LIVE NOW

(Live) ಕರುಣಾನಿಧಿ ಸಮಾಧಿಗೆ ತೊಡಕು: ಕೋರ್ಟ್​ ಮೆಟ್ಟಿಲೇರಿದ ಡಿಎಂಕೆ; ಕನ್ನಡಿಗ ನ್ಯಾಯಮೂರ್ತಿಯಿಂದ ವಿಚಾರಣೆ

Kannada.news18.com | August 7, 2018, 11:45 PM IST
facebook Twitter google Linkedin
Last Updated August 7, 2018
auto-refresh

Highlights

ತಮಿಳು ನಾಡಿನ ಆರಾಧ್ಯ ದೈವ, ಮಾಜಿ ಮುಖ್ಯಮಂತ್ರಿ, ಕಲೈಙರ್​ ಎಂ ಕರುಣಾನಿಧಿ 11 ದಿನಗಳ ಸಾವು ಬದುಕಿನ ನಡುವಿನ ಹೋರಾಟದ ನಂತರ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾವೇರಿ ಆಸ್ಪತ್ರೆಯ ಆಡಳಿತ ಮಂಡಳಿ ಅಧಕೃತ ಆದೇಶ ಹೊರಡಿಸಿದ್ದು, ತಮಿಳು ನಾಡಿನಾದ್ಯಂತ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಒಂದೆಡೆ ಇಡೀ ದೇಶದ ಹಿರಿಯ ರಾಜಕೀಯ ನಾಯಕರು ಕರುಣಾನಿಧಿಯವರ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನೊಂದೆಡೆ ತಮಿಳು ನಾಡು ಜನತೆ ನೆಚ್ಚಿನ ನಾಯಕನನ್ನು ಕಳೆದುಕೊಂಡ ದುಖಃದಲ್ಲಿದೆ. ಆದರೆ ಅಗಲಿದ ನಾಯಕನ ಅಂತ್ಯಕ್ರಿಯೆಗೆ ಮರೀನಾ ಬೀಚಿನಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ ತಮಿಳುನಾಡು ಸರ್ಕಾರ. ಮರೀನಾ ಬೀಚಿನಲ್ಲಿ ಎಂಜಿ ರಾಮಚಂದ್ರನ್​, ಜಯಲಲಿತಾ ಸಮಾಧಿಯನ್ನು ಮಾಡಲಾಗಿದೆ. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುವವರಿಗೆ ಮಾತ್ರ ಅಲ್ಲಿ ಅಂತ್ಯಕ್ರಿಯೆಗೆ ಅವಕಾಶವಿದೆ ಎಂಬ ಕಾನೂನು ತೊಡಕೀಗ ಉಂಟಾಗಿದೆ. ತಮಿಳರಿಗಾಗಿ, ತಮಿಳುನಾಡಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹಾ ನಾಯಕ ಕರುಣಾನಿಧಿ ಅಂತ್ಯಕ್ರಿಯೆಗೆ ಮರೀನಾ ಬೀಚಿನಲ್ಲಿ ಜಾಗ ಸಿಗುವುದು ಅನುಮಾನವಾಗಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡದಲ್ಲಿ
Load More