Shocking News: ತಮಿಳು ಕಲಿ, ಪೂಜೆ ಮಾಡು, ಚೆನ್ನಾಗಿ ತಿನ್ನು; ಅತ್ತೆ ಹೀಗಂದಿದ್ದಕ್ಕೆ ಕೋರ್ಟ್ ಮೆಟ್ಟಲೇರಿದ ಸೊಸೆ!

ದೂರುದಾರರು ತನ್ನ ಸಹೋದರಿಗೆ ಇಮೇಲ್‌ನಲ್ಲಿ ತಿಳಿಸಿರುವಂತೆ ಆಕೆಯ ಅತ್ತೆಯು ಚೆನ್ನಾಗಿ ಆಹಾರ ಸೇವಿಸುವಂತೆ ಮತ್ತು ಪೂಜೆಯನ್ನು ಮಾಡುವಂತೆ ಹೇಳುತ್ತಿದ್ದರು. ಇದನ್ನು ನೋಡುವಾಗ ದೂರುದಾರರು ಸಂಪ್ರದಾಯಬದ್ಧ ಕುಟುಂಬದಲ್ಲಿ ಪೂಜೆ ಮಾಡಲು ತಯಾರಿರಲಿಲ್ಲ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ದೂರುದಾರರ ಪತ್ನಿಯು (Wife) ಕ್ಷುಲ್ಲಕ ಅಂಶಗಳನ್ನು ದೊಡ್ಡ ಸಮಸ್ಯೆಯಾಗಿ ಪರಿವರ್ತಿಸಿದ್ದಾರೆ. ಇದರಿಂದಲೇ ಪ್ರಕರಣವೊಂದು ಗಂಭೀರವಾಗಿದೆ ಎಂದು ಗಮನಿಸಿದ ಕರ್ನಾಟಕ ಉಚ್ಛ ನ್ಯಾಯಾಲಯವು (Karnataka High Court)  ಯುಎಸ್ ಮೂಲದ ಪತಿ (Husband) ಹಾಗೂ ಅವರ 77 ರ ಹರೆಯದ ತಾಯಿಯನ್ನು ದೋಷಮುಕ್ತಗೊಳಿಸಿದೆ. ಅಮೆರಿಕಾದಲ್ಲಿ (America) ಉದ್ಯೋಗ ಪಡೆಯಲು ಹೆಚ್ಚು ಓದುವಂತೆ ಪತಿಯು ತನಗೆ ಹೇಳುತ್ತಿದ್ದುದಲ್ಲದೆ ಪತಿಯ ತಾಯಿ ಮಗುವನ್ನು ಹೊಂದುವಂತೆ ಹಾಗೂ ತಮಿಳು ಭಾಷೆ ಕಲಿಯುವಂತೆ ಒತ್ತಡ ಹೇರುತ್ತಿದ್ದರು ಎಂಬುದಾಗಿ ದೂರುದಾರರಾದ ಪತ್ನಿಯು ತನ್ನ ಪತಿ ಹಾಗೂ ಅತ್ತೆಯನ್ನು ಮೇಲೆ ದೂರು ನೀಡಿ ಆರೋಪಿಸಿದ್ದಾರೆ.

ತೀರ್ಪು ಏನಾಗಿತ್ತು? 
ಸಪ್ಟೆಂಬರ್ 2013 ರಲ್ಲಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಐಪಿಸಿ ಸೆಕ್ಷನ್ 498-ಎ (ಕ್ರೌರ್ಯ) ಅಡಿಯಲ್ಲಿ ವರದಕ್ಷಿಣೆ ನಿಷೇಧ ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ವೈದ್ಯರು ಹಾಗೂ ಅವರ ತಾಯಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಮಗನಿಗೆ ರೂ 1 ಲಕ್ಷ ದಂಡದೊಂದಿಗೆ ಒಂದು ವರ್ಷದ ಶಿಕ್ಷೆ ಜೊತೆಗೆ ತಾಯಿಗೆ ರೂ 10,000 ದಂಡದೊಂದಿಗೆ ಆರು ತಿಂಗಳ ಶಿಕ್ಷೆ ವಿಧಿಸಿತ್ತು.

ಡಿಸೆಂಬರ್ 1, 2016 ರಂದು, 51 ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೃಢಪಡಿಸಿತು. ಎರಡೂ ತೀರ್ಪುಗಳನ್ನು ಕ್ರಿಮಿನಲ್ ಪರಿಷ್ಕರಣೆ ಅರ್ಜಿಗಳ ಮೂಲಕ ಹೈಕೋರ್ಟ್ ಮುಂದೆ ಪ್ರಶ್ನಿಸಲಾಯಿತು.

ನ್ಯಾಯಮೂರ್ತಿಗಳು ಹೇಳಿದ್ದಿಷ್ಟು
ವೈದ್ಯರು ಮತ್ತು ಅವರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳು, ವಿಚಾರಣಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯವು ದೂರುದಾರರ ಹೇಳಿಕೆಗಳನ್ನು ನಿರ್ಲಕ್ಷಿಸುವ ಮೂಲಕ ಪುರಾವೆಗಳನ್ನು ಒದಗಿಸದ ಹೇಳಿಕೆಯೊಂದಿಗೆ ಪ್ರಾಸಿಕ್ಯೂಷನ್ ಸಾಕ್ಷಿಗಳು ಸರಳ, ಅಸ್ಪಷ್ಟ ಮತ್ತು ಆಪಾದಿತ ಘಟನೆಗಳ ವಿವರಗಳನ್ನು ಹೊಂದಿಲ್ಲ ಎಂಬುದಾಗಿ ತೀರ್ಮಾನಿಸಿದೆ.

ಈ ಬಗ್ಗೆ ನ್ಯಾಯಾಧೀಶರು ಏನು ಹೇಳಿದ್ದಾರೆ?
ದೂರುದಾರರು ಹೇಳಿರುವಂತೆ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಿರಲಿಲ್ಲ ಮತ್ತು ಕಿರಿಯ ಸಹೋದರಿಯೊಂದಿಗೆ ದೂರುದಾರರು ಇಮೇಲ್‌ಗಳ ಮೂಲಕ ಮಾತ್ರವೇ ಸಂವಹನ ನಡೆಸುತ್ತಿದ್ದರು ಎಂದು ಹೇಳಿದ್ದರು, ಹಾಗಿದ್ದರೆ ವಿವರಗಳನ್ನು ಸಮಾಲೋಚಿಸಲು ಪ್ರಾಸಿಕ್ಯೂಶನ್ ಪ್ರಕಾರ ಯಾರು ಸಮರ್ಥರು ಎಂಬುದನ್ನು ವಿಚಾರಣಾ ನ್ಯಾಯಾಲಯವು ಪರಿಶೀಲಿಸಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

ದೂರುದಾರರು ತನ್ನ ಸಹೋದರಿಗೆ ಇಮೇಲ್‌ನಲ್ಲಿ ತಿಳಿಸಿರುವಂತೆ ಆಕೆಯ ಅತ್ತೆಯು ಚೆನ್ನಾಗಿ ಆಹಾರ ಸೇವಿಸುವಂತೆ ಮತ್ತು ಪೂಜೆಯನ್ನು ಮಾಡುವಂತೆ ಹೇಳುತ್ತಿದ್ದರು. ಇದನ್ನು ನೋಡುವಾಗ ದೂರುದಾರರು ಸಂಪ್ರದಾಯಬದ್ಧ ಕುಟುಂಬದಲ್ಲಿ ಪೂಜೆ ಮಾಡಲು ತಯಾರಿರಲಿಲ್ಲ.

ಕ್ಷುಲ್ಲಕ ವಿಷಯ ದೊಡ್ಡ ಪ್ರಕರಣವಾಗಿದ್ದು ಹೇಗೆ? 
ಇನ್ನು ದೂರುದಾರರು ಮಗುವನ್ನು ಹೊಂದುವ ವಿಷಯಕ್ಕೆ ಮನೆಯಲ್ಲಿರುವ ಹಿರಿಯರು ಸಲಹೆ ನೀಡುವುದು ಸೂಕ್ತವೇ ಆಗಿದೆ. ಯುಎಸ್‌ನಲ್ಲಿದ್ದರೂ ಮಕ್ಕಳು ಬೇಕೆಂಬ ಹಂಬಲ ಎಲ್ಲಾ ಪೋಷಕರಿಗೂ ಅವರ ಹಿರಿಯರಿಗೂ ಇರುತ್ತದೆ ಎಂಬುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಇಮೇಲ್‌ನಲ್ಲಿ ತಿಳಿಸಿರುವಂತೆ ತನ್ನ ಅತ್ತೆಯು ತನಗೆ ಹೆಚ್ಚು ಆಹಾರ ನೀಡುತ್ತಾರೆ. ತಾನು ಆಹಾರ ಸೇವಿಸದೇ ಇದ್ದರೆ ಉಪವಾಸ ಇರಬೇಕಾಗುತ್ತದೆ ಎಂಬುದಾಗಿ ಉಲ್ಲೇಖಿಸಲಾಗಿದೆ. ಅತ್ತೆಗೆ ಸೊಸೆಯ ಮೇಲಿರುವ ಪ್ರೀತಿ ಹಾಗೂ ಕಾಳಜಿಯನ್ನು ಬೇರೆ ಬೇರೆ ಮಾತುಗಳಲ್ಲಿ ವ್ಯಕ್ತಪಡಿಸಲಾಗಿದ್ದು ಇದು ದೂರುದಾರಳಾದ ಸೊಸೆಗೆ ಚಿತ್ರಹಿಂಸೆಯಾಗಿದೆ.

ಇದನ್ನೂ ಓದಿ: Mobile Chatting: ಚಾಟ್ ಮಾಡ್ರೋ ಚಾಟ್ ಮಾಡಿ! ಮೊಬೈಲ್ ಚಾಟಿಂಗ್‌ನಲ್ಲಿ ಕನ್ನಡಿಗರೇ ನಂಬರ್ ಒನ್!

ಹೆಚ್ಚಿನ ಕುಟುಂಬಗಳಲ್ಲಿ ಸಣ್ಣ ಪುಟ್ಟ ಬೇಕು ಬೇಡಗಳು, ವಿರಸಗಳು, ಸಾಮಾನ್ಯವಾಗಿರುತ್ತವೆ. ದೂರುದಾರರು ಸಣ್ಣ ವಿಷಯಗಳನ್ನು ದೊಡ್ಡದಾಗಿ ಪರಿಗಣಿಸಿರುವುದು ಅವರ ಸೂಕ್ಷ್ಮ ಮನಸ್ಸಿನ ಭಾವನೆಗಳನ್ನು ಪ್ರದರ್ಶಿಸಿದೆ. ಹೀಗಾಗಿಯೇ ಕ್ಷುಲ್ಲಕ ವಿಷಯ ಅತಿದೊಡ್ಡ ಪ್ರಕರಣವಾಗಿ ಬದಲಾಗಿದೆ ಎಂಬುದಾಗಿ ನ್ಯಾಯಾಧೀಶರು ಗಮನಿಸಿದ್ದಾರೆ. ಒಟ್ಟಾರೆಯಾಗಿ ಈ ಪ್ರಕರಣವು ಅಂತ್ಯ ಕಂಡಿದ್ದು ಡಾಕ್ಟರ್ ಹಾಗೂ ಅವರ ತಾಯಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
Published by:Ashwini Prabhu
First published: