ಹೈದರಾಬಾದ್: ದಿನೇ ದಿನೇ ದೇಶದಲ್ಲಿ ವೇಶ್ಯಾವಾಟಿಕೆ (Prostitution) ಹೆಚ್ಚಾಗುತ್ತಲೇ ಇದೆ. ಇದೀಗ ದೇಶದಲ್ಲಿ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುತ್ತಿರುವುದು ಯಾವ ರಾಜ್ಯದಲ್ಲಿ ಎಂದು ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರ (Maharashtra) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (Karnataka) ಎರಡನೇ ಸ್ಥಾನದಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ (Andrapradesh). ಹೌದು, ಈ ಮೂರು ರಾಜ್ಯಗಳಲ್ಲಿ ವೇಶ್ಯಾವಾಟಿಕೆ ವಿಸ್ತರಿಸುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ವೇಶ್ಯಾವಾಟಿಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಆಂಧ್ರ ಪ್ರದೇಶದಲ್ಲಿ ವಾರ್ಷಿಕವಾಗಿ ಶೇ.10ರಿಂದ 15ರಷ್ಟು ಏರಿಕೆಯಾಗುತ್ತಲೇ ಇದೆ. ಅದರಲ್ಲಿಯೂ ಈ ವೃತ್ತಿಗೆ ಇಳಿಯುವವರ ಸರಾಸರಿ ವಯಸ್ಸು 18 ರಿಂದ 40 ವರ್ಷದವರಾಗಿದ್ದಾರೆ.
ವೇಶ್ಯಾವಾಟಿಕೆ ವ್ಯಾಪಕವಾಗಿರುವುದರಿಂದ ಎಚ್ಐವಿ ಕೇಸ್ ಏರಿಕೆ
ಕೌಟುಂಬಿಕ ಸ್ಥಿತಿಗತಿಗಳು ಮತ್ತು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡ ಮಹಿಳೆಯರು ಈ ರೀತಿಯ ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ವೇಶ್ಯಾವಾಟಿಕೆ ವ್ಯಾಪಕವಾಗಿರುವುದರಿಂದ ಎಚ್ಐವಿ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ 3.94 ಲಕ್ಷ ಪ್ರಕರಣಗಳು, ಕರ್ನಾಟಕದಲ್ಲಿ 2.76 ಲಕ್ಷ ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 2.09 ಲಕ್ಷ ಪ್ರಕರಣಗಳನ್ನು ಹೊಂದಿದೆ.
ಆಂಧ್ರಪ್ರದೇಶದಲ್ಲಿ ಲೈಂಗಿಕ ಕಾರ್ಯಕರ್ತರು ಹೇರಳವಾಗಿದ್ದಾರೆ. ಎಪಿಯಲ್ಲಿ 1.33 ಲಕ್ಷ ಲೈಂಗಿಕ ಕಾರ್ಯಕರ್ತೆಯರಿದ್ದಾರೆ ಎಂದು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮತ್ತು ಸೇವಾ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಯಿಂದ ಈ ವಿಚಾರ ಬೆಳಕಿಗೆ ಬಂದಿವೆ. ಲೈಂಗಿಕ ಕಾರ್ಯಕರ್ತರ ಸಂಖ್ಯೆ ಅನಂತಪುರ ಜಿಲ್ಲೆಯಲ್ಲಿ ಇದು ಹೆಚ್ಚಾಗಿದೆ. ಆದಾದ ಬಳಿಕ ಕರ್ನೂಲ್, ಚಿತ್ತೂರು ಜಿಲ್ಲೆಯಲ್ಲಿ ಹೆಚ್ಚು ಲೈಂಗಿಕ ಕಾರ್ಯಕರ್ತೆಯರಿದ್ದಾರೆ.
ಜೀವನೋಪಾಯಕ್ಕಾಗಿ ಈ ವೃತ್ತಿಗೆ ಇಳಿದಿದ್ದಾರೆ
ಜೀವನೋಪಾಯಕ್ಕಾಗಿ ಅಥವಾ ರಾಯಲಸೀಮಾ ಜಿಲ್ಲೆಗಳಲ್ಲಿ ಅನೇಕ ಜನರು ಈ ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ರಾಯಲಸೀಮೆಯಲ್ಲಿ ಬೆಂಗಳೂರು, ಹೈದರಾಬಾದ್, ಚೆನ್ನೈನಲ್ಲಿ ರಾಷ್ಟ್ರೀಯ ಹೆದ್ದಾರಿಗಳಿರುವುದು ಕೂಡ ಇದಕ್ಕೆ ಕಾರಣ. 1,450 ಲೈಂಗಿಕ ಕಾರ್ಯಕರ್ತರು ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ವೃತ್ತಿಯನ್ನು ಬಿಡುತ್ತಿಲ್ಲ. ಔಷಧ ಬಳಸುತ್ತಲೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ಮಹಾರಾಷ್ಟ್ರ 59,785 ಸ್ಥಳೀಯ ಲೈಂಗಿಕ ಕಾರ್ಯಕರ್ತರನ್ನು ಹೊಂದಿದೆ, ದೆಹಲಿಯಲ್ಲಿ 46,786 ಮತ್ತು ಮಿಜೋರಾಂನಲ್ಲಿ 833 ಕಡಿಮೆ ಸಂಖ್ಯೆಯ ಲೈಂಗಿಕ ಕಾರ್ಯಕರ್ತರಿದ್ದಾರೆ.
ಹೆಚ್ಚಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿರೋ ವಲಸೆ ಕಾರ್ಮಿಕರು
ನೆರೆಯ ರಾಜ್ಯಗಳಿಂದ 11,639 ಜನರು ವಲಸೆ ಬಂದಿದ್ದು, ಆಂಧ್ರಪ್ರದೇಶದಲ್ಲಿ ವೇಶ್ಯೆಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಒಡಿಶಾ, ಛತ್ತೀಸ್ಗಢ, ಅಸ್ಸಾಂ, ಬಿಹಾರ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಿಂದ ಬಂದಿದ್ದಾರೆ. ಮಹಾರಾಷ್ಟ್ರಕ್ಕೆ ವಿವಿಧ ರಾಜ್ಯಗಳಿಂದ 6.06 ಲಕ್ಷ ಜನರು ವಲಸೆ ಬಂದಿದ್ದು, ಎಲ್ಲರೂ ಲೈಂಗಿಕ ಕೆಲಸದಲ್ಲಿ ತೊಡಗಿದ್ದಾರೆ. ಇನ್ನೂ ಗುಜರಾತ್ನಲ್ಲಿ 2.08 ಲಕ್ಷ ಮತ್ತು ದೆಹಲಿಯಲ್ಲಿ 1.85 ಲಕ್ಷ ಜನರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ.
ಎಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಸೆಪ್ಟೆಂಬರ್ 2021ರ ಜನವರಿ ವೇಳೆ ನಡೆಸಿದ ಸಮೀಕ್ಷೆ ವೇಳೆ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿತ್ತು. ದೇಶಾದ್ಯಂತ 8.25 ಲಕ್ಷ ಮಹಿಳಾ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಅದರಲ್ಲಿ 1.33 ಲಕ್ಷ ಜನರಿರುವ ಮೂಲಕ ಆಂಧ್ರ ಪ್ರದೇಶ ಮೊದಲ ಸ್ಥಾನದಲ್ಲಿತ್ತು.
ಇದನ್ನೂ ಓದಿ: Prostitution: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಲಸಿಗರಿಂದ ವೇಶ್ಯಾವಾಟಿಕೆ: ಪಿಂಪ್ಗಳು ಅರೆಸ್ಟ್
ಜನವರಿ ಮತ್ತು ಸೆಪ್ಟೆಂಬರ್ 2021 ರ ನಡುವೆ ನಡೆಸಿದ ಅಧ್ಯಯನದಲ್ಲಿ ಎಪಿ ಮೊದಲ ಸ್ಥಾನದಲ್ಲಿದೆ. ದೇಶಾದ್ಯಂತ 8.25 ಲಕ್ಷ ಮಹಿಳಾ ಲೈಂಗಿಕ ಕಾರ್ಯಕರ್ತೆಯರಿದ್ದಾರೆ. ಅದರಲ್ಲಿ 1.33 ಲಕ್ಷ ಜನರೊಂದಿಗೆ ಎಪಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1.16 ಲಕ್ಷ, ತೆಲಂಗಾಣದಲ್ಲಿ 1 ಲಕ್ಷ ಮತ್ತು ತಮಿಳುನಾಡಿನಲ್ಲಿ 65 ಸಾವಿರ ಮಂದಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶದಲ್ಲಿ ಪ್ರಸ್ತುತ 65 ಸಾವಿರ ಲೈಂಗಿಕ ಕಾರ್ಯಕರ್ತರು ವಾಸಿಸುತ್ತಿದ್ದಾರೆ. 2022ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಂಡಿರುವುದು ಆತಂಕಕಾರಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ