬಾರಿ ಕಾರ್ತಿಕ ಅಮವಾಸ್ಯೆ ಅಂದರೆ ದೀಪಾವಳಿಯು ಅಕ್ಟೋಬರ್ 24 ಮತ್ತು 25 ಎರಡು ದಿನ ಆಚರಿಸಲಾಗುತ್ತದೆ.


ಶ್ರೀ ಕಲ್ಲಾಜಿ ವೈದಿಕ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ್ ತಿವಾರಿ ಮಾತನಾಡಿ, ಕಾರ್ತಿಕ ಅಮಾವಾಸ್ಯೆ ತಿಥಿ ಅಕ್ಟೋಬರ್ 24 ರಂದು ಸಂಜೆ 05.27 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 25 ರಂದು ಸಂಜೆ 04.18 ರವರೆಗೆ ಇರುತ್ತದೆ. ಸೂರ್ಯಗ್ರಹಣದ ಸೂತಕ ಅವಧಿಯು ಅಕ್ಟೋಬರ್ 24 ರ ಮಧ್ಯರಾತ್ರಿಯ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.


27 ವರ್ಷಗಳ ಬಳಿಕ ದೀಪಾವಳಿಯಂದು ಗ್ರಹಣ:


ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸುತ್ತದೆ. ಇದು ಅಕ್ಟೋಬರ್ 25 ರಂದು ಮಧ್ಯಾಹ್ನ 02.29 ರಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ 06.32 ರವರೆಗೆ ಮುಂದುವರಿಯುತ್ತದೆ. ಈ ಸೂರ್ಯಗ್ರಹಣವು 04 ಗಂಟೆ 3 ನಿಮಿಷಗಳ ಕಾಲ ಇರುತ್ತದೆ. 27 ವರ್ಷಗಳ ಹಿಂದೆ 1995ರಲ್ಲಿ ದೀಪಾವಳಿಯ ಸಂದರ್ಭದಲ್ಲಿಯೇ ಸೂರ್ಯಗ್ರಹಣ ಸಂಭವಿಸಿದಾಗ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.

Published by:Precilla Olivia Dias
First published: