ದಿನೇ ದಿನೇ ಬಿಗಡಾಯಿಸುತ್ತಿದೆ ಕರುಣಾನಿಧಿ ಆರೋಗ್ಯ: ವೈದ್ಯರಿಂದ ಉನ್ನತ ಚಿಕಿತ್ಸೆ ಮುಂದುವರಿಕೆ


Updated:August 6, 2018, 7:25 PM IST
ದಿನೇ ದಿನೇ ಬಿಗಡಾಯಿಸುತ್ತಿದೆ ಕರುಣಾನಿಧಿ ಆರೋಗ್ಯ: ವೈದ್ಯರಿಂದ ಉನ್ನತ ಚಿಕಿತ್ಸೆ ಮುಂದುವರಿಕೆ

Updated: August 6, 2018, 7:25 PM IST
ನ್ಯೂಸ್​-18 ಕನ್ನಡ

ಚೆನ್ನೈ(ಆಗಸ್ಟ್​.06): ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಚೆನ್ನೈನ ಕಾವೇರಿ ಆಸ್ಪತ್ರೆಯಿಂದ ಆರೋಗ್ಯ ವರದಿ ಬಿಡುಗಡೆಯಾಗಿದ್ದು, ತುರ್ತು ನಿಗಾ ಘಟಕದಲ್ಲಿ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ಮುಮದುವರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ಕರುಣಾನಿಧಿ, ಕರುಣಾನಿಧಿ ಅವರ ಆರೋಗ್ಯ ದಿನೇದಿನೇ ಬಿಗಡಾಯಿಸುತ್ತಿದೆ ಎನ್ನುತ್ತಿವೆ ಮೂಲಗಳು. ಜ್ವರ, ಮೂತ್ರನಾಳ ಸೋಂಕಿನಿಂದ ಬಳಲುತ್ತಿರುವ ಕರುಣಾನಿಧಿ ಅವರ ಆರೋಗ್ಯದಲ್ಲಿ 'ಗಂಭೀರ ವ್ಯತ್ಯಯ'ವಾಗಿದೆ ಎಂದು ಕಾವೇರಿ ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಅಲ್ಲದೇ ಅವರ ಅಭಿಮಾನಿಗಳಿಗೂ ಕಾವೇರಿ ಆಸ್ಪತ್ರೆಯತ್ತ ಮತ್ತೆ ದೌಡಾಯಿಸಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳಿಗೆ ಕಿವಿ ಮಾತು ಹೇಳಿರುವ ಆಸ್ಪತ್ರೆ ಆಡಳಿತ ಮಂಡಳಿಯೂ ಕುರುಣಾನಿಧಿ ಅವರಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದೆ.

ಇನ್ನು ಕರುಣಾನಿಧಿ ಅರೋಗ್ಯ ಸುಧಾರಿಸಲಿ ಎಂದು ಹಾರೈಸಿ ಆಸ್ಪತ್ರೆ ಆವರಣದಲ್ಲೇ ಅಭಿಮಾನಿಗಳು ಮೊಕ್ಕಾಂ ಹೂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಚೆನ್ನೈನ ಕಾವೇರಿ ಆಸ್ಪತ್ರೆಗೆ ಆಗಮಿಸಿ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು. ಈ ಬೆನ್ನಲ್ಲೇ ಕರುಣಾನಿಧಿ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ