Money Fraud: ಹಣ ಡಬಲ್‌ ಮಾಡ್ತೀವಿ ಎಂದು 800 ಕೋಟಿ ವಂಚನೆ!

ವಿನೋದ್ ಕುಮಾರ್

ವಿನೋದ್ ಕುಮಾರ್

ಒಂದು ವರ್ಷದಲ್ಲಿ ಹಣವನ್ನು ದ್ವಿಗುಣಗಳಿಸುವ ಭರವಸೆ ನೀಡಿ ಜನರಿಂದ ಬರೋಬ್ಬರಿ 800 ಕೋಟಿ ಕಲೆಕ್ಷನ್ ಮಾಡಿದೆ ಈ ಕಂಪನಿ.

 • Share this:

  ಕಾಸರಗೋಡಿನಲ್ಲಿ ಅತಿದೊಡ್ಡ ಮನಿಚೈನ್‌ ಮಾದರಿ ಹಗರಣ (Kasaragod Fraud) ವರದಿಯಾಗಿದೆ. ಬೇಡಡ್ಕ ಗ್ರಾಮ ಪಂಚಾಯತ್‌ನ ಕುಂದಂಕುಳಿ ಗ್ರಾಮದಲ್ಲಿರುವ ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿ ಹಣ ಡಬಲ್‌ (Money Double) ಮಾಡುವುದಾಗಿ ಹೇಳಿ ಜನರಿಂದ ಕೋಟಿಗಟ್ಟಲೆ ಸಂಪಾದಿಸಿ ನಾಮ ಹಾಕಿದೆ. ಜನರ ನಿದ್ದೆಗೆಡಿಸಿರುವ ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್, ಒಂದು ವರ್ಷದಲ್ಲಿ ಹಣವನ್ನು ದ್ವಿಗುಣಗೊಳಿಸುವ ತನ್ನ ಹೇಳಿಕೆಯ ಆಧಾರದ ಮೇಲೆ ಕೋಟ್ಯಂತರ ರೂಪಾಯಿಗಳನ್ನು ಠೇವಣಿಯಾಗಿ ಪಡೆದುಕೊಂಡಿದೆ. ವರ್ಷಕ್ಕೆ ಠೇವಣಿ ಮೇಲೆ 80 ಪ್ರತಿಶತದಷ್ಟು ಲಾಭ ನೀಡುತ್ತೇವೆ.  ಒಂದು ವರ್ಷದಲ್ಲಿ ಹಣವನ್ನು ದ್ವಿಗುಣಗಳಿಸುವ ಭರವಸೆ ನೀಡಿ ಜನರಿಂದ ಬರೋಬ್ಬರಿ 800 ಕೋಟಿ ಕಲೆಕ್ಷನ್ ಮಾಡಿದೆ.


  ಜನರ ಬಳಿ ಹಣ ಸಂಗ್ರಹಿಸಿ ನಂತರ ಬೇರೆ ಕಂಪನಿಗೆ ಆ ಹಣವನ್ನು ವರ್ಗಾವಣೆ ಮಾಡಿ ಸದಸ್ಯರಿಗೆ ಸಾಲ ಮತ್ತು ಲಾಭ ನೀಡದೆ ವಂಚಿಸಿದೆ.


  ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿಯ ಬ್ಯಾಂಕ್ ಖಾತೆಗಳು ಸ್ಥಗಿತ
  ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗ್ಲೋ ಬಲ್ ಬ್ಯುಸಿನೆಸ್ ಗ್ರೂಪ್ (GBG) ಅಡಿಯಲ್ಲಿ ಬಿಗ್ ಪ್ಲಸ್ ಫಿನ್ ಟ್ರೇಡಿಂಗ್ ಕಂಪನಿಯ ಸುಮಾರು ಎಂಟು ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದು, ಕಾಸರಗೋಡು ಬೇಡಡ್ಕ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೋಳಿಕ್ಕೋಡ್, ಕಣ್ಣೂರು ಮತ್ತು ಕರ್ನಾಟಕದ ನೆರೆಯ ಜಿಲ್ಲೆಗಳಿಂದ ಸುಮಾರು 50 ರಿಂದ 100 ಜನರು ಕಂಪನಿಯ "ಹಣ ದ್ವಿಗುಣಗೊಳಿಸುವ ಯೋಜನೆ" ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.


  2,000 ಕೋಟಿ ಆಸ್ತಿ ಹೊಂದಿರುವ ವಿನೋದ್ ಕುಮಾರ್
  ಬಿಗ್‌ಪ್ಲಸ್ ಅನ್ನು ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ (GBG) ಎಂಬ ಘಟಕದ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿತ್ತು. ಈ ಕಂಪನಿಯ ಸಾರಥಿ ವಿನೋದ್ ಕುಮಾರ್. ವಿನೋದ್ ಕುಮಾರ್ ಅವರ ವೆಬ್​ಸೈಟ್​ ನಲ್ಲಿ ಅವರು 2000 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿ, ರಾಜಕಾರಣಿಗಳು, ಉದ್ಯಮಿಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಡ ಹೂಡಿಕೆದಾರರನ್ನು ಕಂಪನಿಯವರು ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕೇರಳದ ರಾಜ್ಯಪಾಲರೊಂದಿಗಿರುವ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ.


  ಕಾಸರಗೋಡಿನಲ್ಲಿ 31 ಕೋಟಿ ಸಂಗ್ರಹ
  ಕಂಪನಿಯು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ ಕಣ್ಣೂರು ಗ್ರಾಮೀಣ ಸೂಪರ್ ಮಾರ್ಕೆಟ್ ಲಿಮಿಟೆಡ್ ಆರಂಭಿಸಲು ಜನರಿಂದ ಹಣ ಸಂಗ್ರಹಿಸಿತ್ತು. ಯೋಜನೆ ಕೈಕೊಟ್ಟ ಕಾರಣ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಕಾಸರಗೋಡ್ ಒಂದರಿಂದಲೇ ವಿನೋದ್ ಕುಮಾರ್ 31 ಕೋಟಿ ಗಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


  ಪ್ರಕರಣ ದಾಖಲು; ಡಿಸೆಂಬರ್ 26ಕ್ಕೆ ವಿಚಾರಣೆ
  ವಂಚನೆ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಪಿತೂರಿಯ ಆರೋಪದ ಮೇಲೆ ಅಪರಾಧ ವಿಭಾಗವು ಆತನ ಮತ್ತು ಇತರ 21 ಸಹ-ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ತಲಶ್ಶೇರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 26 ರಂದು ನಡೆಸಲಿದೆ. ಕಳೆದೊಂದು ವರ್ಷದಿಂದ ಜಿಬಿಜಿ ನಿಧಿ ಲಿಮಿಟೆಡ್ ತನ್ನ ಯಾವುದೇ ಸದಸ್ಯರಿಗೆ ಸಾಲ ನೀಡಿಲ್ಲ ಎಂದು ನ.7ರಂದು ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡದಲ್ಲಿದ್ದ ಶಿಬು ಫಿಲಿಪ್ ಹೇಳಿದರು.


  ಇದನ್ನೂ ಓದಿ: Nalini Sriharan: ರಾಜೀವ್‌ ಗಾಂಧಿ ಕುಟುಂಬದವರನ್ನು ಭೇಟಿಯಾಗುವುದು ಜೀವನದ ಅತ್ಯಂತ ಕಷ್ಟದ ಕ್ಷಣ: ನಳಿನಿ ಶ್ರೀಹರನ್‌


  2015 ರಲ್ಲೂ ಸಹ ಇದೇ ಉದ್ದೇಶ ಹೊಂದಿದ್ದ ವಿನೋದ್‌ ಕುಮಾರ್‌ ಕಂಪನಿ ವಂಚನೆ ಪ್ರಕರಣದಿಂದಾಗಿ ನಿಷೇಧಕ್ಕೆ ಒಳಗಾಯಿತು. ಇದಾದ ನಂತರ ಅಕ್ಟೋಬರ್ 31, 2020 ರಂದು ನಿಷೇಧ ಕೊನೆಗೊಳ್ಳುತ್ತಿದ್ದಂತೆ ಹೊಸ ಕಂಪನಿಯನ್ನು ಪ್ರಾರಂಭಿಸಿದರು. 12 ದಿನಗಳ ನಂತರ, ಕಂಪನಿಯನ್ನು ಎರ್ನಾಕುಲಂನಲ್ಲಿ GBG ನಿಧಿ ಲಿಮಿಟೆಡ್ ಎಂದು ನೋಂದಾಯಿಸಿಕೊಂಡರು. ಮತ್ತದೇ ಹಳೇ ಚಾಳಿಯನ್ನು ಮುಂದುವರಿಸಿದ ತಂಡ ಜನರಿಗೆ ವಂಚಿಸಿದೆ.


  ಯುಟ್ಯೂಬ್‌ನಲ್ಲಿದೆ ಠೇವಣಿ ಕೋರುವ ವೀಡಿಯೋ
  ಜುಲೈ 27 ರಂದು ಬಿಗ್‌ಪ್ಲಸ್ ಫಿನ್ ಟ್ರೇಡಿಂಗ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ಠೇವಣಿ ಕೋರುವ ವೀಡಿಯೊವನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ. ಐದು ನಿಮಿಷದ ವೀಡಿಯೋದಲ್ಲಿ, ನೀವು ನಮ್ಮೊಂದಿಗೆ ಸೇರಿಕೊಂಡರೆ, ಸಾಮಾನ್ಯ ಮನುಷ್ಯನು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಬಹುದು ಎಂದು ಹೇಳಲಾಗಿದೆ.


  GBG ನಿಧಿ ಬ್ಯಾಂಕ್​ನಲ್ಲಿ  ಷೇರುದಾರರಾಗುವ ಮೂಲಕ, ಒಬ್ಬರು ಬಿಗ್ ಪ್ಲಸ್ ಟ್ರೇಡಿಂಗ್ ಕಂಪನಿಯ ಭಾಗವಾಗಬಹುದು. 10,000 ರಿಂದ 25 ಲಕ್ಷದವರೆಗಿನ ಠೇವಣಿಗಳನ್ನು ಸ್ವೀಕರಿಸಲು ಪ್ಯಾಕೇಜ್​ಗಳಿವೆ. ನೀವು 1 ಲಕ್ಷವನ್ನು GBG ನಲ್ಲಿ ಠೇವಣಿ ಮಾಡಿದರೆ, ಹಣವನ್ನು ಬಿಗ್ ಪ್ಲಸ್​ಗೆ ವರ್ಗಾಯಿಸಲಾಗುತ್ತದೆ. ಬಿಗ್ ಪ್ಲಸ್ ಆ ಹಣವನ್ನು ವ್ಯಾಪಾರಕ್ಕಾಗಿ ಬಳಸುತ್ತದೆ ಮತ್ತು ವಾರಗಳಲ್ಲಿ, ತೆರಿಗೆಯ ನಿವ್ವಳ 1.80 ಲಕ್ಷಕ್ಕೆ ಹಿಂತಿರುಗುತ್ತದೆ ಎಂದು ಜನರಿಗೆ ಭರವಸೆ ನೀಡಿದೆ.


  ವಂಚನೆ ಪ್ರಕರಣ ಸಾಬೀತಾದರೆ ಆರೋಪಿಗಳಿಗೆ ಏಳು ವರ್ಷ ಜೈಲು
  ಬೇಡಡ್ಕ ಪೊಲೀಸರು, ವಿನೋದ್ ಕುಮಾರ್ ವಿರುದ್ಧ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ, 2019 ರ ಸೆಕ್ಷನ್ 3 ಮತ್ತು 5 ರ ಆರೋಪವನ್ನು ಹೊರಿಸಿದ್ದಾರೆ. ಈ ಸೆಕ್ಷನ್‌ಗಳು ಕಂಪನಿಗಳು ಅನಿಯಂತ್ರಿತ ಠೇವಣಿ ಯೋಜನೆಗಳನ್ನು ನಡೆಸುವುದನ್ನು ನಿಷೇಧಿಸುತ್ತವೆ ಮತ್ತು ಅಂತಹ ಯೋಜನೆಗಳಲ್ಲಿ ಠೇವಣಿಗಳನ್ನು ಕೇಳುವುದು ಮತ್ತು ಸ್ವೀಕರಿಸುವುದನ್ನು ನಿಷೇಧಿಸುತ್ತವೆ ಮತ್ತು ಸುಳ್ಳು, ಮೋಸಗೊಳಿಸುವಂತಹವುಗಳಾಗಿವೆ. ಅಥವಾ ತಪ್ಪುದಾರಿಗೆಳೆಯುವ ಮುನ್ಸೂಚನೆ ಎಂದು ಹೇಳುತ್ತವೆ.


  ಇದನ್ನೂ ಓದಿ: Snake Viral Video: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ


  ವಿನೋದ್‌ ಕುಮಾರ್‌ ಪ್ರಕರಣ ಇದೇ ರೀತಿಯಿದ್ದು, ಪ್ರಕರಣದಲ್ಲಿ ತಪಿತಸ್ಥರೆಂದು ಸಾಬೀತಾದರೆ ಆರೋಪಿಗಳಿಗೆ ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಮತ್ತು ಸೆಕ್ಷನ್ 21 (1), (2), ಮತ್ತು ಸೆಕ್ಷನ್ 23 ರ ಅಡಿಯಲ್ಲಿ ಗರಿಷ್ಠ 30 ಲಕ್ಷ ರೂ ದಂಡ ಸಹ ವಿಧಿಸಲಾಗುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: