ಭಾರತ ಆವಿಷ್ಕಾರ ಸೂಚ್ಯಂಕ 2019: ಕರ್ನಾಟಕಕ್ಕೆ ಅಗ್ರಸ್ಥಾನ; ಬಂಡವಾಳ ಹೂಡಿಕೆಗೆ ಸೂಕ್ತ ರಾಜ್ಯ ಎಂದ ನೀತಿ ಆಯೋಗ

ಭಾರತವು ನೂತನ ಆವಿಷ್ಕಾರ ಕೇಂದ್ರವಾಗಿ ಬೆಳೆಯುತ್ತಿದೆ. ಆವಿಷ್ಕಾರ ಮತ್ತು ಸೃಜನಶೀಲತೆಯಲ್ಲಿ ಭಾರತ ಇನ್ನಷ್ಟು ಮೇಲ್ದರ್ಜೆಗೆ ಏರಲಿದೆ ಎಂದುಕ್ಕೆ ಈ ಸೂಚ್ಯಂಕ ಪುಷ್ಟಿ ನೀಡಿದೆ.

news18-kannada
Updated:October 17, 2019, 8:00 PM IST
ಭಾರತ ಆವಿಷ್ಕಾರ ಸೂಚ್ಯಂಕ 2019: ಕರ್ನಾಟಕಕ್ಕೆ ಅಗ್ರಸ್ಥಾನ; ಬಂಡವಾಳ ಹೂಡಿಕೆಗೆ ಸೂಕ್ತ ರಾಜ್ಯ ಎಂದ ನೀತಿ ಆಯೋಗ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಅ.17): 2019ನೇ ಸಾಲಿನ ಭಾರತ ಆವಿಷ್ಕಾರ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಕರ್ನಾಟಕವೂ ಆವಿಷ್ಕಾರ ಮತ್ತು ಹೊಸದಾಗಿ ಹೊರ ಹೊಮ್ಮುತ್ತಿರುವ ತಂತ್ರಜ್ಞಾನಗಳಲ್ಲಿ ಉತ್ತಮ ಸಾಧನೆ ತೋರುತ್ತಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ಬಂಡವಾಳ ಹೂಡಲು ಸೂಕ್ತವಾದ ರಾಜ್ಯ ಕರ್ನಾಟಕ ಎಂದು ನೀತಿ ಆಯೋಗ ತಿಳಿಸಿದೆ.

ಇಂದು ನೀತಿ ಆಯೋಗದ ಉಪಾಧ್ಯಕ್ಷ ಮತ್ತು ಹಿರಿಯ ಅರ್ಥಶಾಸ್ತ್ರಜ್ಞ ರಾಜೀವ್ ಕುಮಾರ್‌, ಭಾರತ ಆವಿಷ್ಕಾರ ಸೂಚ್ಯಂಕ(2019) ಬಿಡುಗಡೆ ಮಾಡಿದರು. ಈ ಸೂಚ್ಯಂಕದಲ್ಲಿ ತಮಿಳುನಾಡು, ಮಹಾರಾಷ್ಟ್ರ, ಬಿಹಾರ, ಜಾರ್ಖಾಂಡ್ ಮತ್ತು ಛತ್ತೀಸ್​​ಗಡ ಕ್ರಮವಾಗಿ ಮೊದಲ ಹತ್ತನೇ ಸ್ಥಾನದಲ್ಲಿವೆ.

ಭಾರತವು ನೂತನ ಆವಿಷ್ಕಾರ ಕೇಂದ್ರವಾಗಿ ಬೆಳೆಯುತ್ತಿದೆ. ಆವಿಷ್ಕಾರ ಮತ್ತು ಸೃಜನಶೀಲತೆಯಲ್ಲಿ ಭಾರತ ಇನ್ನಷ್ಟು ಮೇಲ್ದರ್ಜೆಗೆ ಏರಲಿದೆ ಎಂದುಕ್ಕೆ ಈ ಸೂಚ್ಯಂಕ ಪುಷ್ಟಿ ನೀಡಿದೆ.

ರಾಜ್ಯಗಳ ಶ್ರೇಯಾಂಕ ನಿರ್ಧರಿಸಲು ಜಾಗತಿಕ ಆವಿಷ್ಕಾರ ಸೂಚ್ಯಂಕ 80 ಅಂಶಗಳನ್ನು ಪರಿಗಣಿಸುತ್ತದೆ. ಬೌದ್ಧಿಕ ಆಸ್ತಿಯಿಂದ ಮೊಬೈಲ್‌ ಅಪ್ಲಿಕೇಷನ್‌ ಸೃಷ್ಟಿ, ಶಿಕ್ಷಣ, ವೆಚ್ಚಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಅಂಶಗಳ ಪರಾಮರ್ಶೆ ಮಾಡಲಾಗಿದೆ.

ಇದನ್ನೂ ಓದಿ: ತಕ್ಷಣ ಕೃಷ್ಣಭಟ್​ರನ್ನು ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿಯಾಗಿ ನೇಮಿಸಿ: ಸುಪ್ರೀಂ ಶಿಫಾರಸು

ಸಂಶೋಧನೆ ಮತ್ತು ಅಭಿವೃದ್ಧಿ ವಿನಿಯೋಗ, ಉತ್ಪಾದನಾ ಸಾಮರ್ಥ್ಯ ಮತ್ತು ಅತ್ಯುನ್ನತ ತಂತ್ರಜ್ಞಾನದ ಸಾರ್ವಜನಿಕ ಕಂಪೆನಿಗಳು ಸೇರಿದಂತೆ ಏಳು ವಲಯಗಳನ್ನು ಈ ಸೂಚ್ಯಂಕ ಒಳಗೊಂಡಿದೆ. ಭಾರತದ ಅತ್ಯಧಿಕ ಆವಿಷ್ಕಾರಿ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ದೇಶಾದ್ಯಂತ ಆವಿಷ್ಕಾರ ಕ್ಷೇತ್ರವನ್ನು ಒಳನೋಟಕ್ಕೆ ಒಳಪಡಿಸುವ ಉದ್ಯಮ ಕ್ಷೇತ್ರದ ಅಧಿಕಾರಿಗಳು, ನೀತಿ ರೂಪಕರು ಮತ್ತು ಇತರರಿಗೆ ಜಿಐಐ ಶ್ರೇಯಾಂಕ ಪ್ರಮುಖ ಮಾನದಂಡವಾಗಿದೆ. ನಿರಂತರವಾಗಿ ಅಭಿವೃದ್ಧಿಯ ಮೌಲ್ಯಮಾಪನ ಮಾಡಲು ಜಾಗತಿಕ ಆವಿಷ್ಕಾರ ಸೂಚ್ಯಂಕವನ್ನು ಬಳಸಲಾಗುತ್ತಿದೆ.----------
First published: October 17, 2019, 7:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading