ನವದೆಹಲಿ(ಮೇ.17): ಕೇಂದ್ರೀಯ ತನಿಖಾ ದಳ (CBI) ಮಂಗಳವಾರ ಬೆಳಗ್ಗೆ ದೇಶದ ವಿವಿಧ ನಗರಗಳಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ (P Chidambaram) ಅವರ ಪುತ್ರ, ಕಾಂಗ್ರೆಸ್ ಮುಖಂಡ (Congress Leader) ಕಾರ್ತಿ ಚಿದಂಬರಂ ಅವರ ಮನೆಗಳಲ್ಲಿ ರೇಡ್ ಮಾಡಿದೆ. ಸಿಬಿಐ ಮೂಲಗಳ ಪ್ರಕಾರ ದೆಹಲಿ (Delhi), ಮುಂಬೈ (Mumbai) ಮತ್ತು ಚೆನ್ನೈನ (Chennai) ಒಂಬತ್ತು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರ ನಿವಾಸ ಮತ್ತು ಕಚೇರಿ ಸೇರಿ ಅನೇಕ ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ಕಾರ್ತಿ ಅವರ ಕಚೇರಿ ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಚೀನಾದ ಪ್ರಜೆಗಳ ವೀಸಾಗೆ ಅನುಕೂಲ ಮಾಡಿಕೊಟ್ಟ ಆರೋಪದಲ್ಲಿ ಅಕ್ರಮ ಲಾಭ ಪಡೆದ ಆರೋಪದ ಮೇಲೆ ಲೋಕಸಭೆ ಸಂಸದರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಹೊಸ ಪ್ರಕರಣ ದಾಖಲಿಸಿದೆ. ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕ ಭಾರತೀಯ ವೀಸಾ ಪಡೆಯಲು ಸಹಾಯ ಮಾಡಲು 250 ಚೀನೀ ಪ್ರಜೆಗಳಿಂದ 50 ಲಕ್ಷ ರೂ. ಪಡೆದಿದ್ದಾರೆ ಎನ್ನಲಾಗಿದೆ.
I have lost count, how many times has it been? Must be a record.
— Karti P Chidambaram (@KartiPC) May 17, 2022
ಇದನ್ನೂ ಓದಿ: Assam Floods: ಅಸ್ಸಾಂನಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ, ರಕ್ಷಣಾ ಕಾರ್ಯಕ್ಕೆ ಬಂದ ಸೇನಾ ಹೆಲಿಕಾಪ್ಟರ್
ತನಿಖಾ ಸಂಸ್ಥೆಯ ತಂಡವು ಅವರ ಜೋರ್ ಬಾಗ್ ನಿವಾಸದ ಗೋಡೆಗಳನ್ನು ಪರಿಶೀಲನೆ ನಡೆಸಿ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತು.
ಲಂಚದ ಆರೋಪದ ಮೇಲೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರ ಮನೆ ಮತ್ತು ಕಚೇರಿಗಳಲ್ಲಿ ಸಿಬಿಐ ಇಂದು ಶೋಧ ನಡೆಸಿದೆ. ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಏಳು ಸ್ಥಳಗಳನ್ನು ಚೆನ್ನೈ, ಮುಂಬೈ, ಒಡಿಶಾ ಮತ್ತು ದೆಹಲಿಯಾದ್ಯಂತ ಶೋಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
250 ಚೀನೀ ಪ್ರಜೆಗಳ ವೀಸಾ
2010-14ರ ನಡುವೆ ಪಂಜಾಬ್‌ನಲ್ಲಿ ಪವರ್ ಪ್ರಾಜೆಕ್ಟ್‌ಗಾಗಿ 250 ಚೀನೀ ಪ್ರಜೆಗಳ ವೀಸಾವನ್ನು ಸುಗಮಗೊಳಿಸಲು ಕಾರ್ತಿ ಚಿದಂಬರಂ ₹ 50 ಲಕ್ಷ ಲಂಚ ಪಡೆದ ಆರೋಪದ ಮೇಲೆ ತನಿಖಾ ಸಂಸ್ಥೆ ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
80 ಲೋಧಿ ಎಸ್ಟೇಟ್ ನಿವಾಸ ಶೋಧ
ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆ ಚಿದಂಬರಂ ಅವರ 80 ಲೋಧಿ ಎಸ್ಟೇಟ್ ನಿವಾಸವನ್ನು ಸಿಬಿಐ ಶೋಧಿಸಿದೆ. ಸಿಬಿಐ ತಂಡವು ಅವರ ಮನೆಯಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿತು ಮತ್ತು ಅವರೊಂದಿಗೆ ಕೆಲವು ಕಾಗದಗಳನ್ನು ತೆಗೆದುಕೊಂಡು ಹೋಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Delhi Temperature: ಕೆಟ್ಟದಾಗಿದೆ ದೆಹಲಿ ಬಿಸಿಲು, 49ರ ಗಡಿ ತಲುಪಿದ ತಾಪಮಾನ! ಬೆಂಗ್ಳೂರು ಬೇಕು ಅಂತಿದ್ದಾರೆ ರಾಜಧಾನಿ ಜನ
"ಸಿಬಿಐ ತಂಡದಲ್ಲಿ ಒಟ್ಟು ಏಳು ಸದಸ್ಯರಿದ್ದರು. ಕಾರ್ತಿ ಚಿದಂಬರಂ ಅವರು ಬೆಳಿಗ್ಗೆ 7.30 ರ ದಾಳಿಯ ಸಮಯದಲ್ಲಿ ಅವರ ನಿವಾಸದಲ್ಲಿ ಇರಲಿಲ್ಲ" ಎಂದು ಅವರ ಮನೆಯಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಬೀರ್ಬಲ್ ಸಿಂಗ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ