ಕರ್ತಾರ್​ಪುರ್​ ಕಾರಿಡಾರ್​ ಉದ್ಘಾಟಿಸಲಿರುವ ಮೋದಿ; ಮೊದಲ ಯಾತ್ರಾರ್ಥಿಗಳ ತಂಡದಲ್ಲಿ ಮನಮೋಹನ್​ ಸಿಂಗ್​

ಸಿಖ್​ ಧರ್ಮ ಸಂಸ್ಥಾಪಕ ಗುರುನಾನಾಕ್​ ದೇವ್​​ ಅವರ 550ನೇ ವಾರ್ಷಿಕೋತ್ಸವದ ಅಂಗವಾಗಿ ಮನಮೋಹನ್​ ಸೇರಿದಂತೆ 550 ಯಾತ್ರಾರ್ಥಿಗಳು ಮೊದಲ ಹಂತವಾಗಿ ಪಾಕಿಸ್ತಾನದಲ್ಲಿರುವ ಈ ಕ್ಷೇತ್ರಕ್ಕೆ ಕರ್ತಾರ್​ಪುರ ಕಾರಿಡಾರ್​ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.

Seema.R | news18-kannada
Updated:November 9, 2019, 12:09 PM IST
ಕರ್ತಾರ್​ಪುರ್​ ಕಾರಿಡಾರ್​ ಉದ್ಘಾಟಿಸಲಿರುವ ಮೋದಿ; ಮೊದಲ ಯಾತ್ರಾರ್ಥಿಗಳ ತಂಡದಲ್ಲಿ ಮನಮೋಹನ್​ ಸಿಂಗ್​
ಸಿಖ್​ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ
  • Share this:
ನವದೆಹಲಿ (ನ.09): ಸಿಖ್​ ಯಾತ್ರಿಕರ ಪವಿತ್ರ ಸ್ಥಳವಾಗಿರುವ ದೇರಾಬಾಬ್​ ನಾನಕ್​ಗೆ ಪ್ರವೇಶ ಕಲ್ಪಿಸಲು ಭಾರತ-ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕರ್ತಾರ್​ಪುರ್​ ಕಾರಿಡಾರ್​ನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದಲ್ಲಿರುವ ಕರ್ತಾರ್​ ಸಹಿಬ್​ ಗುರುದ್ವಾರಗೆ ಸಂಚಾರ ಕಲ್ಪಿಸುವ ಕರ್ತಾರ್​ಪುರ ಕಾರಿಡಾರ್​ ಚೆಕ್​ಪೋಸ್ಟ್​​ ಬಳಿ ಪ್ರಧಾನಿ ಚಾಲನೆ ನೀಡಲಿದ್ದಾರೆ. ಪಾಕಿಸ್ತಾದ ಕಡೆಯಿಂದ ಪ್ರಧಾನಿ ಇಮ್ರಾನ್​ ಖಾನ್​ ಚಾಲನೆ ನೀಡಲಿದ್ದು, ಭಾರತದ ಸಿಖ್​ ಯಾತ್ರಾರ್ಥಿಗಳನ್ನು ಸ್ವಾಗತಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಲೋದಿಯ ಸುಲ್ತಾನ್​ಪುರ್​ನಲ್ಲಿರುವ ಬೆರ್​ ಸಹಿಬ್​ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.


ಸಿಖ್​ ಧರ್ಮ ಸಂಸ್ಥಾಪಕ ಗುರುನಾನಾಕ್​ ದೇವ್​​ ಅವರ 550ನೇ ವಾರ್ಷಿಕೋತ್ಸವದ ಅಂಗವಾಗಿ ಮನಮೋಹನ್​ ಸೇರಿದಂತೆ 550 ಯಾತ್ರಾರ್ಥಿಗಳು ಮೊದಲ ಹಂತವಾಗಿ ಪಾಕಿಸ್ತಾನದಲ್ಲಿರುವ ಈ ಕ್ಷೇತ್ರಕ್ಕೆ ಕರ್ತಾರ್​ಪುರ ಕಾರಿಡಾರ್​ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.ಮೊದಲ ತಂಡದಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಅಕಾಲ್​ ತಕ್ತಾ ಜತೇದರ್​ ಹರ್​ಪ್ರೀತ್​ ಸಿಂಗ್​, ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​, ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್​, ಸುಖಬಿರ್​ ಸಿಂಗ್​ ಬಾದಲ್​, ನವಜೋತ್​ ಸಿಂಗ್​ ಸಿಧು, ಎಸ್​ಜಿಪಿಸಿ ಸದಸ್ಯರು ಮತ್ತು 117 ಶಾಸಕರು ಮತ್ತು ಸಂಸದರು ‘ಜತ’ ಯಾತ್ರೆ ಕೈಗೊಳ್ಳಲಿದ್ದಾರೆ.

ಇದನ್ನು ಓದಿ:Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

ಈ ಕಾರಿಡಾರ್​ ಅಂತರಾಷ್ಟ್ರೀಯ ಮಾರ್ಗವಾಗಿದ್ದು, ಎರಡು ದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಇನ್ನು ಈ ಸ್ಥಳಕ್ಕೆ ಪ್ರಯಣಿಸಲು ಭಾರತೀಯರು ಪಾಸ್​ಪಾರ್ಟ್​ ಕಡ್ಡಾಯವಾಗಿದೆ.

First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading