ಕರುಣಾನಿಧಿ ತಪ್ಪು ನನಗೆ ಪಾಠ, ಯಶಸ್ಸು ನಮ್ಮ ಸ್ಪೂರ್ತಿ: ದ್ರಾವಿಡರಿಗೆ ನೆರಳಾಗಿದ್ದ ಹೆಮ್ಮರ ಉರುಳಿತು ಎಂದು ಕಮಲ್​ ಸಂತಾಪ


Updated:August 8, 2018, 2:54 PM IST
ಕರುಣಾನಿಧಿ ತಪ್ಪು ನನಗೆ ಪಾಠ, ಯಶಸ್ಸು ನಮ್ಮ ಸ್ಪೂರ್ತಿ: ದ್ರಾವಿಡರಿಗೆ ನೆರಳಾಗಿದ್ದ ಹೆಮ್ಮರ ಉರುಳಿತು ಎಂದು ಕಮಲ್​ ಸಂತಾಪ

Updated: August 8, 2018, 2:54 PM IST
ನ್ಯೂಸ್​-18 ಕನ್ನಡ

ನವದೆಹಲಿ (ಆಗಸ್ಟ್​​.8):  ದ್ರಾವಿಡ ಚಳುವಳಿಯ ಕೊನೆಯ ಕೊಂಡಿ ಕರುಣಾನಿಧಿ ಅವರ ರಾಜಕೀಯ ಹೋರಾಟದ ಹೆಜ್ಜೆಗಳು ನನ್ನ ವೃತ್ತಿ ಜೀವನ ನಿರ್ಮಾಣಕ್ಕೆ ಮೆಟ್ಟಿಲುಗಳಾಗಿವೆ ಎಂದು ನಟ ಕಮಲ್​ ಹಾಸನ್ ತಿಳಿಸಿದ್ದಾರೆ.

ಕರುಣಾನಿಧಿ ಅವರ ತಪ್ಪು ನನಗೆ ಪಾಠವಾದರೆ, ಸಾಧನೆ ನನಗೆ ಸ್ಪೂರ್ತಿಯಾಗಿದೆ. ಅವರು ರಾಜಕಾರಣಿಯಾಗುವುದಕ್ಕಿಂತ ಮೊದಲು ಕಥೆಗಾರರಾಗಿ ನನಗೆ ಚಿರಪರಿಚಿತರು ಎಂದು ನಟ, ರಾಜಕಾರಣಿ ನ್ಯೂಸ್​ 18ನ ಬೈಠಕ್ ಎಂಬ​ ಕಾರ್ಯಕ್ರಮದಲ್ಲಿ ಕೊಂಡಾಡಿದ್ಧಾರೆ.

ನನ್ನನ್ನು ಒಳಗೊಂಡಂತೆ ಹಲವು ನಟರಿಗೆ ಶಿಕ್ಷಕರಾಗಿ ಅನೇಕ ವಿಷಯಗಳನ್ನು ಕಲಿಸಿದ್ದಾರೆ. ಯಾರು ತಮ್ಮ ಕಲೆಯನ್ನು ಪ್ರದರ್ಶಿಸಬೇಕು ಎಂದು ಉತ್ಸುಕರಾಗಿದ್ದರೋ, ಅಂತಹ ದಿಗ್ಗಜರಿಗೆ ಕರುಣಾನಿಧಿ ಮಾರ್ಗದರ್ಶಕರಾಗಿದ್ದರು ಎಂದರು.

ಭಾಷೆ ಬಳಕೆಯ ಜ್ಞಾನ ಕರುಣಾನಿಧಿಯಿಂದ ಬಂದರೆ, ಧ್ವನಿ ಅನುಕರಣೆ ಶಿವಾಜಿ ಗಣೇಶನ್​ ಹಾಗೂ ಶಬ್ದಕೋಶ ಕನ್ನದಾಸನ್​ ಅವರಿಂದ ಬಂದಿದೆ. ಈ ಮೂವರು ಶಿಕ್ಷಕರು ತಮಿಳಿನ ಬಹುತೇಕ ನಟರಿಗೆ ತಮಿಳು ಕಲಿಸಿದವರು. ಆದರೆ, ಇಂದು ಮೂವರು ನಮ್ಮ ಜೊತೆಗಿಲ್ಲ ಎಂದು ನೆನೆಯುವ ಮೂಲಕ ಸಂತಾಪ ಸೂಚಿಸಿದರು.

ಇದೆ ವೇಳೆ ಕರುಣಾನಿಧಿ ಅವರ ರಾಜಕೀಯ ಕುರಿತು ಮಾತನಾಡಿದ ಕಮಲ್​ ಹಾಸಲ್​, ಕರುಣಾನಿಧಿಯವರದು ಸುದೀರ್ಘ ರಾಜಕೀಯ ಪಯಣ. 19 ವರ್ಷಕ್ಕೆ ರಾಜಕೀಯಕ್ಕೆ ಬಂದ ಇವರು, ಸುಮಾರು 70 ವರ್ಷಗಳಿಗೂ ಮೀರಿ ರಾಜಕೀಯದಲ್ಲಿದ್ದರು. ಹಲವು ತಲೆಮಾರುಗಳ ಅನೇಕ ವಿಷಯಗಳಿಂದ ಪರಿಣಿತರಾಗಿದ್ದರು ಎಂದು ಕಮಲ್​ ಹಾಸನ್​ ಹೇಳಿದರು.

ಕಾಂಗ್ರೆಸ್​ನಂತಹ ದೊಡ್ಡ ಪಕ್ಷದ ನಡುವೆ ಅವರ ಪಕ್ಷ ಮೈ ಕೊಡವಿ ಮೇಲೆಳುವುದು ಕಷ್ಟವಾಯಿತು. ಅವರಿಗೆ ಇದ್ದದ್ದು ಒಂದೇ ಸಾಧನಾ ಅದುವೇ ಸಿನಿಮಾ. ಇದನ್ನೇ ಸಂಪೂರ್ಣವಾಗಿ ಬಳಸಿ ಪಕ್ಷಕ್ಕೆ ಬೆಂಬಲ ಗಿಟ್ಟಿಸಿದರು ಎಂದರು.
Loading...

ಸಿನಿಮಾ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ಬಳಸಿದ ಮೊದಲ ರಾಜಕೀಯ ಪಕ್ಷ ಇದೇ . ಇದೇ ಸೂತ್ರವನ್ನು ಅಮೆರಿಕ ಜರ್ಮನಿಯಲ್ಲಿಯೂ ಕೂಡ ಅನುಸರಿಸಿದರೂ ಯಶಸ್ವಿಯಾಗಲಿಲ್ಲ. ಡಿಎಂಕೆ ಪಕ್ಷ ಮಾತ್ರ ಇದನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಕಮಲ್​ ಹಾಸನ್​ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...