• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Hijab Row: ಪಿಯುಸಿ ಪರೀಕ್ಷೆ ವೇಳೆ ಹಿಜಾಬ್‌ ಧರಿಸಲು ಅನುಮತಿಗೆ ಅರ್ಜಿ: ವಿಚಾರಣೆಗೆ ಸಮ್ಮತಿ ನೀಡಿದ ಸುಪ್ರೀಂಕೋರ್ಟ್‌

Hijab Row: ಪಿಯುಸಿ ಪರೀಕ್ಷೆ ವೇಳೆ ಹಿಜಾಬ್‌ ಧರಿಸಲು ಅನುಮತಿಗೆ ಅರ್ಜಿ: ವಿಚಾರಣೆಗೆ ಸಮ್ಮತಿ ನೀಡಿದ ಸುಪ್ರೀಂಕೋರ್ಟ್‌

ಹಿಜಾಬ್‌

ಹಿಜಾಬ್‌

ಪರೀಕ್ಷೆ ಸಮೀಪದಲ್ಲೇ ಇರೋದರಿಂದ ವಿದ್ಯಾರ್ಥಿನಿಯರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದು, ಅರ್ಜಿದಾರರ ಮನವಿಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿದ್ದಾರೆ.

  • News18 Kannada
  • 5-MIN READ
  • Last Updated :
  • New Delhi, India
  • Share this:

ಹೊಸದಿಲ್ಲಿ: ಕಳೆದ ವರ್ಷ ಕರ್ನಾಟಕದ ಶೈಕ್ಷಣಿಕ ವಲಯವನ್ನೇ ಅಕ್ಷರಶಃ ನಡುಗಿಸಿದ್ದ ಹಿಜಾಬ್ ವಿವಾದ (Hijab Row) ರಾಜ್ಯವನ್ನು ರಾಷ್ಟ್ರ ಮಾತ್ರವಲ್ಲದೇ ವಿದೇಶ ಮಟ್ಟದಲ್ಲೂ ನೋಡುವಂತೆ ಮಾಡಿತ್ತು. ಉಡುಪಿಯ (Udupi) ಸರ್ಕಾರಿ ಪಿಯು ಕಾಲೇಜಿನಲ್ಲಿ ಉಂಟಾದ ಹಿಜಾಬ್‌ ಕುರಿತ ಸಣ್ಣ ವಿವಾದವೊಂದು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಕ್ಕೂ ವ್ಯಾಪಿಸುವಂತೆ ಮಾಡಿತ್ತು. ಇದೀಗ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲುಅನುಮತಿ ನೀಡುವಂತೆ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ (Muslim girls) ಗುಂಪೊಂದು ಸುಪ್ರೀಂ ಕೋರ್ಟ್‌ (Supreme Court) ಕದ ತಟ್ಟಿದೆ. ಸದ್ಯದಲ್ಲೇ ಪರೀಕ್ಷೆಯೂ ಇರುವುದರಿಂದ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ದು, ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.


ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಶಾಲಾ ಕಾಲೇಜುಗಳಲ್ಲಿ ತರಗತಿ ನಡೆಯುವ ವೇಳೆ ಹಿಜಾಬ್ ಬಳಕೆಯನ್ನು ನಿಷೇಧ ಮಾಡಬೇಕು ಎಂಬ ತೀರ್ಪು ನೀಡಿದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲೂ ಕೂಡ ದ್ವಿಸದಸ್ಯ ಪೀಠದಿಂದ ವಿಭಿನ್ನ ತೀರ್ಪು ಬಂದ ಕಾರಣ ಮುಂದಿನ ಆದೇಶದವರೆಗೆ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನೇ ಮುಂದುವರಿಸುವಂತೆ ನಿರ್ದೇಶಿಸಲಾಗಿತ್ತು. ಇದೀಗ ಮಾರ್ಚ್ 9ರಿಂದ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಹಾಲ್‌ಗೆ ಹಿಜಾಬ್ ಧರಿಸಲು ಅನುಮತಿ ಇಲ್ಲದೇ ಇರೋದ್ರಿಂದ ಅನುಮತಿ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಸುಪ್ರೀಂಗೆ ಮನವಿ ಸಲ್ಲಿಸಿದ್ದಾರೆ.


ಇದನ್ನೂ ಓದಿ: Karnataka Major Incidents: ಹಿಜಾಬ್ ವಿವಾದದ ಬಲೆ, ಹರ್ಷ-ಪ್ರವೀಣ್ ಕೊಲೆ! 2022ರಲ್ಲಿ ಕರ್ನಾಟಕದ ಪ್ರಮುಖ ಘಟನೆ, ವಿವಾದಗಳು


ನ್ಯಾಯಮೂರ್ತಿ ಸಮ್ಮತಿ


ಪರೀಕ್ಷೆ ಸಮೀಪದಲ್ಲೇ ಇರೋದರಿಂದ ವಿದ್ಯಾರ್ಥಿನಿಯರು ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದು, ಅರ್ಜಿದಾರರ ಮನವಿಗೆ ಸ್ಪಂದಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತುರ್ತು ವಿಚಾರಣೆಗೆ ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜಿದಾರರ ಪರ ವಕೀಲ ಶಾದನ್ ಫರಾಸತ್ ಅವರು, ವಿದ್ಯಾರ್ಥಿನಿಯರು ಶಿರವಸ್ತ್ರಗಳನ್ನು ಧರಿಸುತ್ತಿದ್ದಾರೆ. ಅವರು ಶಿರವಸ್ತ್ರ ಧರಿಸಿದ್ದರೆ ಪರೀಕ್ಷಾ ಕೊಠಡಿ ಒಳಗೆ ಪ್ರವೇಶ ನೀಡುವುದಿಲ್ಲ. ಈ ಒಂದು ವಿಚಾರಕ್ಕೆ ಸೀಮಿತಗೊಳಿಸಿ, ಸೋಮವಾರ ಅಥವಾ ಶುಕ್ರವಾರದಂದು ಕೋರ್ಟ್ ಅದನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: Hijab In Exam Hall: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಬ್ಯಾನ್ ಮಾಡಿದ ಸೌದಿ ಅರೇಬಿಯಾ! ವಿದ್ಯಾರ್ಥಿಗಳ ವಿರೋಧ


ಅಲ್ಲದೇ, ತರಗತಿಯಲ್ಲಿ ಹಿಜಾಬ್ ಧರಿಸಲು ನಿಷೇಧ ವಿಧಿಸಿದ್ದರಿಂದ ಅನೇಕ ವಿದ್ಯಾರ್ಥಿನಿಯರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರ್ಗಾವಣೆ ಆಗಿದ್ದಾರೆ. ಆದರೆ ಅವರು ಪರೀಕ್ಷೆಗಳನ್ನು ಸರ್ಕಾರಿ ಸಂಸ್ಥೆಗಳಲ್ಲಿಯೇ ಬರೆಯಬೇಕಿದೆ. ಹೀಗಾಗಿ ಹಿಜಾಬ್‌ಗೆ ಅನುಮತಿ ನೀಡದೆ ಇದ್ದರೆ ಅವರು ಮತ್ತೊಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು, ಹಿಜಾಬ್‌ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ಶಾಲೆಗಳಲ್ಲಿ ಇಂಥದ್ದೇ ಸಮವಸ್ತ್ರ ಧರಿಸುವಂತೆ ಆದೇಶ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ನ್ಯಾ. ಹೇಮಂತ್ ಗುಪ್ತಾ ಹೇಳಿದ್ದರು.


ಇದನ್ನೂ ಓದಿ: Hijab Row: ಹಿಜಾಬ್ ನಿಷೇಧದ ಬಳಿಕ ಕಾಲೇಜ್ ತೊರೆದವರ ಸಂಖ್ಯೆ ಎಷ್ಟು? PUCL ವರದಿಯಲ್ಲಿ ಮಾಹಿತಿ


ಆದರೆ ಇನ್ನೊಬ್ಬ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು, ಹಿಜಾಬ್ ಆಯ್ಕೆಯ ವಿಚಾರವಾಗಿರುವುದರಿಂದ ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದ್ದರು.

Published by:Avinash K
First published: