ಮರೀನಾ ಬೀಚ್​ನಲ್ಲಿ ಸಮಾಧಿ ಮಾಡಲಾದ ತಮಿಳುನಾಡಿನ ಮೊದಲ ಮಾಜಿ ಮುಖ್ಯಮಂತ್ರಿ ಕರುಣಾನಿಧಿ!


Updated:August 8, 2018, 10:36 PM IST
ಮರೀನಾ ಬೀಚ್​ನಲ್ಲಿ ಸಮಾಧಿ ಮಾಡಲಾದ ತಮಿಳುನಾಡಿನ ಮೊದಲ ಮಾಜಿ ಮುಖ್ಯಮಂತ್ರಿ ಕರುಣಾನಿಧಿ!

Updated: August 8, 2018, 10:36 PM IST
ನ್ಯೂಸ್​ 18 ಕನ್ನಡ

ಚೆನ್ನೈ(ಆ.08): ಮದ್ರಾಸ್​ ಹೈಕೋರ್ಟ್​ ಬುಧವಾರ ಬೆಳಗ್ಗೆ ನಡೆದ ವಿಚಾರಣೆಯಲ್ಲಿ ವಾದ ವಿವಾದವನ್ನು ಆಲಿಸಿ ಕರುಣಾನಿಧಿಯವರ ಪಾರ್ಥೀವ ಶರೀರವನ್ನು ಮರೀನಾ ಬೀಚ್​ನಲ್ಲೇ ಸಮಾಧಿ ಮಾಡಲು ಅವಕಾಶ ನೀಡಿತ್ತು. ಇದರ ಅನ್ವಯ ಇದೀಗ ತಮಿಳುನಾಡಿನ ದಿಗ್ಗಜ ನಾಯಕನನ್ನು ಮರೀನ ಬೀಚ್​ನಲ್ಲಿರುವ ಅವರ ರಾಜಕೀಯ ಗುರು ಅಣ್ಣಾದೊರೈಯವರ ಸ್ಮಾರಕದ ಸಮೀಪವೇ ಸಮಾಧಿ ಮಾಡಲಾಗಿದೆ. ಈ ಮೂಲಕ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿ ಮರೀನಾ ಬೀಚ್​ನಲ್ಲಿ ಸಮಾಧಿ ಮಾಡಲಾಗಿದೆ.

ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ಕರುಣಾನಿಧಿಯವರ ಪಾರ್ಥೀವ ಶರೀರವನ್ನು ಮರೀನಾ ಬೀಚ್​ನಲ್ಲಿ ಸಮಾಧಿ ಮಾಡಲು ಅವಕಾಶ ನೀಡಬೇಕೋ, ಬೇಡವೋ ಎಂಬ ಕುರಿತಾಗಿಯೇ ಚರ್ಚೆ ನಡೆದಿತ್ತು. ತನ್ನ ವಾದವನ್ನು ಮೂಂದಿಟ್ಟಿದ್ದ ಸರ್ಕಾರ ಕರುಣಾನಿಧಿಯವರು ಖುದ್ದು ಒಂದು ಬಾರಿ ಎಂಜಿಆರ್​ ಹೆಂಡತಿ ಜಾನಕಿಯವರನ್ನು ಮರೀನಾ ಬೀಚ್​ನಲ್ಲಿ ಸಮಾಧಿ ಮಾಡುವುದನ್ನು ವಿರೋಧಿಸಿದ್ದರು ಎಂದು ಹೇಳಿತ್ತು. ಆದರೆ ಡಿಎಂಕೆ ಈ ವಾದವನ್ನು ಒಪ್ಪಲಿಲ್ಲ. ಜಾನಕಿಯವರು 100 ದಿನಗಳಿಗೆ ತಮಿಳುನಾಡಿನ ಸಿಎಂ ಆಗಿದ್ದರು. ಬಳಿಕ ಕಾನೂನು ವ್ಯವಸ್ಥೆ ಹದಗೆಟ್ಟ ಪರಿಣಾಮ ಕೇಂದ್ರವು ಕ್ಯಾಬಿನೆಟ್​ನ್ನು ವಜಾಗೊಳಿಸಿತ್ತು.

ಸರ್ಕಾರದ ಅಫಿಡವಿಟ್​ ಅನ್ವಯ 1996ರಲ್ಲಿ ಜಾನಕಿಯವರ ನಿಧನದ ಬಳಿಕ ತಾತ್ಕಾಲಿಕ ಮುಖ್ಯಮಂತ್ರಿ ಕರುಣಾನಿಧಿಯವರು ಭಾರತ ಸರ್ಕಾರದಿಂದ ಅನುಮೋದನೆ ಪಡೆದ ಪ್ರೋಟೋಕಾಲನ್ನು ಅನುಸರಿಸಿದರು. ಈ ಸಂದರ್ಭದಲ್ಲಿ ಯಾವುದೇ ಮಾಜಿ ಮುಖ್ಯಮಂತ್ರಿಗೆ ಮರೀನಾ ಬೀಚ್​ನಲ್ಲಿ ಸಮಾಧಿ ಮಾಡುವ ಅವಕಾಶ ನೀಡಬಾರದು ಎಂದಿದ್ದರು.

ಇದೇ ವಿಚಾರವನ್ನಿಟ್ಟುಕೊಂಡು ಸರ್ಕಾರ ವಾದ ಮಂಡಿಸಿತ್ತಾದರೂ, ಡಿಎಂಕೆ ಪಕ್ಷದ ವಕೀಲರ ತಂಡದ ಎದುರು ಈ ವಾದ ದುರ್ಬಲವಾಗಿತ್ತು. ಹೀಗಾಗಿ ನ್ಯಾಯಾಲಯವು ಕರುಣಾನಿಧಿಯವರನ್ನು ಮರೀನಾ ಬೀಚ್​ನಲ್ಲೇ ಸಮಾಧಿ ಮಾಡುವ ಅವಕಾಶ ನೀಡಿತು.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...