Babiya Crocodile: ಕಾಸರಗೋಡಿನ ದೇವರ ಮೊಸಳೆ ಬಬಿಯಾ ವಿಧಿವಶ; ಭಕ್ತರಲ್ಲಿ ಮಡುಗಟ್ಟಿದ ದುಃಖ

ಬಬಿಯಾ ಮೊಸಳೆ ಮತ್ತು ದೇವಸ್ಥಾನ

ಬಬಿಯಾ ಮೊಸಳೆ ಮತ್ತು ದೇವಸ್ಥಾನ

ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತಿತ್ತು.

  • Share this:

ಕಾಸರಗೋಡಿನ ಅನಂತ ಪದ್ಮನಾಭ ದೇವಸ್ಥಾನದ (Kasaragod Anantha Padmanabha Temple) ಮೊಸಳೆ ಬಬಿಯಾ ವಿಧಿವಶವಾಗಿದೆ. ಭಕ್ತ ವಲಯದಲ್ಲಿ ಪ್ರಸಿದ್ಧಿ ಪಡೆದ ಬಬಿಯಾ ಮೊಸಳೆಯು ಇಹಲೋಕ (Babiya Crocodile Passes Away) ತ್ಯಜಿಸಿರುವುದು ಭಕ್ತರ ಪಾಲಿಗೆ ನೋವನ್ನುಂಟು ಮಾಡಿದೆ.  2 ವರ್ಷಗಳ ಹಿಂದೆ ಇದೇ ಮೊದಲ ಬಾರಿಗೆ ನೀರಿನಿಂದ ಹೊರ ಬಂದಿದ್ದ ಬಬಿಯಾ ಮೊಸಳೆ ದೇಗುಲದ ಆವರಣಕ್ಕೆ ಬಂದಿತ್ತು. ಇದು ಭಕ್ತರ ಅಚ್ಚರಿಗೆ ಕಾರಣವಾಗಿತ್ತು. ಅನಂತ ಪದ್ಮನಾಭ ದೇವಸ್ಥಾನದ  ಆವರಣದಲ್ಲಿ ಬಬಿಯಾ ಮೊಸಳೆಯ ಅಂತಿಮ ವಿಧಿ ವಿಧಾನ ನಡೆಯಲಿದೆ  ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಸರೋವರದ ದೇವಾಲಯದ ರಕ್ಷಕನಾಗಿತ್ತು ಬಬಿಯಾ ಮೊಸಳೆ.  ಸ್ಥಳೀಯ ದಂತಕಥೆಗಳ ಪ್ರಕಾರ ಬಬಿಯಾ ಪ್ರತಿದಿನ ದೇವರ ಮಧ್ಯಾಹ್ನದ ಪೂಜೆಯ ನಂತರ ನೀಡಲಾಗುವ ದೇವಾಲಯದ ಪ್ರಸಾದವನ್ನು ಮಾತ್ರ ತಿನ್ನುತ್ತಿತ್ತು. ಪ್ರಸಾದವು ಬೇಯಿಸಿದ ಅನ್ನ ಮತ್ತು ಬೆಲ್ಲವನ್ನು ಒಳಗೊಂಡಿತ್ತು. ಅಲ್ಲದೇ  ಈ ಮೊಸಲೆಯು ಮನುಷ್ಯರಿಗೆ ಎಷ್ಟು ಹೊಂದಿಕೊಂಡಿತ್ತು ಎಂದರೆ ಭಕ್ತರು ನಿರ್ಭಯವಾಗಿ ತಮ್ಮ ಕೈಗಳಿಂದ ಸ್ನೇಹಪರ ಮೊಸಳೆಗೆ ಆಹಾರವನ್ನು ನೀಡುತ್ತಿದ್ದರು.


ಈ ಮೊಸಳೆ ಹಿಂದಿನ ಕಥೆಯೇ ರೋಚಕ
ಭಗವಾನ್ ಕೃಷ್ಣ ಮತ್ತು ಅವನ ಕಟ್ಟಾ ಭಕ್ತರೊಬ್ಬರಿಗೆ ಸಂಬಂಧಿಸಿದ ಅದ್ಭುತ ಕಥೆಯು ಬಬಿಯಾ ಮೊಸಳೆ ಅಸ್ತಿತ್ವದ ಉದ್ದೇಶದ ಮೇಲೆ ಬೆಳಕು ಚೆಲ್ಲುತ್ತದೆ. ಅದರಂತೆ ಶ್ರೀ ವಿಲ್ವಮಂಗಳತ್ತು ಸ್ವಾಮಿಗಳು ತಮ್ಮ ಆರಾಧ್ಯ ದೈವವಾದ ಶ್ರೀ ವಿಷ್ಣುವಿನ ಕೃಪೆಗೆ ಪಾತ್ರರಾಗಲು ಆಳವಾದ ಧ್ಯಾನದಲ್ಲಿ ನಿರತರಾಗಿದ್ದಾಗ, ಶ್ರೀಕೃಷ್ಣನು ಚಿಕ್ಕ ಹುಡುಗನಾಗಿ ಕಾಣಿಸಿಕೊಂಡು ತನ್ನ ಭಕ್ತನನ್ನು ಪರೀಕ್ಷಿಸಲು ಚೇಷ್ಟೆಗಳನ್ನು ಪ್ರಾರಂಭಿಸಿದನು.


ಇದನ್ನೂ ಓದಿ: Mulayam Singh Yadav Passes Away: ಮುಲಾಯಂ ಸಿಂಗ್ ಯಾದವ್ ವಿಧಿವಶ


ಚಿಕ್ಕವನ ಚೇಷ್ಟೆಯಿಂದ ನಲುಗಿದ ವಿಲ್ವಮಂಗಳತ್ತು ಸ್ವಾಮಿಗಳು ಅವನನ್ನು ಪಕ್ಕಕ್ಕೆ ತಳ್ಳಿದರು. ಆ ಋಷಿಯು ತನ್ನ ತಪ್ಪನ್ನು ಅರಿತುಕೊಳ್ಳುವ ಹೊತ್ತಿಗೆ, ಬಾಲಕ-ಕೃಷ್ಣನು ಹತ್ತಿರದ ಗುಹೆಯಲ್ಲಿ ಕಣ್ಮರೆಯಾಗಿದ್ದನು. ಕೃಷ್ಣನ ಕಣ್ಮರೆಯಾದ ಬಿರುಕು ದೇವಾಲಯದ ಒಳಗೆ ಎಲ್ಲೋ ಇದೆ. ಈ ನಿಗೂಢ ಪ್ರವೇಶದ್ವಾರವನ್ನು ರಕ್ಷಿಸಲು ನೇಮಕಗೊಂಡ ಮೊಸಳೆಯೇ ಬಬಿಯಾ ಎಂದು ನಂಬಲಾಗಿತ್ತು. ಹೀಗೆ ಬಬಿಯಾ ಮೊಸಳೆಯ ಹಿಂದೆ ಒಂದು ದಂತಕಥೆಯೇ ಭಕ್ತರ ಬಾಯಲ್ಲಿ ಹರಿದಾಡುತ್ತಿತ್ತು.


ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ
ಈ ಬಬಿಯಾ ಮೊಸಳೆ ನಿತ್ಯ ಎರಡು ಬಾರಿ ಪೂಜೆ ಬಳಿಕ ನೈವೇದ್ಯ ಸ್ವೀಕರಿಸುತ್ತಿತ್ತು. ದೇವರ ಮೊಸಳೆ ಎಂದೇ ಇದು ಪ್ರಖ್ಯಾತಿ ‌ಪಡೆದಿತ್ತು.‌


ಮುಲಾಯಂ ಸಿಂಗ್ ಯಾದವ್ ವಿಧಿವಶ
ಲಕ್ನೋ: ಸಮಾಜವಾದಿ ಪಕ್ಷದ ವರಿಷ್ಠ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಇಂದು (Mulayam Singh Yadav Passes Away) ನಿಧನರಾಗಿದ್ದಾರೆ. 82 ವರ್ಷದ ಹಿರಿಯ ರಾಜಕಾರಣಿ ಹರ್ಯಾಣದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ದಾಖಲಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಖಿಲೇಶ್ ಯಾದವ್ ದೃಢಪಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಪರೀಕ್ಷೆಗಳಿಗಾಗಿ ಆಗಸ್ಟ್ 22 ರಿಂದ ಚಿಕಿತ್ಸೆ ಪಡೆಯುತ್ತಿದ್ದರು.


ಇದನ್ನೂ ಓದಿ: Combodian Festival: ಪ್ರತಿ ವರ್ಷ 15 ದಿನಗಳಿಗೆ ತೆರೆಯುತ್ತೆ 'ನರಕದ ದ್ವಾರ', ಅಲೆದಾಡುವ ದೆವ್ವಗಳಿಗೆ ಹಬ್ಬ!


ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಮುಲಾಯಂ ಸಿಂಗ್ ಯಾದವ್ ಕಿವಿಗೊಡುತ್ತಿದ್ದರು. ಅತ್ಯಂತ ತಳಮಟ್ಟದಿಂದ ಮುಲಾಯಂ ಸಿಂಗ್ ಯಾದವ್ ಅವರು ಬೆಳೆದುಬಂದಿದ್ದರು. ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯಾ ಅವರ ಸಿದ್ಧಾಂತಗಳನ್ನು ಅನುಸರಿಸಿ ಬದ್ಧತೆ ತೋರಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅನೇಕ ಹಿರಿಯ ನಾಯಕರು ಸಹ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: