LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ; ದಾಖಲೆಯ ಕುಸಿತ ಕಂಡ ಅಡುಗೆ ಅನಿಲ

Gas Cylinder Rate: ಚೆನ್ನೈನಲ್ಲಿ ಎಲ್​ಪಿಜಿ ದರ 192 ರೂ, ದೆಹಲಿಯಲ್ಲಿ 160 ರೂ, ಕೊಲ್ಕತಾದಲ್ಲಿ 190 ರೂ. ಕಡಿತಗೊಂಡಿದೆ.

news18-kannada
Updated:May 4, 2020, 11:08 AM IST
LPG Cylinder Price: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ; ದಾಖಲೆಯ ಕುಸಿತ ಕಂಡ ಅಡುಗೆ ಅನಿಲ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ (ಮೇ 4): ಇಂದಿನಿಂದ ದೇಶಾದ್ಯಂತ 3ನೇ ಬಾರಿಗೆ ಲಾಕ್​ಡೌನ್​ ಘೋಷಿಸಲಾಗಿದೆ. ಲಾಕ್​ಡೌನ್​ ವೇಳೆ ಜನರ ಹೊರೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಎಲ್​ಪಿಜಿ ಸಿಲಿಂಡರ್​ಗಳ ಮೇಲಿನ ದರವನ್ನು ಬರೋಬ್ಬರಿ 192 ರೂ. ಕಡಿತಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದ ಮಧ್ಯಮ ಮತ್ತು ಬಡ ವರ್ಗದವರು ನಿಟ್ಟುಸಿರು ಬಿಡುವಂತಾಗಿದೆ.

ಸಬ್ಸಿಡಿರಹಿತ ಸಿಲಿಂಡರ್​ಗಳ ಬೆಲೆಯನ್ನು ಕೇಂದ್ರ ಸರ್ಕಾರ 192 ರೂ. ಕಡಿಮೆಗೊಳಿಸಿದೆ. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ಎಲ್​ಪಿಜಿ ಸಿಲಿಂಡರ್​ ಬೆಲೆಯನ್ನು ಕಡಿತಗೊಳಿಸಿದಂತಾಗಿದೆ. ಭಾರತೀಯ ಅನಿಲ ಮತ್ತು ಗ್ಯಾಸ್​ ಕಂಪನಿಗಳ ಉತ್ಪಾದನೆಯ ಮೌಲ್ಯ ಕಡಿಮೆ ಆಗಿರವುದರಿಂದ ಸಿಲಿಂಡರ್ ಬೆಲೆಯನ್ನು ದಾಖಲೆಯ ಮೊತ್ತಕ್ಕೆ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ: Lockdown 3.0: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ; ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ವಾಹನಗಳು

14.2 ಕೆ.ಜಿ. ಸಿಲಿಂಡರ್​ಗಳ ಬೆಲೆಯನ್ನು ಗಮನಿಸುವುದಾದರೆ ದೆಹಲಿಯಲ್ಲಿ 744 ರೂ. ಇದ್ದ ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ ಬೆಲೆ 581.50 ರೂ. ಆಗಿದೆ. ಮುಂಬೈನಲ್ಲಿ 714.50 ಇದ್ದ ಬೆಲೆ ಈಗ 579 ರೂ. ಆಗಿದೆ. ಕೊಲ್ಕತಾದಲ್ಲಿ 774.50 ರೂ.ನಿಂದ 585.50 ರೂ.ಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ 761.50 ರೂ.ನಿಂದ 569.50 ರೂ.ಗೆ ಎಲ್​ಪಿಜಿ ದರ ಇಳಿಕೆಯಾಗಿದೆ. ಈ ಮೂಲಕ ಚೆನ್ನೈನಲ್ಲಿ ಎಲ್​ಪಿಜಿ ದರ 192 ರೂ, ದೆಹಲಿಯಲ್ಲಿ 160 ರೂ, ಕೊಲ್ಕತಾದಲ್ಲಿ 190 ರೂ. ಕಡಿತಗೊಂಡಿದೆ.
First published: May 4, 2020, 9:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading