ಕರುಣಾನಿಧಿ ನನಗೂ ಅಪ್ಪನ ಸ್ಥಾನದಲ್ಲಿದ್ದರು: ಸ್ಟಾಲಿನ್​ಗೆ ಸೋನಿಯಾಗಾಂಧಿ ಭಾವನಾತ್ಮಕ ಪತ್ರ

news18
Updated:August 8, 2018, 1:55 PM IST
ಕರುಣಾನಿಧಿ ನನಗೂ ಅಪ್ಪನ ಸ್ಥಾನದಲ್ಲಿದ್ದರು: ಸ್ಟಾಲಿನ್​ಗೆ ಸೋನಿಯಾಗಾಂಧಿ ಭಾವನಾತ್ಮಕ ಪತ್ರ
news18
Updated: August 8, 2018, 1:55 PM IST
ನ್ಯೂಸ್​18 ಕನ್ನಡ
'ನಿಮ್ಮ ಅಪ್ಪ ಕರುಣಾನಿಧಿ ರಾಜಕೀಯದಲ್ಲಿ ಮಾತ್ರವಲ್ಲದೆ ನನಗೆ ವೈಯಕ್ತಿಕವಾಗಿಯೂ ಆಪ್ತರಾಗಿದ್ದರು. ಅವರು ನನಗೂ ಅಪ್ಪನ ಸ್ಥಾನದಲ್ಲಿದ್ದರು' ಎಂದು ಸ್ಟಾಲಿನ್​ಗೆ ಪತ್ರ ಬರೆದಿರುವ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಈ ಪತ್ರ ಸೋನಿಯಾಗಾಂಧಿ ಮತ್ತು ಕರುಣಾನಿಧಿ ಅವರ ನಡುವೆ ಇದ್ದ ಸಂಬಂಧವನ್ನು ಅಭಿವ್ಯಕ್ತಿಸುತ್ತಿದೆ. ಕಾಂಗ್ರೆಸ್​ ನಾಯಕಿ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ನಡುವೆ ಆಗಾಗ ರಾಜಕೀಯ ತಿಕ್ಕಾಟಗಳು ನಡೆಯುತ್ತಿದ್ದರೂ ವೈಯಕ್ತಿಕವಾಗಿ ಸೋನಿಯಾ ಗಾಂಧಿ ಕರುಣಾನಿಧಿಯವರನ್ನು ತುಂಬ ಗೌರವಿಸುತ್ತಿದ್ದರು. ಕಳೆದ ವರ್ಷ ಕರುಣಾನಿಧಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಪತ್ರ ಕಳುಹಿಸಿದ್ದ ಸೋನಿಯಾ ಗಾಂಧಿ, ಕೆಲವೇ ಕೆಲ ನಾಯಕರು ಮಾತ್ರ ರಾಜಕೀಯದಲ್ಲಿ ಇರುವಾಗಲೂ, ಅಧಿಕಾರದಲ್ಲಿ ಇಲ್ಲದಿರುವಾಗಲೂ ಜನರ ಮನಸ್ಸಿನಲ್ಲಿ ಅಚ್ಚಳಿಯುತ್ತಾರೆ. ತಮಿಳುನಾಡಿನ ರಾಜಕಾರಣದ ಎರಡು ಧ್ರುವಗಳಲ್ಲಿ ಕರುಣಾನಿಧಿ ಕೂಡ ಒಬ್ಬರು ಎಂದು ಬಣ್ಣಿಸಿದ್ದರು.48 ವರ್ಷಗಳ ಕಾಲ ನಿರಂತರವಾಗಿ ರಾಜಕಾರಣದಲ್ಲಿ ಇರುವುದು ಸುಲಭದ ಮಾತಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ದಾಖಲೆಯೇ ಸರಿ. ಅವರಿಲ್ಲದೆ ನಮ್ಮ ದೇಶ ಬಡವಾಗಿದೆ. ಅವರ ನಂತರ ಪಕ್ಷದ ಮುಂದಾಳತ್ವವನ್ನು ನೀವು ವಹಿಸಿಕೊಂಡರೆ ಅಪ್ಪನಿಗೆ ತೃಪ್ತಿಯಾಗುತ್ತದೆ ಎಂದು ಸೋನಿಯಾಗಾಂಧಿ ಸ್ಟಾಲಿನ್​ಗೆ ಪತ್ರದಲ್ಲಿ ಬರೆದಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ