ಕರುಣಾನಿಧಿ ಆರೋಗ್ಯಸ್ಥಿತಿ ಗಂಭೀರ: ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆಯೇ ಸವಾಲು

news18
Updated:August 7, 2018, 7:26 AM IST
ಕರುಣಾನಿಧಿ ಆರೋಗ್ಯಸ್ಥಿತಿ ಗಂಭೀರ: ಪ್ರಮುಖ ಅಂಗಾಂಗಗಳ ಕಾರ್ಯನಿರ್ವಹಣೆಯೇ ಸವಾಲು
ಕರುಣಾನಿಧಿ
news18
Updated: August 7, 2018, 7:26 AM IST
ನ್ಯೂಸ್​18 ಕನ್ನಡ

ಚೆನ್ನೈ (ಆ.7): ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ನಾಳೆ ಮುಂಜಾನೆಯವರೆಗೆ ಅವರು ಚಿಕಿತ್ಸೆಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ನಿರ್ಣಾಯಕವಾಗಲಿದೆ ಎಂಬ ಮಾಹಿತಿಯನ್ನು ಆಸ್ಪತ್ರೆಯ ವೈದ್ಯರು ನೀಡಿದ್ದಾರೆ.

ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರುಣಾನಿಧಿ ಅವರ ಪ್ರಮುಖ ಅಂಗಾಂಗಳು ಸಹಜವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಸವಾಲಾಗಿ ಪರಿಣಮಿಸಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ಸಂಜೆಯೇ ಆಸ್ಪತ್ರೆಯ ಅಧಿಕಾರಿಗಳು ಈ ವಿಷಯ ಹೊರಹಾಕಿದ ಕಾರಣ ರಾತ್ರಿಪೂರ್ತಿ ಕರುಣಾನಿಧಿ ಅವರ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿ ಅವರ ಆರೋಗ್ಯ ಸುಧಾರಿಸಲೆಂದು ಹಾರೈಸುತ್ತಿದ್ದರು. ಆಸ್ಪತ್ರೆಯ ಎದುರು ಸೇರಿದ್ದ ಮಹಿಳೆಯರು ತಮ್ಮ ನಾಯಕನಿಗಾಗಿ ಕಂಬನಿ ಮಿಡಿಯುತ್ತಿದ್ದರು.

94 ವರ್ಷದ ರಾಜಕಾರಣಿ ಕರುಣಾನಿಧಿ ಅವರ ಆರೋಗ್ಯದಲ್ಲಿ ಉಂಟಾಗುತ್ತಿರುವ ಏರುಪೇರಿನ ಮಾಹಿತಿ ಸಿಗುತ್ತಿದ್ದಂತೆ ಡಿಎಂಕೆ ಬೆಂಬಲಿಗರು ಮತ್ತು ನಾಯಕರಲ್ಲಿ ಆತಂಕ ಮನೆಮಾಡಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕರುಣಾನಿಧಿ ಅವರು ಈಗಾಗಲೇ ಹಲವು ಬಾರಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ.

ಕೇಂದ್ರ ಸಚಿವ ನಿತಿನ್​ ಗಡ್ಕರಿ ನಿನ್ನೆ ಕರುಣಾನಿಧಿ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಜುಲೈ 28ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಕರುಣಾನಿಧಿ ಅವರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿಕರುಣಾನಿಧಿ ಅವರನ್ನು ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದ್ದು, ನುರಿತ ವೈದ್ಯರ ಸಹಕಾರದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾವೇರಿ ಆಸ್ಪತ್ರೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ