ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷಗಳಿಂದ 10,500 ಕೋಟಿ ಖರ್ಚು..!


Updated:May 14, 2018, 7:18 PM IST
ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷಗಳಿಂದ 10,500 ಕೋಟಿ ಖರ್ಚು..!

Updated: May 14, 2018, 7:18 PM IST
-ನ್ಯೂಸ್​18 ಕನ್ನಡ

ನವದೆಹಲಿ(ಮೇ.14): ಭಾರತದ ಇತಿಹಾಸದಲ್ಲೇ  ಕರ್ನಾಟಕ ಚುನಾವಣೆ ಅತ್ಯಂತ ದುಬಾರಿ ಚುನಾವಣೆ  ಎಂದು ಸಂಸ್ಥೆಯೊಂದರ ಸಮೀಕ್ಷೆ ಹೇಳುತ್ತಿದೆ. ಸೆಂಟರ್ ಫಾರ್​​ ಮೀಡಿಯಾ ಸ್ಟಡೀಸ್​​ ಸಂಸ್ಥೆ ಈ ಬಾರಿ ಕರ್ನಾಟಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಖರ್ಚು ಮಾಡಿದ ಹಣದ ಪ್ರಮಾಣ ಕುರಿತು ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯಲ್ಲಿ ಇಲ್ಲಿಯತನಕ ನಡೆದಿರುವ ಎಲ್ಲಾ ರಾಜ್ಯಗಳ ಚುನಾವಣೆಗಿಂತ ಕರ್ನಾಟಕದ ಚುನಾವಣೆಯ ಅತ್ಯಂತ ದುಬಾರಿ ಎಂದು ಸಂಸ್ಥೆ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಉಲ್ಲೇಖ ಮಾಡಿದೆ.

ಸಿಎಂಎಸ್​ ಸಂಸ್ಥೆ ಪ್ರಕಾರ ಕರ್ನಾಟಕದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬರೋಬ್ಬರಿ 9,500-10,500 ಕೋಟಿ ಹಣದ ಹೊಳೆ ಹರಿಸಿವೆ ಎಂದು ಅಂದಾಜಿಸಲಾಗಿದೆ. ಇದು ಕಳೆದ 2013 ರಲ್ಲಿ ನಡೆದ ಚುನಾವಣೆಯಲ್ಲಿ ಚೆಲ್ಲಿದ ಹಣದ ಪ್ರಮಾಣಕ್ಕಿಂತ ದುಪ್ಪಟ್ಟಾಗಿದೆ ಎನ್ನಲಾಗಿದೆ.

ಸಮೀಕ್ಷೆಯಲ್ಲಿ ಪ್ರಧಾನ ಮಂತ್ರಿಗಳು ಪ್ರಚಾರಕ್ಕಾಗಿ ಬಳಸಿದ ಹಣದ ಲೆಕ್ಕವನ್ನು ಸೇರಿಸಿಲ್ಲ. ಅದರ ಹೊರತು 11 ಸಾವಿರ ಕೋಟಿಯಷ್ಟು ರಾಜಕೀಯ ಪಕ್ಷಗಳು ಹಣವನ್ನು ಚೆಲ್ಲಿವೆ ಎಂದು ಸಂಸ್ಥೆ ಸ್ಪಷ್ಟೀಕರಣ ನೀಡಿದೆ. ಕಳೆದ 20 ವರ್ಷಗಳಿಂದ ಸಿಎಂಎಸ್​ ಸಂಸ್ಥೆ, ಚುನಾವಣೆಯ ಹಣದ ಖರ್ಚಿನ ಕುರಿತು ಸಮೀಕ್ಷೆ ನಡೆಸುತ್ತಿದೆ. ಇದರಲ್ಲಿ ಪ್ರತಿಬಾರಿಯ ಚುನಾವಣೆಯಲ್ಲಿಯೂ ಕರ್ನಾಟಕದಲ್ಲಿ ಭಾರೀ ಹಣದ ಹೊಳೆಯನ್ನೇ ಹರಿಸಲಾಗುತ್ತದೆ ಅಂತ ಸಂಸ್ಥೆ ಹೇಳಿದೆ.

ಭಾರತದಲ್ಲಿಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಹಣವನ್ನು ಚುನಾವಣೆಗಾಗಿ ವ್ಯಯಿಯಲಾಗುತ್ತದೆ. ಇನ್ನು ಈ ಬಾರಿಯ 2019 ಲೋಕಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು 30 ಸಾವಿರ ಕೋಟಿ ಖರ್ಚು ಮಾಡಲಿವೆ ಅಂದಾಜಿಸಲಾಗಿತ್ತು. ಆದರೆ, ಇದೀಗ ಈ ಕರ್ನಾಟಕ ಚುನಾವಣೆಯ ಪರಿಣಾಮದಿಂದ 50,000-60,000 ಸಾವಿರ ಕೋಟಿಯಷ್ಟು ಹಣ ವ್ಯಯಿಸಬಹುದು. ಇದು 2014 ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಎಂದು ಸಿಎಂಎಸ್​ ಸಂಸ್ಥೆಯ ಸಿಬ್ಬಂದಿ ಭಾಸ್ಕರ್​ ರಾವ್​ ತಿಳಿಸಿದ್ದಾರೆ.

ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಬಾ ಚುನಾವಣೆ ನಡೆದಿದೆ. ಮೇ.12 ಮತದಾನ ನಡೆದಿದ್ದು, ನಾಳೆ 15 ರಂದು ಮತ ಎಣಿಕೆ ನಡೆಯಲಿದ್ದು, ಈ ಮಧ್ಯೆ ಸಿಎಂಎಸ್ ಸಂಸ್ಥೆ ನಿಡಿದ ಖರ್ಚಿನ ವರದಿ ಜನರನ್ನ ಬೆಚ್ಚಿಬೀಳಿಸಿದೆ.  ಚುನಾವಣೆಯಲ್ಲಿ ಪಕ್ಷಗಳಿಗಿಂತ ಅಭ್ಯರ್ಥಿಗಳಿಂದಲೇ ಶೇ. 75 ರಷ್ಟು ಹಣ ಖರ್ಚು ಮಾಡಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಸಿಎಂಎಸ್​ ಸಂಸ್ಥೆ ಸ್ಪಷ್ಟವಾಗಿ ಉಲ್ಲೇಖ ಮಾಡಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷಗಳಿಂದ ಶೇ. 20-30 ರಷ್ಟು ಹೆಚ್ಚು ಹಣ ವ್ಯಯಿಸಲು ಸಿದ್ಧತೆ  ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳು ಶೇ.50-60 ರಷ್ಟು ಹಣದ ಹೊಳೆ ಹರಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ನಮ್ಮ ಅಂದಾಜಿಗಿಂತ ಲೋಕಸಭಾ ಚುನಾವಣೆಯಲ್ಲಿ ದುಪ್ಪಟ್ಟು ಹಣ ಖರ್ಚಾಗಲಿದ್ದು, ಸುಮಾರು 12,000- 20,000 ಎಂದು ಹೇಳಲಾಗುತ್ತಿದೆ.
Loading...

ಕರ್ನಾಟಕ ಚುನಾವಣೆಯನ್ನು ಆಯೋಗ ಉಚಿತ ಮತ್ತು ನ್ಯಾಯಯುತವಾಗಿ ಮಾಡಲು ಯತ್ನಿಸಿತ್ತು. ಆದರೆ, ಒಂದು ಕಡೆ ಸಣ್ಣ ಮೊತ್ತದ ಹಣವನ್ನು ಸಿಗುವಾಗೇ ಮಾಡಿ, ರಾಜಕೀಯ ಪಕ್ಷಗಳು ಬೇಕಾದಷ್ಟು ಹಣವನ್ನು ಹಂಚಿದ್ದಾರೆ. ಚುನಾವಣಾ ಆಯೋಗ ವಶಪಡಿಸಿಕೊಂಡಿದ್ದು, ಸಣ್ಣ ಪ್ರಮಾಣದ ಅಕ್ರಮ ಹಣ ಎಂದು ಸಂಸ್ಥೆ ಹೇಳಿದೆ.

 
First published:May 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ