ಕರುಣಾನಿಧಿ ವಾಸವಿದ್ದ ಗೋಪಾಲಪುರಂ ನಿವಾಸ ಬಡವರ ಆಸ್ಪತ್ರೆಯಾಗಲಿದೆ !

news18
Updated:August 8, 2018, 8:30 AM IST
ಕರುಣಾನಿಧಿ ವಾಸವಿದ್ದ ಗೋಪಾಲಪುರಂ ನಿವಾಸ ಬಡವರ ಆಸ್ಪತ್ರೆಯಾಗಲಿದೆ !
news18
Updated: August 8, 2018, 8:30 AM IST
ನ್ಯೂಸ್ 18 ಕನ್ನಡ

ಚೆನ್ನೈ (ಆಗಸ್ಟ್ 8): ದಿವಂಗತ ಕರುಣಾನಿಧಿ ಅವರು ವಾಸವಾಗಿದ್ದ ಗೋಪಾಲಪುರಂ ನಗರದ ನಿವಾಸ ‘ಅಂಜಗಂ ಇಲ್ಲಂ’ ಇನ್ನು ಮುಂದೆ ಬಡವರ ಆಸ್ಪತ್ರೆಯಾಗಿ ಪರಿವರ್ತನೆಯಾಗಲಿದೆ.

2010ರಲ್ಲಿ ತಮ್ಮ 86ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಈ ಮನೆಯನ್ನು ಕರುಣಾನಿಧಿ ಅವರು ‘ಅಣ್ಣಾ ಅಂಜುಗಂ’ ಟ್ರಸ್ಟ್ಗೆ ದೇಣಿಗೆಯಾಗಿ ನೀಡಿ, ಬಡವರಿಗಾಗಿ ಆಸ್ಪತ್ರೆ ನಡೆಸುವಂತೆ ತಿಳಿಸಿದ್ದರು. ಈಗ ‘ಕಲೈನಾರ್ ಕರುಣಾನಿಧಿ ಆಸ್ಪತ್ರೆ’ ಎಂಬ ಹೆಸರಿನ ಆಸ್ಪತ್ರೆ ಆರಂಭಿಸಲು ಟ್ರಸ್ಟ್ ಮುಂದಾಗಿದೆ.

ಕರುಣಾನಿಧಿ ಅವರು ತಮಿಳು ಚಿತ್ರರಂಗದ ಕಥೆಗಾರ, ಸಂಭಾಷಣಾಕಾರರಾಗಿ ಮುಂಚೂಣಿಯಲ್ಲಿದ್ದಾಗ ಶರಭೇಶ್ವರ ಅಯ್ಯರ್ ಎಂಬುವವರಿಂದ 1955ರಲ್ಲಿ ಈ ಮನೆಯನ್ನು ಖರೀದಿಸಿದ್ದರು.

ಐದು ದಶಕಗಳಿಗೂ ಹೆಚ್ಚು ಕಾಲ ಕರುಣಾನಿಧಿ ಅವರು ಈ ಮನೆಯಲ್ಲಿ ವಾಸವಾಗಿದ್ದರು. ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಜನಸಾಮಾನ್ಯರ ಭೇಟಿಯಿಂದ ಈ ಮನೆ ಸದಾ ಗಿಜಿಗುಡುತ್ತಿತ್ತು. ಇನ್ನು ಮುಂದೆಯೂ ಬಡವರ ಆಸ್ಪತ್ರೆಯಾಗಿ, ಸಾಮಾನ್ಯ ಜನರ ಆರೋಗ್ಯ ಸೇವೆಯಿಂದಲೂ ಈ ಮನೆ ಜನರಿಂದ ತುಂಬಿರಲಿದೆ.

“ನಾನು ವಿಚಾರವಾದಿ. ಈ ಕ್ರಮದಿಂದ ನನಗೆ ತೃಪ್ತಿಯಾಗಿದೆ. ಒಂದು ವೇಳೆ ನಾನು ಅಧ್ಯಾತ್ಮದಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿಯಾಗುತ್ತಿತ್ತು,” ಎಂದು ತಮ್ಮ ಮನೆಯನ್ನು ಕೊಡುಗೆಯಾಗಿ ನೀಡುವ ಸಂದರ್ಭದಲ್ಲಿ ಕರುಣಾನಿಧಿ ಅವರು ಹೇಳಿದ್ದರು.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ