ಕಿಂಗ್​ ಮೇಕರ್​ ಕರುಣಾನಿಧಿ: ಲೋಕಸಭೆಯಲ್ಲಿ ಒಂದೂ ಸ್ಥಾನ ಪಡೆಯದಿದ್ದರೂ ಮೂವರನ್ನು ಪ್ರಧಾನಿಗಳನ್ನಾಗಿಸಿದ ಕಲೈಙರ್!


Updated:August 8, 2018, 2:56 PM IST
ಕಿಂಗ್​ ಮೇಕರ್​ ಕರುಣಾನಿಧಿ: ಲೋಕಸಭೆಯಲ್ಲಿ ಒಂದೂ ಸ್ಥಾನ ಪಡೆಯದಿದ್ದರೂ ಮೂವರನ್ನು ಪ್ರಧಾನಿಗಳನ್ನಾಗಿಸಿದ ಕಲೈಙರ್!

Updated: August 8, 2018, 2:56 PM IST
ನ್ಯೂಸ್​ 18 ಕನ್ನಡ

ಚೆನ್ನೈ(ಆ. 08): 1989 ರಿಂದ 1991ರ ನಡುವೆ ಲೋಕಸಭೆಯಲ್ಲಿ ಕರುಣಾನಿಧಿ ನೇತೃತ್ವದ ಪಕ್ಷವು ಒಂದು ಸ್ಥಾನವನ್ನೂ ಪಡೆದಿರಲಿಲ್ಲ. ಹೀಗಿದ್ದರೂ ಕೇಂದ್ರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಕರುಣಾನಿಧಿ ಮೂವರು ಪ್ರಧಾನಿಗಳನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನ್ಯೂಸ್​ 18 ನೊಂದಿಗೆ ಮಾತನಾಡಿದ ಚೆನೈನ ಹಿರಿಯ ಪತ್ರಕರ್ತ ಆರ್​. ನೂರ್​ ಅಲ್ಲಾಹ್​ ಕರುಣಾನಿಧಿಯವರು ತಮ್ಮ ಜೀವಿತಾವಧಿಯಲ್ಲಿ ಇಡೀ ರಾಜಕೀಯ ಕ್ಷೇತ್ರದಲ್ಲಿ ಗೇಮ್​ ಚೇಂಜರ್​ ಆಗಿದ್ದರು ಎಂದಿದ್ದಾರೆ.

ವಿಪಿ ಸಿಂಗ್​ರನ್ನು ಪ್ರಧಾನಿಯನ್ನಾಗಿಸಿದ ಕರುಣಾನಿಧಿಕಿಂಗ್​ ಮೇಕರ್​ ಕರುಣಾನಿಧಿಯವರ ಕುರಿತಾಗಿ ಮಾತನಾಡಿದ ನೂರ್​ ಅಲ್ಲಾಹ್​ "1989 ರಲ್ಲಿ ಅವರಿಗೆ ಲೋಕಸಭೆಯಲ್ಲಿ ಒಂದು ಸ್ಥಾನವೂ ಸಿಕ್ಕಿರಲಿಲ್ಲ. ಹೀಗಿದ್ದರೂ ಚೌಧರಿ ದೇವೀಲಾಲ್​ ಜೊತೆಗೂಡಿ ವಿಪಿ ಸಿಂಗ್​ರನ್ನು ಪ್ರಧಾನಿಯನ್ನಾಗಿಸುವುದರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು" ಎನ್ನುತ್ತಾರೆ.

ರಾಜೀವ್​ ಗಾಂಧಿಯ ಹತ್ಯೆ ಆರೋಪ ಕೇಳಿ ಬಂದಾಗ ಚುನಾವಣೆಯಲ್ಲಿ ಸೋತರು

ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಾ ಮಾತನಾಡಿದ ನೂರ್​ ಅಲ್ಲಾಹ್​ರವರು '1991 ರಲ್ಲಿ ರಾಜೀವ್​ ಗಾಂಧಿ ಹತ್ಯೆಯಾಗಿತ್ತು. ಈ ಸಂದರ್ಭದಲ್ಲಿ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿಯವರು ಈ ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಆರೋಪ ಮಾಡಿದ್ದು ಬೇರಾರೂ ಅಲ್ಲ ಕೇಂದ್ರ ಸರ್ಕಾರದ ಅಚಿವರಾಗಿದ್ದ ಅರ್ಜುನ್​ ಸಿಂಗ್​ರವರೇ ಮಾಡಿದ್ದರು. ಇದರ ಪರಿಣಾಮವಾಗಿ ಡಿಎಂಕೆ ಪಕ್ಷಕ್ಕೆ ಲೋಕಸಭೆಯಲ್ಲಿ ಇಂದು ಸ್ಥಾನವೂ ಲಭಿಸಲಿಲ್ಲ. ಅಲ್ಲದೇ ಅವರ ರಾಜಕೀಯ ಶಕ್ತಿಯೂ ದುರ್ಬಲವಾಯಿತು.
Loading...ಅಚಾನಕ್ಕಾಗಿ ರಾಜಕೀಯ ಮತ್ತೊಮ್ಮೆ ಬದಲಾಯಿತು ಹಾಗೂ 1996 ರಲ್ಲಿ ಡಿಎಂಕೆ 17 ಸ್ಥಾನ ಹಾಘೂ ಅವರ ಸಹಯೋಗಿ ಪಕ್ಷ ತಮಿಳು ಮನಿಲಾ ಕಾಂಗ್ರೆಸ್​ ಲೋಕಸಭೆಯಲ್ಲಿ 20 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಈ ವೇಳೆ ಕೊನೆಗೂ ಕರುಣಾನಿಧಿಯವರ ಶಿಫಾರಸ್ಸಿನ ಮೇರೆಗೆ ಹೆಚ್​. ಡಿ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಲಾಯಿತು' ಎಂದಿದ್ದಾರೆ.

ಐ. ಕೆ ಗುಜ್ರಾಲ್​ರನ್ನು ಪ್ರಧಾನಿಯನ್ನಾಗಿಸಿದ ಕರುಣಾನಿಧಿಇದೇ ವಿಚಾರವಾಗಿ ಮಾತನಾಡಿದ ನೂರ್​ ಅಲ್ಲಾಹ್​ "ಕಾಂಗ್ರೆಸ್​ ಹೆಚ್​. ಡಿ ದೇವೇಗೌಡರಿಗೆ ನೀಡಿದ್ದ ತಮ್ಮ ಸಮರ್ಥನೆಯನ್ನು ಹಿಂಪಡೆದಿತ್ತು. ಇದಅದ ಬಳಿಕ ದೇವೇಗೌಡರ ಸರ್ಕಾರ ಬಿತ್ತು. ಆದರೆ ಈ ಸಂದರ್ಭದಲ್ಲಿ ಕರುಣಾನಿಧಿಯವರು ಕಾಂಗ್ರೆಸ್​ನೊಂದಿಗಿನ ತನ್ನ ಸಂಬಂಧವನ್ನು ಗಟ್ಟಗೊಳಿಸಿದ್ದರು. ಕಾಂಗ್ರೆಸ್​ನ ಹಲವಅರು ದಿಗ್ಗಜ ನಾಯಕರೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದರು. ಇದೇ ಕಾರಣದಿಂದ ದೇವೇಗೌಡರು ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಬಳಿಕವೂ ಕರುಣಾನಿಧಿಯವರು ಈ. ಕೆ ಗುಗ್ರಾಲ್​ರನ್ನು ಪ್ರಧಾನಿಯನ್ನಾಗಿಸಲು ಸಫಲರಾಗಿದ್ದರು" ಎಂದಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...